ನವದೆಹಲಿ: ಲಿಂಗ ಪರಿವರ್ತನೆ ಮಾಡಿಕೊಂಡ ಐಆರ್‌ಎಸ್ ಅಧಿಕಾರಿಯೊಬ್ಬರಿಗೆ ತಮ್ಮ ಅಧಿಕೃತ ದಾಖಲೆಗಳಲ್ಲಿ ಹೆಸರು ಹಾಗೂ ಲಿಂಗ ಬದಲಾಯಿಸಿಕೊಳ್ಳಲು ಕೇಂದ್ರ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ಹಣಕಾಸು ಇಲಾಖೆಯಲ್ಲಿ ಈ ರೀತಿಯ ನಿರ್ಧಾರ ಕೈಗೊಂಡಿದ್ದು ಇದೇ ಮೊದಲ ಐತಿಹಾಸಿಕ ಎಂದು ಹೇಳಲಾಗಿದೆ.
ಕೇಂದ್ರ ಹಣಕಾಸು ಸಚಿವಾಲಯದ ಸುಂಕ ಮತ್ತು ನೇರ ತೆರಿಗೆ ಇಲಾಖೆಯ ಹೈದರಾಬಾದ್ ಪ್ರಾದೇಶಿಕ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಎಂ. ಅನಸೂಯ ಎನ್ನುವ ಮೂಲ ಹೆಸರಿನ ಅಧಿಕಾರಿ ಹೆಸರು ಈಗ ಅನುಕದೀರ್ ಸೂರ್ಯ ಎಂದು ಬದಲಾಯಿಸಿಕೊಂಡಿದ್ದಾರೆ. ಲಿಂಗ ಮಹಿಳೆ ಎಂದಿದ್ದುದನ್ನು ಪುರುಷ ಎಂದು ಬದಲಾಯಿಸಲಾಗಿದೆ.
ಸೂರ್ಯ ಅವರು ಮೂಲತಃ ತಮಿಳುನಾಡಿನವರಾಗಿದ್ದು, ಮದ್ರಾಸ್ ಐಐಟಿಯಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್‌ನಲ್ಲಿ ಪದವಿ ಪಡೆದಿದ್ದಾರೆ. ಐಆರ್‌ಎಸ್ ತೇರ್ಗಡೆ ಹೊಂದಿ ಮೊದಲು ಚೆನ್ನೈನಲ್ಲಿ ವೃತ್ತಿ ಆರಂಭಿಸಿದ ಅವರು ಈಗ ಬಡ್ತಿ ಹೊಂದಿ ಹೈದರಾಬಾದ್‌ನಲ್ಲಿ ಉಪ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.