ಕೋಟೆಕಾರ್ : ಮಾಡೂರು ಶ್ರೀ ಪಾಡಾಂಗರ ಭಗವತೀ ಕ್ಷೇತ್ರದ ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಫೆಬ್ರವರಿ 5 ರಿಂದ 10 ರ ತನಕ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯು ಜ. 5 ರಂದು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಸುರೇಶ್ ಭಟ್ನಗರ, ಆಡಳಿತ ಮೊಕ್ತೇಸರರಾದ ಎನ್ ಜಯಪ್ರಕಾಶ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಉಮೇಶ್ಚಂದ್ರ ಯು, ಭಾರತೀಯ ತೀಯ ಸಮಾಜ ಉಳ್ಳಾಲದ ಅಧ್ಯಕ್ಷರಾದ ಜಯಂತ್ ಕೊಂಡಾಣ, ಗುರುಸ್ವಾಮಿ ಸುಂದರ ಮಾಡೂರು ಹಾಗೂ ಬ್ರಹ್ಮಕಲೋತ್ಸವ ಪ್ರಧಾನ ಕಾರ್ಯದರ್ಶಿಯಾದ ಅಶೋಕ್ ಉಚ್ಚಿಲ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಶೋಕ್ ಉಚ್ಚಿಲ ಸ್ವಾಗತಿಸಿ,ಪ್ರಚಾರ ಸಮಿತಿಯ ಪ್ರಧಾನ ಸಂಚಲರಕರಾದ ಪವನರಾಜ್ ಕೊಲ್ಯ ವಂದಿಸಿದರು.