Saturday, December 14, 2024
HomeUncategorizedಕಾಂಗ್ರೆಸ್ ಪಕ್ಷ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿರುವುದಕ್ಕೆ ಸಾಕ್ಷಿ ದಿನಕರ್ ಹೇರೂರು: ಅಮೃತ್ ಶಣೈ

ಕಾಂಗ್ರೆಸ್ ಪಕ್ಷ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿರುವುದಕ್ಕೆ ಸಾಕ್ಷಿ ದಿನಕರ್ ಹೇರೂರು: ಅಮೃತ್ ಶಣೈ

ಕಾಂಗ್ರೆಸ್ ಪಕ್ಷ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿರುವುದಕ್ಕೆ ಸಾಕ್ಷಿ. ಶ್ರೀ ದಿನಕರ್  ಹೇರೂರು–  ಶ್ರೀ ಅಮೃತ್ ಶಣೈ.   ಇಂದು ಉಡುಪಿ ಕಾಂಗ್ರೆಸ್ ಭವನದಲ್ಲಿ ನಡೆದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಉಡುಪಿ ಬ್ಲಾಕ್ ಕಾಂಗ್ರೆಸ್ ಇದರ ಸಮಿತಿಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಅಮೃತ್   ಇವರು ಕಾಂಗ್ರೆಸ್ ಪಕ್ಷವು ಯಾವತ್ತು ಕಾರ್ಯಕರ್ತರನ್ನು ಮರೆಯದೆ ಕಾರ್ಯಕರ್ತರ  ಬೆಂಗಾವಲಾಗಿ ಇದೆ ಎಂಬುದಕ್ಕೆ ಸಾಕ್ಷಿ ಮಾನ್ಯ ದಿನಕರ್ ಹೇರೂರು ಇವರು ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ ಇವರನ್ನು ಕಾಂಗ್ರೆಸ್ ಪಕ್ಷದ ರಾಜ್ಯಮಟ್ಟದ ನಾಯಕರು ಗುರುತಿಸಿ ಉಡುಪಿ  ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ನೀಡಿರುವುದು  ಶ್ಲಾಘನೀಯ ಎಂದು ಸಭೆಯನ್ನು ಉದ್ದೇಶಿಸಿ ತಿಳಿಸಿದರು  ಮಾನ್ಯ ಸುರೇಶ್ ಶೆಟ್ಟಿ ಬನ್ನಂಜೆ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ  ಪಂಚಾಯತ್ ರಾಜ್ ಸಂಘಟನೆಯ ಎಲ್ಲಾ ಪದಾಧಿಕಾರಿಗಳನ್ನು ಒಳಗೊಂಡು ನಗರಾಭಿಪ್ರಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ದಿನಕರ್ ಹೇರೂರವರನ್ನು  ಹೂಗುಚ್ಛ ನೀಡಿ ಅಭಿನಂದಿಸಿದರು.— ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶ್ರೀ ದಿನಕರ್ ಹೆರೂರ್  ಇವರು  ಉಡುಪಿ  ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಉಡುಪಿಯ ಜನತೆಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕಾರ್ಯನಿರ್ವಹಿಸಿ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವುದಾಗಿ ತಿಳಿಸಿ ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತ ರಿಗೆ ಪ್ರಪ್ರಥಮವಾಗಿ  ಸ್ಪಂದಿಸಿ ಫಲಪ್ರೇಕ್ಷೆ ಇಲ್ಲದೆ ತಾನು ದುಡಿಯುತ್ತೇನೆ ಎಂಬ ವಾಗ್ದಾನವನ್ನು ತಿಳಿಸಿದರು    ಈ ಸಭೆಯಲ್ಲಿ  ಪಂಚಾಯತ್ ಸಂಘಟನೆ ಪದಾಧಿಕಾರಿಗಳಾದ ಶ್ರೀಮತಿ  ರಮಾ ಕುಕ್ಕಿ ಕಟ್ಟೆ. ಶ್ರೀ ಸದಾನಂದ ಕಿನ್ನಿಮುಲ್ಕಿ . ಉದಯ ಪೂಜಾರಿ ಪಂದು ಬೆಟ್ಟು. ಯೋಗೀಶ್ ಮೂಡಬೆಟ್ಟು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶ್ರೀ ಮಹೇಶ್ ಮೂಡಬೆಟ್ಟು.  ಅನ್ವರ್ ಕುಕ್ಕಿಕಟ್ಟೆ. ಸಾಯಿ ರಾಜ್ ಕೋಟ್ಯಾನ್. ಸುಕನ್ಯಾ ಪೂಜಾರಿ. ಕಮಲ್ ಮಲ್ಪೆ. ಸುರೇಂದ್ರ ಆಚಾರ್ಯ ಕಾಡುಬೆಟ್ಟು. ಸುರೇಂದ್ರ ನಿಟ್ಟೂರು. ಉದಯ ಆಚಾರ್ಯ. ಸೂರ್ಯ ಬ್ರಹ್ಮಾವರ ಹಾಗೂ ಸಮಿತಿಯ ಸದಸ್ಯರು ಹಾಜರಿದ್ದ 
ಶ್ರೀ ಅನಿಲ್ ಕುಮಾರ್ ಹೆರ್ಗ ಇವರು ಧನ್ಯವಾದವನ್ನು ನೀಡಿದರು. ಶ್ರೀ ಸುರೇಶ್  ತೆಂಕನಿಡಿಯೂರು ಈ ಸಭೆಯ ಕಾರ್ಯಕ್ರಮ ನಿರ್ವಹಿಸಿದರು.

RELATED ARTICLES
- Advertisment -
Google search engine

Most Popular