Sunday, July 21, 2024
Homeಮೂಡುಬಿದಿರೆಮೂಡುಬಿದಿರೆ: ನೂತನ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾರಿಗೆ ಸನ್ಮಾನ

ಮೂಡುಬಿದಿರೆ: ನೂತನ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾರಿಗೆ ಸನ್ಮಾನ

ಮೂಡುಬಿದಿರೆ: ನೂತನ ವಿಧಾನ ಪರಿಷತ್ ಸದಸ್ಯರಾಗಿ ಎರಡನೇ ಬಾರಿಗೆ ಆಯ್ಕೆಯಾಗಿರುವ ಐವನ್ ಡಿಸೋಜಾರಿಗೆ ಮೂಡುಬಿದಿರೆ ಕೆಥೋಲಿಕ್ ಸಭಾ ಘಟಕದ ವತಿಯಿಂದ ಇಲ್ಲಿನ ಕೋರ್ಪುಸ್ ಕ್ರಿಸ್ತಿ ಚರ್ಚ್ ಸಭಾಂಗಣದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.
ಮೂಡುಬಿದಿರೆ ವಲಯ ಚರ್ಚ್‌ಗಳ ಮುಖ್ಯ ಧರ್ಮಗುರು ಒನಿಲ್ ಡಿಸೋಜಾ ಸಭೆಯ ಅಧ್ಯಕ್ಷತೆ ವಹಿಸಿ, ಐವನ್ ಡಿಸೋಜಾ ಅವರ ನಾಯಕತ್ವ, ವ್ಯಕ್ತಿತ್ವ, ತ್ಯಾಗ ಮತ್ತು ಸೇವಾ ಗುಣಗಳನ್ನು ಶ್ಲಾಘಿಸಿದರು.
ಪಕ್ಷ ನಿಷ್ಠೆಯಿಂದ, ಬದ್ಧತೆಯಿಂದ ಸೇವೆ ಮಾಡಿ ಎರಡನೇ ಬಾರಿಗೆ ವಿಧಾನ ಪರಿಷತ್ ಸದಸ್ಯತ್ವ ಪಡೆದುಕೊಂಡಿರುವುದಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಐವನ್ ಡಿಸೋಜಾ ತಿಳಿಸಿದರು. ಸಿದ್ಧರಾಮಯ್ಯ ಸರಕಾರವು ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ 200 ಕೋಟಿ ರೂ. ಬಜೆಟ್‌ನಲ್ಲಿ ಮೀಸಲಿಟ್ಟಿರುವುದಾಗಿ ಅವರು ತಿಳಿಸಿದರು.
ನ್ಯಾಯವಾದಿ ಪ್ರವೀಣ್ ಲೋಬೋ ಅಭಿನಂದನಾ ಮಾತುಗಳನ್ನಾಡಿದರು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಕೆಥೋಲಿಕ್ ಸಭಾ ಮೂಡುಬಿದಿರೆ ವಲಯ ಸಮಿತಿಯ ಅಧ್ಯಾತ್ಮಿಕ ನಿರ್ದೇಶಕ ವಂ| ಫಾ| ದೀಪಕ್ ನೋರೊನ್ಹಾ, ಅಭಿನಂದನಾ ಸಮಿತಿ ಸಂಚಾಲಕ ರೋನಾಲ್ಡ್ ಸೆರಾವೋ, ಕಾರ್ಯದರ್ಶಿ ರೋಶನ್ ಮಿರಾಂದ, ಅವಿಲ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.


ಕೆಥೋಲಿಕ್ ಸಭಾ ಮೂಡುಬಿದಿರೆ ವಲಯಾಧ್ಯಕ್ಷ ಆಲ್ವಿನ್ ರೋಡ್ರಿಗಸ್ ಸ್ವಾಗತಿಸಿದರು. ರಾಜಕೀಯ ಸಂಚಾಲಕಿ ಆಗ್ನೇಶ್ ಡಿಸೋಜಾ ಧನ್ಯವಾದವಿತ್ತರು. ರಾಜೇಶ್ ಕಡಲಕೆರೆ ಕಾರ್ಯಕ್ರಮ ನಿರೂಪಿಸಿದರು.

RELATED ARTICLES
- Advertisment -
Google search engine

Most Popular