ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಮಳೆಹಾನಿಯಿಂದ ಕುಸಿದುಬಿದ್ದ ನಷ್ಟಗೊಂಡ ಪ್ರದೇಶಗಳಲ್ಲಿ ಕಾಮಗಾರಿಗಳನ್ನು ಪುನರ್ ಕೈಗೊಳ್ಳಲು ರಾಜ್ಯ ರ‍್ಕಾರಿಂದ ಸುಮಾರು 10ಕೋಟಿ ಬಿಡುಗಡೆಗೊಂಡಿದ್ದು, ಕೆಲಸದ ಅಗತ್ಯತೆ ಮತ್ತು ಅಲ್ಲಿ ಮಾಡಬೇಕಾದ ಹೆಚ್ಚಿನ ಕಾಮಗಾರಿಗಳನ್ನು ಇದೆಯೇ ಎಂದು ತಿಳಿಯಲು ನಗರ ಪಾಲಿಕೆ ಇಂಜಿನಿರ‍್ಗಳ ಜೊತೆ ಇಂದು ಕಾಮಗಾರಿ ಕೈಗೆತ್ತಿಕೊಳ್ಳಲು ಮತ್ತು ಟೆಂಡರ್ ಕರೆಯಲಾದ ಕಾಮಗಾರಿಗಳನ್ನು ನಡೆಯುವ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆಯನ್ನು ಮಾಡಿ ಈ ಪ್ರದೇಶಗಳಲ್ಲಿ ಸರ‍್ವಜನಿಕರ ಅಹವಾಲುಗಳನ್ನು ಕೇಳಿದರು. ಈ ಪ್ರದೇಶದ ಜನರ ಅಹವಾಲುಗಳನ್ನು ಕೇಳಿದಂತಹ ಸಂರ‍್ಭದಲ್ಲಿ ಕೆಲವು ಕಡೆ ಅನಗತ್ಯ ರಸ್ತೆ ಅಗೆತ ಮತ್ತು ಜೆಸಿಬಿಯಿಂದ ಕಸವನ್ನು ತೆಗೆಯುವಂತಹ ಸಂರ‍್ಭದಲ್ಲಿ ಕೆಲವೊಂದು ಕಡೆ ತಡೆಗೋಡೆಗಳು ಬಿದ್ದಿರುವುದು ನನ್ನ ಗಮನಕ್ಕೆ ಬಂದಿದೆ.
ಈ ಸಂದರ್ಭದಲ್ಲಿ ಇಂಜಿನಿರ‍್ಗಳೊಂದಿಗೆ ರ‍್ಚಿಸಿ ಮುಂದೆ ಆಗಬಹುದಾದ ತೊಂದರೆಗಳು ಮತ್ತು ಅದಕ್ಕೆ ತಗಲಬಹುದಾದ ವೆಚ್ಚದ ಬಗ್ಗೆ & ಕಾಮಗಾರಿ. ತೆಗೆದುಕೊಳ್ಳುವ ಬಗ್ಗೆ ಉಂಟಾಗುವ ತಾಂತ್ರಿಕ ವಿಚಾರಗಳನ್ನು ಚರ್ಚಿಸಿದರು. ದಕ್ಷಿಣ ವಿಧಾನ ಸಭಾ ಕ್ಷೇತ್ರದ ವರ‍್ಡ್ ಸಂಖ್ಯೆ 25ರ ದೇರೇಬೆಲ್ ಪಶ್ಚಿಮ ವರ‍್ಡ್‌ನ ಕೊಟ್ಟಾರ ಜಿಂಜರ್ ಹೋಟೆಲ್ ಎದುರುಬದಿ ರಾಜಕಾಲುವೆಗೆ ತಡೆಗೋಡೆ ನರ‍್ಮಾಣ ಕಾಮಗಾರಿ, ಅದೇ ರೀತಿ ವರ‍್ಡ್ ಸಂಖ್ಯೆ 42ರ ಡೊಂಗರಿಕೆರೆ ಪ್ರದೇಶದ ಹನುಮಾನ್ ಟಿಂಬರ್ ಹಾಗೂ ಫಾತಿಮಾ ಬಜಾರ್ ಬಳಿ ಆರ್‌ಸಿಸಿ ತಡೆಗೋಡೆ ನರ‍್ಮಾಣ ಕಾಮಗಾರಿ, ವರ‍್ಡ್ ಸಂಖ್ಯೆ 43ರ ಡೊಂಗರಕೆರೆ ಪ್ರದೇಶದ ಭಾರತ್ ಬೀಡಿ ರ‍್ಕ್ಸ್ ಹತ್ತಿರ ಆರ್‌ಸಿಸಿ ತಡೆಗೋಡೆ ನರ‍್ಮಾಣ ಕಾಮಗಾರಿ, ವರ‍್ಡ್ ಸಂಖ್ಯೆ 44ರ ಬಂದರು ಪ್ರದೇಶದ ಅಸೀದುದ್ದೀನ್ ರಸ್ತೆಯ ಕ್ರೌನ್ಸ್ ಕಾಂಪ್ಲೆಕ್ಸ್ ಬಳಿ ರಾಜಕಾಲುವೆ ಕುಸಿದುಹೋಗಿರುವ ಜಾಗದಲ್ಲಿ ತಡೆಗೋಡೆ ನರ‍್ಮಾಣ ಕಾಮಗಾರಿಗಳನ್ನು ವೀಕ್ಷಿಸಿ ಟೆಂಡರ್ ಪ್ರಕ್ರಿಯೆಗಳು ಮುಗಿದ ಕೂಡಲೇ ಕಾಮಗಾರಿಗಳನ್ನು ಪ್ರಾರಂಭಿಸಿ, ಮಳೆಗಾಲ ಅರಂಭವಾಗುವುದರ ಒಳಗಡೆ ಪರ‍್ಣಗೊಳಿಸಬೇಕೆಂದು ಐವನ್ ಡಿʼಸೋಜಾರವರು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ.
ಇದೇ ರೀತಿ ಪದೇ-ಪದೇ ನಗರದ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರು ಯಾವುದೇ ಅನುದಾನ ಬಿಡುಗಡೆ ಅಗುತ್ತಿಲ್ಲ ಕೆಲಸ ಆಗುತ್ತಿಲ್ಲ ಎಂದು ಜನರು ನಂಬವಂತಹ ವಿಚಾರವಲ್ಲ. ಈ ಪ್ರದೇಶದ ಅನೇಕ ಕಾಮಗಾರಿಗಳು ನಡೆಯುತ್ತಿದ್ದು ಸದ್ರಿ ಕಾಮಗಾರಿಗಳು ತಾನು ತನ್ನದು ಎಂದು ಹೇಳುವ ಮೂಲಕ ಈ ಕಾಮಗಾರಿಗಳ ಬಗ್ಗೆ ಯಾವುದೇ ಜನರೊಂದಿಗೆ ರ‍್ಚಿಸದೇ ಕಾಮಗಾರಿಗಳನ್ನು ಮುಚ್ಚಿಡುವ ಪ್ರಯತ್ನಗಳನ್ನು ಮಾಡುತ್ತಿರುವ ಶಾಸಕರ ವಿಚಾರವನ್ನು ಜನರ ಜೊತೆ ರ‍್ಚಿಸಿ ಅದರ ಪ್ರಯೋಜನಗಳು ಅಗುವಂತೆ ಕೆಲಸಕರ‍್ಯಗಳು ಅಗುವಂತೆ ಕ್ರಮತೆಗೆದುಕೊಳ್ಳಬೇಕೆಂದು ಐವನ್ ಡಿʼಸೋಜಾರವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಶಶಿಧರ್ ಹೆಗಡೆ, ಮಾಜಿ ಕರ‍್ಪೊರೇಟರ್ , ಶಂಶುದ್ಧೀನ್ ಕುದ್ರೋಳಿ, ಪ್ರೇಮ್ ಬಳ್ಳಾಳಬಾಗ್, ಚೇತನ್ ಕುಮಾರ್, ಮುಖಂಡರಾದ ಪದ್ಮನಾಭ ಅಮಿನ್, ಶಿವಪ್ಪ ಸಾಲಿಯಾನ್, ಮಂಜುಳಾ ನಾಯಕ್, ಡಿ.ಎಂ. ಮುಸ್ತಫಾ, ಅಬೀದ್, ರೂಪ ಚೇತನ್, ವೆಲ್ವಿನ್ ಕ್ಯಾಸ್ಟ್ಲಿನೋ, ಸರ‍್ಥ ಭಟ್, ಇಮ್ರಾನ್ ಎ.ಆರ್, ಡಿಂಪಲ್, ರವಿ ಹಾಗೂ ವಹಾಬ್ ಕುದ್ರೋಳಿ ಮುಂತಾದವರು ಜೊತೆಗಿದ್ದರು.

