ಜೆಪ್ಪು ಪ್ರಾಥಮಿಕ ಅರೋಗ್ಯ ಕೇಂದ್ರವು ಇತ್ತೀಚೆಗೆ ಸಾರ್ವಜನಿಕ ಸೇವೆಗಾಗಿ ಉದ್ಘಾಟಿಸಲಾಗಿದ್ದು, ಈ ಅಸ್ಪ್ರತ್ರೆಯಲ್ಲಿ ಬಹಳ ವರ್ಷಗಳ ಹಿಂದೆ ಹೆರಿಗೆ ವಿಭಾಗವು ಕಾರ್ಯನಿರ್ವಹಿಸುತ್ತಿದ್ದು, ಈ ಆಸ್ಪತ್ರೆಯಲ್ಲಿರುವ ಕಟ್ಟಡ ಮತ್ತು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಕೊಡುವ ಸೇವೆ ಪಿಸಿಯೊತೆರಪಿ ಮತ್ತು ಬೇರೆಬೇರೆ ಆಸ್ಪತ್ರೆಗಳು ಕೊಡುವ ಸೇವೆಯನ್ನು ಪರಿಗಣಿಸಿ ಬೇರೆ ಬೇರೆ ವೈದ್ಯಕೀಯ ಅಸ್ಪತ್ರೆಗಳ ವೈದ್ಯರುಗಳ ಸೇವೆಯನ್ನು ಪಡೆದು ಈ ಭಾಗದಲ್ಲಿ ಹೆರಿಗೆ ವಿಭಾಗವನ್ನು ಸ್ಥಾಪಿಸಬೇಕೆಂಬ ಸಲಹೆಯಂತೆ ಇವತ್ತು ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿ’ಸೋಜಾರವರ ಅಧ್ಯಕ್ಷತೆಯಲ್ಲಿ ವಿವಿಧ ನಾಯಕರುಗಳ ಸಮ್ಮುಖದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ| ತಿಮ್ಮಯ್ಯು, ಪಾಧರ್ ಮುಲ್ಲರ್ ಅಸ್ಪತ್ರೆಯ ಡೀನ್ ಅಂತೋನಿ ಡಿಸಿಲ್ವ ಇವರ ನೇತ್ರತ್ವದಲ್ಲಿ ಡಾ| ವಿದ್ಯಾ ಇವರ ಸಮ್ಮುಖದಲ್ಲಿ ಸಭೆ ಕರೆದು ವೈದ್ಯಕೀಯ ಸಹಕಾರದೊಂದಿಗೆ ಈ ಸಭೆ ನಡೆಸಿ, ಅಸ್ಪತ್ರೆಯ ಮೂಲಭೂತ ಸೌಕರ್ಯವನ್ನು ಒದಗಿಸಿಕೊಡುವುದರ ಜೊತೆಗೆ ಅಸ್ಪತ್ರೆಯ ಬೆಳವಣಿಗಗೆ ಹಾಗೂ ಹೆಚ್ಚು ಹೆಚ್ಚು ಚಿಕಿತ್ಸೆಗಳು ಪಡೆಯುವ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಐವನ್ ಡಿ’ಸೋಜಾ ಕರೆ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ಸವಲತ್ತುಗಳ ಬಗ್ಗೆ ಚರ್ಚೆ ನಡೆಸಿ, ಈ ಬಗ್ಗೆ ವಿಸೃತವಾಗಿ ಸರಕಾರದ ಗಮನಕ್ಕೆ ತರಲು ಜಿಲ್ಲಾ ಅರೋಗ್ಯ ಅಧಿಕಾರಿಗೆ ಸೂಚಿಸಲಾಯಿತು. ಮತ್ತು ಈ ಸಂದರ್ಭದಲ್ಲಿ ಸ್ಥಳೀಯ ವೈದ್ಯಾಧಿಕಾರಿ ಆಸ್ಪತ್ರೆಗಳ ಜನರೇಟರ್ ವ್ಯವಸ್ಥೆ ಇಲ್ಲದೇ ಇರುವುದನ್ನು ಸೂಚಿಸಿ ಅದನ್ನು ಕೂಡಲೇ ಒದಗಿಸಿಕೊಡುವಂತೆ ಹಾಗೂ ಇತರ ಶಸ್ತ್ರಚಿಕಿತ್ಸಾ ವಿಭಾಗ (Operation Theater )ಗಳನ್ನು ಸರಿಪಡಿಸಲು ತೀರ್ಮಾನಿಸಲಾಯಿತು ಮತ್ತು ಇದಕ್ಕೆ ಬೇಕಾದ ಅನುದಾನವನ್ನು ಸರಕಾರದಿಂದ ಒದಗಿಸಿಕೊಡಲು ಆರೋಗ್ಯ ಸಚಿವರಾದ ಹಾಗೂ ಉಸ್ತುವಾರಿ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್‌ರವರೊಂದಿಗೆ ಚರ್ಚಿಸಿ, ಒದಗಿಸಿಕೊಡುವುದಾಗಿ ಐವನ್ ಡಿ’ಸೋಜಾ ತಿಳಿಸಿದರು. ಈ ಬಗ್ಗೆ ವಿಸೃತವಾದ ಮಾಹಿತಿವುಳ್ಳ ವಿಚಾರವನ್ನು ತಿಳಿಸಬೇಕೆಂದು ಹೇಳಿದರು. ಅಲ್ಲದೇ ಈ ಬಗ್ಗೆ ಫಾದರ್ ಮುಲ್ಲರ್‌ನಿಂದ ಎಲ್ಲಾ ಸಹಾಯವನ್ನು ನೀಡುವುದಾಗಿ ತಿಳಿಸಿದರು ಅಲ್ಲದೇ ಹೆರಿಗೆ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುದಾಗಿ ಗೈನಾಕೊಲಾಜಿಸ್ಟ್, ಅನಾಸ್ಟೆಸಿಯಾ ಪಿಡಿಯೊಡಿಸ್ಟ್‌ನ್ನು ತಮ್ಮ ಆಸ್ಪತ್ರೆಯಿಂದ 24 ಗಂಟೆ ಒದಗಿಸಿಕೊಡುವುದಾಗಿ ಫಾಧರ್ ಮುಲ್ಲರ್ ಡೀನ್ ಅಂತೋನಿ ಡಿ’ ಸಿಲ್ವ ಆಶ್ವಾಸನೆ ನೀಡಿದರು ಈ ಸಂದರ್ಭದಲ್ಲಿ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ತಾಲೂಕು ಹೆಲ್ತ್ ಅಫೀಸರ್ ಡಾ|ಸಂಜಯ್ ಭಂಡಾರಿ, ಡಾ| ವಿದ್ಯಾ, ಸದಸ್ಯರಾದ ಶಾಲಿನಿ, ಐವನ್, ನರೇಶ್ ದಿನೇಶ್, ಸಂಜಯ್ ಉಪಸ್ಥಿತರಿದ್ದರು.
ಜೆಪ್ಪು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಮತ್ತು ಹೆರಿಗೆ ವಿಭಾಗ ಪ್ರಾರಂಭಿಸಬೇಕೆಂಬ ಬೇಡಿಕೆಯನ್ನು ಈಡೇರಿಸುವಂತೆ ಐವನ್ ಡಿ’ಸೋಜಾ ಸಭೆ
RELATED ARTICLES