ಕಾರ್ಕಳ: ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಶ್ರೀ ಕಾಂತೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಜ. 14ರಿಂದ ಜ. 23ರ ವರೆಗೆ ಜರುಗಲಿದೆ.
ಜ. 14ರಂದು ಬೆಳಗ್ಗೆ ನವಕ, ಕಲಶ, ಹೋಮಗಳು ಧ್ವಜಾರೋಹನ, ಮಹಾಪೂಜೆ, ಸಂಜೆ ಭಜನೆ ಉತ್ಸವ ಬಲಿ, ಕಾಂತವಾರ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾಯರ್ಕ್ರಮಗಳು ನಡೆಯಲಿದೆ. ಜ. 15ರಂದು ಬೆಳಗ್ಗೆ ನವಕ, ಕಲಶ, ಹೋಮಗಳು, ಚಂಡಿಕಾ ಹವನ, ಸಂಜೆ 6.30ರಿಂದ ಉತ್ಸವ ಬಲುಇ, ಸಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಜ. 16ರಂದು ಬೆಳಗ್ಗೆ ನವಕ, ಕಲಶ, ಹೋಮಗಳು, ಮಹಾಪೂಜೆ, ಸಂಜೆ 6.30ರಿಂದ ಭಜನೆ ಉತ್ಸವ ಬಲಿ, ಸಾಂಸ್ಕೃತಿಕ ಕಾರ್ಯಕ್ರಮ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವರ್ಣಬೆಟ್ಟು ಇಲ್ಲಿನ ಮಕ್ಕಳಿಂದ ʻಅಕ್ಕʼ ತುಳು ಸಾಮಾಜಿಕ ನಾಟಕ ನಡೆಯಲಿದೆ. ಜ. 17ರಂದು ಬೆಳಗ್ಗೆ ನವಕ, ಕಲಶ, ಹೋಮಗಳು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದೆ. ಜ. 18ರಂದು ಬೆಳಗ್ಗೆ ಧಾರ್ಮಿಕ ಕಾರ್ಯಕ್ರಮಗಳು, ಸಂಜೆ 6.30ರಿಂದ ಭಜನೆ, ಉತ್ಸವ ಬಲಿ, ಕಟ್ಟೆ ಪೂಜೆ ನಡೆಯಲಿದೆ.
ಜ. 19ರಂದು ಬೆಳಗ್ಗೆ ಧಾರ್ಮಿಕ ಕಾರ್ಯಕ್ರಮಗಳು, ಮಹಾಪೂಜೆ, ಸಂಜೆ 6.30ರಿಂದ ಭಜನೆ, ಉತ್ಸವ ಬಲಿ, ಕಟ್ಟೆ ಪೂಜೆ ನಡೆಯಲಿದೆ. ಜ. 20ರಂದು ಚಂದ್ರ ಮಂಡಲೋತ್ಸವ, ಅಪರಾಹ್ನ ಪ್ರಸಾದಶುದ್ಧಿ, ವಾಸ್ತುಹೋಮ ನಡೆಯಲಿದೆ. ಸಂಜೆ 5.360ರಿಂದ ಶ್ರೀ ಕ್ಷೇತ್ರ ಕಾಂತವಾರ ಮೇಳದಿಂದ ಯಕ್ಷಗಾನ ಬಯಲಾಟ ನಡೆಯಲಿದೆ. ಜ. 21ರಂದು ನವಕ, ಕಲಶ, ಹೋಮ,ಗಳು ನಡೆಯಲಿದ್ದು, ಮಧ್ಯಾಹ್ನ ಮಹಾಪೂಜೆ ಉತ್ಸವ ಬಲಿ ರಥಾರೋಹಣ ನಡೆಯಲಿದೆ. ಸಂಜೆ 6.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.
ಜ. 22ರಂದು ಬೆಳಗ್ಗೆ ಧ್ವಜಾವರೋಹಣ ಮಹಾಪೂಜೆ ತುಲಾಭಾರ ಸೇವೆ ನೆರವೇರಲಿದೆ. ರಾತ್ರಿ ವಾರ್ಷಾವಧಿ ನೇಮೋತ್ಸವ ನಡೆಯಲಿದೆ. ಜ. 23ರಂದು ಮಹಾ ಸಂಪ್ರೋಕ್ಷಣೆ, ಮಹಾಪೂಜೆ, ರಾತ್ರಿ ಕಾಂತೇಶ್ವರ ದೇವರಿಗೆ ಹಾಗೂ ಪರಿವಾರ ದೇವರುಗಳಿಗೆ ಹೂವಿನ ಪೂಜೋತ್ಸವ ಮಹಾ ಮಂತ್ರಾಕ್ಷತೆ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.