ಬೆಳ್ತಂಗಡಿ: ಟೀಂ ಅಭಯ ಹಸ್ತ ಚಾರಿಟೇಬಲ್ ಸ್ಪೋರ್ಟ್ಸ್ ಕ್ಲಬ್ ಬೆಲ್ತಂಗಡಿ ವತಿಯಿಂದ ಸೇವೆಗಾಗಿ ಕ್ರೀಡೆ ಪರಿಕಲ್ಪನೆಯಡಿ ಬೆಳ್ತಂಗಡಿ ತಾಲೂಕು ಮಟ್ಟದ ʻಎಸಿಎಲ್ ಅಭಯಹಸ್ತ ಸೀಝನ್ -೮ʼ ಕಾರ್ಯಕ್ರಮ ಜನವರಿ 25-26ರಂದು ಶ್ರೀ ಸತ್ಯ ದೇವತಾ ಮೈದನ ಪೈಕಾ ಕ್ರೀಡಾಂಗಣ ಹಾಗೂ ಬಡಗಕಾರಂದೂರು ಶಾಲಾ ವಠಾರದಲ್ಲಿ ಜರುಗಲಿದೆ.
೮ನೇ ವರ್ಷದ ಕ್ರೀಡೋತ್ಸವ-ಪ್ರತಿಭಾ ಪುರಸ್ಕಾರ – ಸೇವಾ ಯೋಜನೆಗಳ ಹಸ್ತಾಂತರದ ಚಾಲನೆ – ಸಾಧಕರು, ಕ್ರೀಡಾಪೋಷಕರಿಗೆ ಗೌರವಾರ್ಪಣಾ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.