ಏಳಿಂಜೆ: ಏಳಿಂಜೆ ಶ್ರೀ ಆದಿಜಾರಂದಾಯ ಬಂಟ ದೈವಸ್ಥಾನದ ವಾರ್ಷಿಕ ನೇಮೋತ್ಸವ ಜ. 15ರಂದು ಜರುಗಲಿದೆ.
ನೇಮೋತ್ಸವ ಪ್ರಯುಕ್ತ ಜ. 14ರಂದು ಸಂಜೆ 4ಕ್ಕೆ ಒದಗುವ ಶುಭ ಮುಹೂರ್ತದಲ್ಲಿ ದೈವದ ಭಂಡಾರ
ಹೊರಡಲಿರುವುದು. ಬಳಿಕ ದೈವಸ್ಥಾನದಲ್ಲಿ ಪ್ರಾರ್ಥನೆ ನವಕ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ರಾತ್ರಿ 8ಗಂಟೆಗೆ ಚೌತಿಹಬ್ಬ ಮತ್ತು ದೈವದರ್ಶನ, ದೀಪಾರಾಧನೆ ನಡೆಯಲಿದೆ. ಡಜ. 15ರಂದು ಬೆಳಗ್ಗೆ 10ಗಂಟೆ ಏಳಿಂಜೆ ಜಾರಂದಾಯ ಬಂಟ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಬೆಳಗ್ಗೆ 11ಗಂಟೆಗೆ ದೈವದ ಭಂಡಾರ ಸಿರಿ ಚಪ್ಪರಕ್ಕೆ ಹೊರಡುವುದು. ಮಧ್ಯಾಹ್ನ 12:30ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ
ರಾತ್ರಿ 10ಗಂಟೆಗೆ ದೈವದ ಗಗ್ಗರ ಸೇವೆ, ರಾತ್ರಿ 1ಗಂಟೆಗೆ ಜಾರಂದಾಯ ಬಂಟ ದೈವಗಳ ದರ್ಶನ, ರಾತ್ರಿ 4ಗಂಟೆಗೆ ಬಂಡಿ ಬಲಿ ನೇಮೋತ್ಸವ ಮತ್ತು ಸಿಡಿಮದ್ದು ಸುಡುವ ಕಾರ್ಯಕ್ರಮ ಜರುಗಲಿದೆ. ಭಕ್ತದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ, ಶ್ರೀ ದೈವದ ಕೃಪೆಗೆ ಪಾತ್ರರಾಗಬೇಕಾಗಿ ಆಡಳಿತ ಮುಕ್ತೇಸರರಾದ ಸದಾನಂದ ಎಂ.ಶೆಟ್ಟಿ ಏಳಿಂಜೆ ಭಂಡಸಾಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜ. 15ರಂದು ಏಳಿಂಜೆ ಶ್ರೀ ಆದಿಜಾರಂದಾಯ ಬಂಟ ದೈವಸ್ಥಾನದ ವಾರ್ಷಿಕ ನೇಮೋತ್ಸವ
RELATED ARTICLES