ಕಾರ್ಕಳ: ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ ದೇವರ ನೂತನ ದೇವಾಲಯ ಸಮರ್ಪಣಾಪೂರ್ವಕ ಪುನಃ ಪ್ರತಿಷ್ಠೆ, ಅಷ್ಟಬಂಧ, ಸಹಸ್ರ ಕಲಶ ಸಹಿತ ಬ್ರಹ್ಮಕಲಶಾಭಿಷೇಕ ಹಾಗೂ ಮಹೋತ್ಸವವು ಜ. 16ರಿಂದ ಜ. 28ರವರೆಗೆ ಜರುಗಲಿದೆ.
ಜ. 16ರಂದು ಬೆಳಗ್ಗೆ ದೇವಾಲಯದ ನೂತನ ಪಾಕ ಶಾಲೆಯಲ್ಲಿ ಪುಣ್ಯಹ ಪಂಚಗವ್ಯ, ವಾಸ್ತು ಪೂಜೆ, ಗಣಪತಿ ಹೋಮ, ಸಂಜೆ 3ರಿಂದ ಮಿಯ್ಯಾರು ಜೋಡುಕಟ್ಟೆಯಿಂದ ಹಸಿರು ಹೊರಕಾಣಿಕೆಯ ಭವ್ಯ ಮೆರವಣಿಗೆ ನಡೆಯಲಿದೆ.
ಜ. 17ರಂದು ಬೆಳಗ್ಗೆ ಸಾಮೂಹಿಕ ದೇವತಾ ಪ್ರಾರ್ಥನೆ, ವೈದಿಕ ಉಗ್ರಾಣ ಮುಹೂರ್ತ, ತೋರಣ ಮುಹೂರ್ತ, ಸಾರ್ವಜನಿಕ ಉಗ್ರಾಣ ಮುಹೂರ್ತ, ಸಂಜೆ 4.30ರಿಂದ ದೇವಾಲಯದಲ್ಲಿ ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಪ್ರಕಾರ ಬಲಿ, ಮಂಟಪ ಸಂಸ್ಕಾರ, ಅಶ್ವತ್ಥಕಟ್ಟೆಯಲ್ಲಿ ವಾಸ್ತು ಪೂಜೆ, ಸಂಜೆ 6.30ರಿಂದ ಸಭಾ ಕಾರ್ಯಕ್ರಮ ಹಾಗೂ 7.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಜ. 18ರಂದು ಬೆಳಗ್ಗೆ 7.30ರಿಂದ ನೂತನ ಬಲಿ ಬಿಂಬಕ್ಕೆ ಬಿಂಬ ಶುದ್ಧಿ, ಅಶ್ವತ್ಥಕಟ್ಟೆಯಲ್ಲಿ ಪವಮಾನ ಹೋಮ, ಅಶ್ವತ್ಥ ಪೂಜೆ, ಸಂಜೆ 4.30ರಿಂದ ನಾಗಾಲಯದಲ್ಲಿ ಸಪ್ತಶುದ್ಧಿ, ಪ್ರಸಾದ ಶುದ್ಧಿ, ವಾಸ್ತು ಪೂಜೆ, ಸಂಜೆ 6.30ರಿಂದ ಸಭಾ ಕಾರ್ಯಕ್ರಮ ಹಾಗೂ ರಾತ್ರಿ 7.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.
ಜ. 19ರಂದು ಬೆಳಗ್ಗೆ 7.30ರಿಂದ ಗಣಪತಿ ಹೋಮ, ತತ್ವಹೋಮ, ಜೀವಕಲಶ ಮಧ್ಯಾಹ್ನ ಅನ್ನಸಂರ್ಪಣೆ ನಡೆಯಲಿದೆ. ಸಂಜೆ 4ರಿಂದ ವಿವಿಧ ಭಜನಾ ಮಂಡಳಿಗಳಿಂದ ಅಖಂಡ ಭಜನೆ ಜರುಗಲಿದೆ.
ಜ. 20ರಂದು ಬೆಳಗ್ಗೆ 6ರಿಂದ ಗಣಪತಿ ಹೋಮ, ಪ್ರಸಾದ ಪ್ರತಿಷ್ಠೆ, ಸಾಮಾನ್ಯ ಶಾಂತಿ ಹೋಮ, ಬೆಳಗ್ಗೆ 8.30ಕ್ಕೆ ಶ್ರೀ ಮಹಾಲಿಂಗೇಶ್ವರ ದೇವರಿಗೆ ಜೀವ ಕಲಶಾಭಿಷೇಕ, ಶ್ರೀ ಮಹಾಗಣಪತಿ ದೇವರ ಪುನಃ ಪ್ರತಿಷ್ಠೆ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 3.30ರಿಂದ ಮುಡಾರು ದೆಪ್ಪರ್ಲಬೆಟ್ಟು ಮನೆಯಿಂದ ಭೈರವ ಜೋಡು ಜುಮಾದಿ ದೈವ ಸಾನಿಧ್ಯಗಳ ಭಂಡಾರದ ಆಗಮನ, ಸಂಜೆ 4.30ರಿಂದ ದೈವಗಳ ನೂತನ ದಾರು ಪೀಠಾಧಿಗಳಿಗೆ ಬಿಂಬಶುದ್ಧಿ, ಅಧಿವಾಸ ಹೋಮ ನಡೆಯಲಿದೆ. ಸಂಜೆ 6.30ರಿಂದ ಸಭಾ ಕಾರ್ಯಕ್ರಮ, ರಾತ್ರಿ 7.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಜ. 21ರಂದು ಬೆಳಗ್ಗೆ ಪುಣ್ಯಾಹ ಪಂಚಗವ್ಯ ಗಣಪತಿ ಹೋಮ, ಚಂಡಿಕಾ ಹೋಮ, 8.21ಕ್ಕೆ ಧ್ವಜ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ ನಡೆಯಲಿದೆ. 9.20ಕ್ಕೆ ಶ್ರೀ ನಾಗದೇವರ ಪ್ರತಿಷ್ಠೆ, ಪ್ರಸನ್ನಪೂಜೆ, 9.50ಕ್ಕೆ ದೈವಗಳ ಪ್ರತಿಷ್ಠೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 3ರಿಂದ ಶ್ರೀ ಚಕ್ರ ಪೂಜೆ, ವಟು ಆರಾಧನೆ, ರಾತ್ರಿ 7ರಿಂದ ಸಭಾ ಕಾರ್ಯಕ್ರಮ, ರಾತ್ರಿ 8ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಜ. 22ರಂದು ಗಣಪತಿ ಹೋಮ, ಶ್ರೀ ದೇವರಿಗೆ ತತ್ವ ಹೋಮ ನೆರವೇರಲಿದೆ. ಬೆಳಗ್ಗೆ 8.21ಕ್ಕೆ ಗಣಪತಿ ದೇವರಿಗೆ ಬ್ರಹ್ಮ ಕಲಶಾಭಿಷೇಕ, ಪ್ರಸನ್ನ ಪೂಜೆ, 11.44ಕ್ಕೆ ಶ್ರೀ ಮಹಾಲಿಂಗೇಶ್ವರ ದೇವರಿಗೆ ತತ್ವಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ಸಂಜೆ 4ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ.
ಜ. 23ರಂದು ಬ್ರಹ್ಮ ಕಲಶೋತ್ಸವ, ರಾತ್ರಿ 8ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 24ರಂದು ಬೆಳಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿದ್ದು, ರಾತ್ರಿ ಭೂತಬಲಿ, ಹಾಗೂ ಕಟೀಲು ಮೇಳದಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ನಡೆಯಲಿದೆ.
ಜ. 25ರಂದು ಬೆಳಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಗಳು, ಸಂಜೆ ಬಲಿ ಉತ್ಸವ ರಾತ್ರಿ ಭೂತಬಲಿ ಸಮಾರೋಪ ಸಮಾರಂಭ ನಡೆಯಲಿದೆ. ಜ. 26ರಂದು ಬೆಳಗ್ಗೆ 7ರಿಂದ ವಿವಿಧ ಧಾರ್ಮಿಕ ಕಾರ್ಯಗಳು, ಮಧ್ಯಾಹ್ನ ಅನ್ನಸಂರ್ಪಣೆ, ಸಂಜೆ 7ರಿಂದ ರಥದಲ್ಲಿ ಹೂವಿನ ಪೂಜೆ ನಡೆಯಲಿದೆ.
ಜ. 27ರಂದು ಬೆಳಗ್ಗೆ 6ರಿಂದ ಬೆಳಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಗಳು, ಮಧ್ಯಾಹ್ನ ಅನ್ನಸಂರ್ಪಣೆ ರಾತ್ರಿ 8ರಿಂದ ದೇವರ ಬಲಿ, ದೈವ ದೇವರ ಭೇಟಿ ನೆರವೇರಲಿದೆ. ಜ. 28ರಂದು ಬೆಳಗ್ಗೆ ಬೆಳಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಗಳು, ಮಹಾಪೂಜೆ ಪ್ರಸಾದ ವಿರತಣೆ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.