ಕಡಬ: ಪೆರ್ಲೋಡಿ ತರವಾಡು ಮನೆಯಲ್ಲಿ ಧರ್ಮದೈವ ರುದ್ರಚಾಮುಂಡಿ ಹಾಗೂ ಪರಿವಾರ ದೈವಗಳ ನೇಮೋತ್ಸವ ಜ. 18 ಮತ್ತು ಜ. 19ರಂದು ಜರುಗಲಿದೆ.
ಜ. 18ರಂದು ಸಂಜೆ 6ಕ್ಕೆ ದೈವಗಳ ಭಂಡಾರ ತೆಗೆಯುವುದು, ರಾತ್ರಿ 8ರಿಂದ ಕುಲೆಭೂತ, ಸತ್ಯದೇವತೆ ದೈವಗಳ ನೇಮ, ರಾತ್ರಿ 9ರಿಂದ ಕಲ್ಲುರ್ಟಿ ದೇವದ ನೇಮ, 9.30ಕ್ಕೆ ಅನ್ನಸಂರ್ಪಣೆ ನಡೆಯಲಿದೆ.
ರಾತ್ರಿ 11ರಿಂದ ವರ್ಣಾರ ಪಂಜುರ್ಲಿ ದೈವದ ನೇಮ, 2 ಗಂಟೆಯಿಂದ ಕುಪ್ಪೆ ಪಂಜುರ್ಲಿ ದೈವದ ನೇಮ ಜರುಗಲಿದೆ.
ಜ. 19ರಂದು ಬೆಳಗ್ಗೆ 6ರಿಂದ ಧರ್ಮದೈವ ರುದ್ರಾಂಡಿ ದೈವದ ನೇಮ, ಮಧ್ಯಾಹ್ನ 12ಗಂಟೆಯಿಂದ ಸಿರಿಮುಡಿ ಗಂಧ ಪ್ರಸಾದ ವಿತರಣೆ, ಮಧ್ಯಾಹ್ನ 1 ಗಂಟೆಯಿಂದ ಅನ್ನಸಂರ್ಪಣೆ ಅಪರಾಹ್ನ 2ಕ್ಕೆ ಗುಳಿಗ ದೈವದ ನೇಮ ಹಾಗೂ ಸಂಜೆ 3 ಗಂಟೆಗೆ ಅಂಗಾರಬಾಕುಡ ನೇಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.