ಉಡುಪಿ: ಬೈಂದೂರು ಚಂದ್ರಶೇಖರ ನಾವಡರ ಕೃತಿ ಲೋಕಾರ್ಪಣೆ ಸಮಾರಂಭ ಜ. 5ರಂದು ಬೆಳಗ್ಗೆ 11ಗಂಟೆಗೆ ಒಡೆಯರಮಠ ಶ್ರೀ ಕೃಷ್ಣ ಲಲಿತ ಕಲಾ ಮಂದಿರ ನಗೂರಿನಲ್ಲಿ ನಡೆಯಲಿದೆ.
ಕ.ಸಾ.ಪ. ಉಡುಪಿಯ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಕೃತಿಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಾವಣ್ಯ (ರಿ) ಬೈಂದೂರು ಇದರ ಅಧ್ಯಕ್ಷ ನರಸಿಂಹ ನಾಯಕ್ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಸುರಭಿ (ರಿ) ಬೈಂದೂರು ಇದರ ಅಧ್ಯಕ್ಷ ಆನಂದ ಮದ್ದೋಡಿ ಭಾಗವಹಿಸಲಿದ್ದಾರೆ. ರೇಡಿಯೋ ಕುಂದಾಪ್ರದ ಕಾರ್ಯಕ್ರಮ ನಿರ್ವಾಹಕರಾದ ಜ್ಯೋತಿ ಸಾಲಿಗ್ರಾಮ ನಿರೂಪಣೆ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.