ಬ್ರಹ್ಮಾವರ: ಸಮೀಪದ ಹೇರೂರು ರುಡ್‌ಸೆಟ್ ಸಂಸ್ಥೆಯಿಂದ ಸ್ವ-ಉದ್ಯೋಗ ಆಕಾಂಕ್ಷಿಗಳಿಗಾಗಿ ಜ. 20ರಿಂದ ಜ.29ರವರೆಗೆ 10ದಿನಗಳ ಕೋಳಿ ಸಾಕಾಣಿಕೆ ಉಚಿತ ತರಬೇತಿ ಆಯೋಜಿಸಲಾಗಿದೆ.
ತರಬೇತಿಯು ಬೆಳಗ್ಗೆ 9.30ರಿಂದ 5.30ರವರೆಗೆ ನಡೆಯಲಿದ್ದು, ಉದ್ಯೋಗ ಆಕಾಂಕ್ಷಿಗಳ ವಯಸ್ಸು 18ರಿಂದ 45 ವರ್ಷಗಳಾಗಿರಬೇಕು. ತರಬೇತಿಯ ಅವದಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣ ಉಚಿತವಾಗಿರುತ್ತದೆ. ಅಲ್ಲದೆ ಸಂಸ್ಥೆಯ ಸಮವಸ್ತ್ರವನ್ನು ಉಚಿತವಾಗಿ ಕೊಡಲಾಗುವುದು ಹಾಗೂ ಬ್ಯಾಂಕಿನಿಂದ ಸಿಗುವ ಸಾಲದ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.