Thursday, September 12, 2024
Homeಬೆಂಗಳೂರುಜೈ ತುಲುನಾಡ್ ಬೆಂಗಳೂರು ಘಟಕದ ನೇತೃತ್ವದಲ್ಲಿ ʻತುಲುನಾಡ ಆಟಿದ ಸಂಭ್ರಮʼ

ಜೈ ತುಲುನಾಡ್ ಬೆಂಗಳೂರು ಘಟಕದ ನೇತೃತ್ವದಲ್ಲಿ ʻತುಲುನಾಡ ಆಟಿದ ಸಂಭ್ರಮʼ

ಬೆಂಗಳೂರು: ಜೈ ತುಲುನಾಡು (ರಿ.), ಬೆಂಗಳೂರು ಘಟಕದ ವತಿಯಿಂದ ಆ.4ರಂದು ʻತುಲುನಾಡ ಆಟಿʼ ಸಂಭ್ರಮ ನಡೆಯಲಿತು. ಬೆಂಗಳೂರಿನ “ಮುಲ್ಕಿ ಸುಂದರ್ ರಾಮ್ ಶೆಟ್ಟಿ ನಗರ”, ಬಿಳೇಕ ಹಳ್ಳಿಯ MSRS ಸಭಾಂಗಣದಲ್ಲಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಸ್ಥಳೀಯ ಶಾಸಕ ಸತೀಶ್ ರೆಡ್ಡಿ ಅಲ್ಲಿನ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಕಾರ್ಯಕ್ರಮ ಚೆನ್ನಾಗಿ ಮೂಡಿಬರಲೆಂದು ಪ್ರಾರ್ಥಿಸಿ, ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಚೆಂಡೆ ವಾದನದ ಜೊತೆಗೆ ಮಹಿಳೆಯರು ಕಳಸ ಹಿಡಿದುಕೊಂಡು, ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ಸಭಾಂಗಣ ವರೆಗೆ ಮೆರವಣಿಗೆ ನಡೆಯಿತು. ಮುಲ್ಕಿ ಸುಂದರ್ ರಾಮ್ ಶೆಟ್ಟಿ ನಗರದ ಪ್ರಮುಖರಾದ ರಮಾಕಾಂತ್ ಶೆಟ್ಟಿ, ಕರ್ನಲ್ ಎ.ಜೆ. ಭಂಡಾರಿ, ಭವಾನಿ ಶಂಕರ್ ಶೆಟ್ಟಿ, ರಮೇಶ್ ಶೆಟ್ಟಿ, ವೀರೇಂದ್ರ ಶೆಟ್ಟಿ, ಹಿರಿಯ ಉದ್ಯಮಿ ಗಣೇಶ್ ರಾವ್, ವೈ ಜಯಂತ್ ರಾವ್, ಚಂದ್ರಹಾಸ್ ಎಸ್. ಮೆರವಣಿಗೆಯ ವೇಳೆ ಉಪಸ್ಥಿತರಿದ್ದರು.
ಜೈ ತುಲುನಾಡ್ (ರಿ.) ಬೆಂಗಳೂರು ಘಟಕದ ಅಧ್ಯಕ್ಷ ಎಂ. ಕೆ. ಧನಂಜಯ ಆಚಾರ್ಯ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯದರ್ಶಿ ಅಕ್ಷಯ್ ಆಚಾರ್ಯ ಪ್ರಾಸ್ತಾವಿಕ ಭಾಷಣ ಮಾಡಿದರು. ಸಹ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಮತ್ತು ಕಾಶಿನಾಥ್, ಖಜಾಂಚಿ ಅನುದೀಪ್ ಎಲ್ಲೂರ್, ಸಹ ಖಜಾಂಚಿ ಕು. ಪ್ರಗತಿ ಎಸ್, ಮಾಜಿ ಅಧ್ಯಕ್ಷ ಜಯಪ್ರಸಾದ್ ಮತ್ತು ವಿಶಾಲ್ ಕೊಡಿಯಾಲ್, ಸ್ಥಾಪಕ ಸಮಿತಿ, ಕೇಂದ್ರ ಸಮಿತಿಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಯುಕ್ತ ಆಟೋಟ ಸ್ಪರ್ಧೆಗಳು ನಡೆದವು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಸಾಧಕರಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಿತು.

ತುಲು-ಕನ್ನಡ ಸಿನೆಮಾ ನಟ, ನಟಿಯರಾದ ನಿರಂಜನ್ ಶೆಟ್ಟಿ, ಪೃಥ್ವಿ ಅಂಬರ್, ಕು. ವಿರಾಣಿಕ ಶೆಟ್ಟಿ, ಪವಿತ್ರಾ ಕೊಟ್ಯಾನ್, ಶ್ರೀಮತಿ ಸುಷ್ಮಾರಾಜ್ ಮತ್ತಿತರರು ಉಪಸ್ಥಿತರಿದ್ದರು.

ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಸಿ. ಎ. ಅಶೋಕ್ ಶೆಟ್ಟಿ ಸಂಘಟನೆಯ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸೌರಭ್ ಗುರ್ಮೆ ಸುರೇಶ್ ಶೆಟ್ಟಿ, ಹಾಲಾಡಿ ವಿಜಯ ಶೆಟ್ಟಿ, ದಿನೇಶ್ ಹೆಗ್ಡೆ, ಪುರುಷೋತ್ತಮ ಚೇಂಡ್ಲಾ, ಜೈ ತುಲುನಾಡ್ (ರಿ.) ಕೇಂದ್ರ ಸಮಿತಿದ ಅಧ್ಯಕ್ಷ ಉದಯ ಪೂಂಜ, ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಗುಣರಂಜನ್ ಶೆಟ್ಟಿ, ಶ್ರೀನಿವಾಸ ಅಂಗಾರ ಕೋಡಿ, ಉದಯ ಶೆಟ್ಟಿ, ಶ್ರೀನಿವಾಸ್, ಉಮೇಶ್ ಪೂಂಜಾ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular