Monday, December 2, 2024
Homeಮೂಡುಬಿದಿರೆಮೂಡುಬಿದಿರೆ | ಜೈನ ಮಠದಲ್ಲಿ ವಿಜಯದಶಮಿ ದಿನ ವಿವಿಧ ಪೂಜೆ

ಮೂಡುಬಿದಿರೆ | ಜೈನ ಮಠದಲ್ಲಿ ವಿಜಯದಶಮಿ ದಿನ ವಿವಿಧ ಪೂಜೆ

ಮೂಡುಬಿದಿರೆ: ಜೈನಕಾಶಿ ಮೂಡುಬಿದಿರೆಯ ಜೈನ ಮಠದಲ್ಲಿ ವಿಜಯ ದಶಮಿ ದಿನದಂದು ವಿವಿಧ ಪೂಜೆಗಳು ನಡೆದವು. ಭಾನುವಾರ ಬೆಳಿಗ್ಗೆ 6.00 ಗಂಟೆಗೆ ಜೈನ ಪೇಟೆಯ ತೆನೆಕಟ್ಟೆಯಿಂದ ಎಲ್ಲಾ ಶ್ರಾವಕರು ತೆನೆ ಪಡೆದುಕೊಂಡು ಗುರು ಬಸದಿ ಅರ್ಚಕರು ಶ್ರೀ ಮಠಕ್ಕೆ ಮೆರವಣಿಗೆಯಲ್ಲಿ ಬಂದು ಪಂಚ ಕುಮಾರ ಪೂಜೆ, ಭಗವಾನ್ ಪಾರ್ಶ್ವನಾಥ ಸ್ವಾಮಿ ಪೂಜೆ, ಪಟ್ಟದ ಕುಷ್ಮಾಂಡಿನಿ ದೇವಿ ಪದ್ಮಾವತಿ ಬ್ರಹ್ಮ ಯಕ್ಷ, ಭೂಮಿ ದೇವಿ, ಧಾನ್ಯ ಲಕ್ಷ್ಮಿ, ನಾಗ ದೇವರ ಪೂಜೆ ಸಲ್ಲಿಸಿ, ಗುರು ಬಸದಿಯಲ್ಲಿ ಭಗವಂತರ ಪೂಜೆ, ಗಣ ಧರ, ಕ್ಷೇತ್ರಪಾಲ ಪೂಜೆ ಶ್ರೀಗಳ ಚಂದನದ ಸಿಂಹಾಸನ ಪೂಜೆ, ಶ್ರೀಗಳ ಪಾದ ಪೂಜೆ ನೆರವೇರಿಸಿ ಪ್ರಸಾದ ನೀಡಿದರು. ಶ್ರೀ ಮಠದಲ್ಲಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯ ಸ್ವಾಮೀಜಿ ಪಾವನ ಸಾನ್ನಿಧ್ಯ ಮಾರ್ಗದರ್ಶನದಲ್ಲಿ 18ಬಸದಿಗಳ ದೇವಕಾರ್ಯ ನೆರವೇರಿಸಿ ಅರ್ಚಕರಿಗೆ ದಾನ ದಕ್ಷಿಣೆ ನೀಡಿ ಶ್ರೀಮಠ, ವಿವಿಧ ಬಸದಿಗಳ ಜೀರ್ಣೋದ್ದಾರ ಸಂಕಲ್ಪ ಮಾಡಿ ಲೋಕದಲ್ಲಿ ಶಾಂತಿ ಸೌಹಾರ್ದತೆ ನೆಲೆಯಾಗಲಿ ಸರ್ವರಿಗೂ ಶುಭವಾಗಲಿ ಎಂದು ಹರಸಿ ಆಶೀರ್ವಾದ ಮಾಡಿದರು. ಪಟ್ಣಶೆಟ್ಟಿ ಸುದೇಶ್ ಕುಮಾರ್ ಬೆಟ್ಕೇರಿ ಸುದೇಶ್, ಆದರ್ಶ್ ಕೊಂಡೆ ಮನೆತನ, ಸಂಜಯಂತ ಕುಮಾರ ಶೆಟ್ಟಿ 18 ಬಸದಿ ಅರ್ಚಕರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular