ಜೈತುಲುನಾಡ್ (ರಿ.) ಕಾರ್ಕಳ ಘಟಕದ ಉದ್ಘಾಟನೆ ಕಾರ್ಕಳ ದ ಮಯೂರ ಇಂಟೆರ್ನ್ಯಾಷನಲ್ ಹೊಟೇಲಿನಲ್ಲಿ ದಿ. 05 ಜನವರಿ 2025 ಆದಿತ್ಯವಾರದಂದು ನಡೆಯಿತು.
ಘಟಕದ ಉದ್ಘಾಟನೆಯ ಅಂಗವಾಗಿ “ತುಲು ಲಿಪಿ ದಿಬ್ಬಣ” ಎನ್ನುವ ಬೃಹತ್ ಬೈಕ್ ಜಾಥಾ ಕಾರ್ಕಳ ಪೇಟೆಯಲ್ಲಿ ನಡೆಯಿತು.
ಬೆಳಿಗ್ಗೆ 8 ಗಂಟೆಗೆ ತುಲು ಲಿಪಿ ಜಾಥಾ ಮೆರವಣಿಗೆಯ ಉದ್ಘಾಟನೆಯನ್ನು ಮಾಳದಲ್ಲಿ ಮಾಳದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉಮೇಶ್ ಪೂಜಾರಿ ಚಾಲನೆ ನೀಡಿದರು. ನಂತರ ಬಜಗೋಳಿಯಲ್ಲಿ ಕಾರ್ಕಳ ಶಾಸಕರಾದ ಮಾನ್ಯ ಶ್ರೀ ಸುನೀಲ್ ಕುಮಾರ್, ಮುದ್ರಾಡಿಯಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಶುಭದರ ಶೆಟ್ಟಿ ಹಾಗೂ ಉಡುಪಿ ಬನ್ನಂಜೆ ಯಲ್ಲಿ ಉಡುಪಿ ಘಟಕದ ಅಧ್ಯಕ್ಷರಾದ ಸುಶೀಲಾ ಜಯಕರ್ ಕೊಡವೂರು ಚಾಲನೆ ನೀಡಿದರು. ಅದೇ ಸಮಯದಲ್ಲಿ ಬೇಲಾಡಿಯಲ್ಲಿ ಕಾಂತಾವರ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಪ್ರಭಾಕರ್ ಕುಲಾಲ್,ಬಂಡೀಮಠದಲ್ಲಿ ಉಡುಪಿ ಜಿಲ್ಲಾ ಬಿ.ಜೆ.ಪಿ ಉಪಾಧ್ಯಕ್ಷರಾದ ಮಹಾವೀರ್ ಹೆಗ್ಡೆ ಹಾಗೂ ಉಡುಪಿ ಜಿಲ್ಲಾ ಜೆ.ಡಿ.ಎಸ್ ಹಿಂದುಳಿದ ವರ್ಗದ ಅಧ್ಯಕ್ಷರಾದ ಸುರೇಶ್ ದೇವಾಡಿಗ ಚಾಲನೆ ನೀಡಿದರು.
ಅತ್ಯಂತ ಅಭೂತಪೂರ್ವವಾಗಿ ನಡೆದಂತಹ ತುಲು ಲಿಪಿಯ ಬೃಹತ್ ಜಾಥಾದಲ್ಲಿ 250ಕ್ಕೂ ಮಿಕ್ಕಿ ವಾಹನದಲ್ಲಿ ತುಳುವರು ಬಂದು ತುಳುನಾಡಿಗೆ, ತುಳುನಾಡ ಮಾತೆಗೆ ಜೈಕಾರ ಹಾಕಿ ತುಳು ಲಿಪಿ ಬೋರ್ಡ್ ಹಿಡಿದುಕೊಂಡು ಜಾಥಾ ಮೆರವಣಿಗೆಯನ್ನು ಯಶಸ್ಸು ಗೊಳಿಸಿದರು.
ಜೈ ತುಲುನಾಡ್(ರಿ.) ಕಾರ್ಕಳ ಘಟಕದ ಉದ್ಘಾಟನೆಯನ್ನು ಮಾಡಿ ಮಾತನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರು ಹಾಗೂ ಅಳುಪ ರಾಜ ವಂಶಸ್ತರಾದ ಡಾ ಆಕಾಶ್ ರಾಜ್ ಜೈನ್… ಭೈರವ ಅರಸರ ಹಾಗೂ ಅಳುಪರ ಕಾಲದಲ್ಲಿ ಅತ್ಯಂತ ಪ್ರಚಲಿತದಲ್ಲಿದ್ದ ತುಳುಲಿಪಿಯು ಜೈ ತುಲುನಾಡ್(ರಿ.) ರವರ ತುಳು ಲಿಪಿಯ ಬೃಹತ್ ಜಾಥಾ ದೊಂದಿಗೆ ತುಳು ಭಾಷೆ ಹಾಗೂ ಲಿಪಿಯ ಮಹತ್ವ ವನ್ನು ಕಾರ್ಕಳದ ಜನತೆಗೆ ತಿಳಿಸುವಂತಾಯಿತು ಎಂದು ಈ ಸಂಧರ್ಭದಲ್ಲಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಶಾಲಾ ಶಿಕ್ಷಕಿಯಾದ ವಂದನಾ ರೈ ಎಲ್ಲರನ್ನು ಉದ್ದೇಶಿಸಿ ಮಾತನಾಡಿ ತುಳು ಲಿಪಿಯನ್ನು ನಮ್ಮ ಮಕ್ಕಳಿಗೆ ನಾವೇ ಕಲಿಸಿ ಅದರ ಅಳಿವು ಉಳಿವಿಗಾಗಿ ನಾವೆಲ್ಲರೂ ಶ್ರಮಿಸಬೇಕು ಎಂದು ತಿಳಿಸಿದರು.ಇನ್ನೋರ್ವ ಅತಿಥಿಗಳಾಗಿ ಆಗಮಿಸಿದಂತಹ ಚಿತ್ರನಟ,ನಿರ್ದೇಶಕರು ಹಾಗೂ ರಂಗಭೂಮಿ ಕಲಾವಿದರಾದ ಸಂದೀಪ್ ಬಾರಾಡಿ ಮಾತನಾಡಿ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಜೈ ತುಲುನಾಡ್(ರಿ.)ಇದರ ಎಲ್ಲಾ ಸದಸ್ಯರು ಶ್ರಮಿಸುತ್ತಿದ್ದು ಹಾಗಾಗಿ ನಾವು ಕೂಡ ಸಂಘಟನೆ ಯೊಂದಿಗೆ ಕೈ ಜೋಡಿಸಬೇಕೆಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ಜೈ ತುಲುನಾಡ್(ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ್ ಪೂಂಜಾ ತಾರಿಪಾಡಿಗುತ್ತು ಮಾತನಾಡಿ ಸಂಘವು 10 ವರ್ಷದಿಂದ ನಡೆದುಕೊಂಡು ಬಂದಂತಹ ಕಾರ್ಯಕ್ರಮದ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಕಳ ಮಾರಿಯಮ್ಮ ಫ್ಲವರ್ ಮರ್ಚೆಂಟ್ ನ ಶ್ರೀ ಭಾಸ್ಕರ್ ಕುಲಾಲ್, ಕಾರ್ಕಳ ಮಯೂರ ಹೋಟೆಲ್ ನ ಮಾಲಕರಾದ ಉದಯ ಸಾಲ್ಯಾನ್, ಕವಿತಾ ಸುರೇಶ್ ಸುವರ್ಣ ಪೆರ್ವಾಜೆ, “ಅಮ್ಮನ ನೆರವು ಸಂಸ್ಥೆಯ ಅಧ್ಯಕ್ಷರಾದ ಅವಿನಾಶ್ ಶೆಟ್ಟಿ, ಸೌತ್ ಕೆನರಾ ಫೋಟೋಗ್ರಫಿ ಎಸೋಷಿಯೇಷನ್ಸ್ ಇದರ ಅಧ್ಯಕ್ಷರಾದ ಪದ್ಮ ಪ್ರಸಾದ್ ಜೈನ್ ಉಪಸ್ಥಿತರಿದ್ದರು.
ಜೈ ತುಲುನಾಡ್(ರಿ.) ಸಂಘಟನೆಯ ಸಂಘಟನಾ ಕಾರ್ಯದರ್ಶಿಯಾದ ಶ್ರೀ ಸಂತೋಷ್.ಎನ್.ಎಸ್. ಕಟಪಾಡಿ ಕಾರ್ಕಳ ಘಟಕದ ಹೊಸ ಪದಾಧಿಕಾರಿಗಳ ಬಗ್ಗೆ ತಿಳಿಸಿದರು. ಜೈತುಲುನಾಡ್(ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ್ ಪೂಂಜಾ ತಾರಿಪಾಡಿಗುತ್ತು ಕಾರ್ಕಳ ಘಟಕದ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು.
ನೂತನ ಘಟಕದ ಅಂಗವಾಗಿ ಬೆಂಗಳೂರು ಘಟಕದ ಅಧ್ಯಕ್ಷರಾದ ಧನಂಜಯ ಆಚಾರ್ಯ ತಾವು ತುಳು ಲಿಪಿಯಲ್ಲಿ ರಚಿಸಿದ ಓಂ ಮತ್ತು ಶ್ರೀ ಯನ್ನು ಕಾರ್ಕಳದ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಉಡುಪಿ ಘಟಕದ ಅಧ್ಯಕ್ಷರಾದ ಸುಶೀಲಾ ಜಯಕರ್ ಕೊಡವೂರು,ಕಾರ್ಯದರ್ಶಿ ಯಾದ ಸಾಗರ್ ಬನ್ನಂಜೆ ತುಳುಲಿಪಿಚಾರ್ಟ್ ನ್ನು ನೀಡಿದರು. ಈ ಸಂದರ್ಭದಲ್ಲಿ ತುಳುಲಿಪಿಯನ್ನು ಕಲಿತು ಪರೀಕ್ಷೆಯಲ್ಲಿ ಪಾಸಾದವರಿಗೆ ತುಳು ಲಿಪಿ ಸರ್ಟಿಫಿಕೇಟ್ ನೀಡಲಾಯಿತು. ಸ್ಥಾಪಕ ಸಮಿತಿಯ ಸದಸ್ಯರಾದ ಶರತ್ ಕೊಡವೂರ್ ಇದನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಜೈ ತುಲುನಾಡ್(ರಿ.)ಬೆಂಗಳೂರು ಘಟಕ, ಉಡುಪಿ ಘಟಕ ಹಾಗೂ ಮಂಗಳೂರು ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಸ್ಥಾಪಕ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಸಂಘದ ಸದಸ್ಯರಾದ ರಕ್ಷಿತಾ ಸಾಲ್ಯಾನ್ ಕವಿತೆಯನ್ನು ವಾಚಿಸಿದರು. ಸಾನ್ವಿ ಹಾಗೂ ಸಂಗಡಿಗರಿಂದ ತುಲು ಭಾಷೆಯ ನೃತ್ಯ ಪ್ರದರ್ಶನ ನೀಡಲಾಯಿತು.
ಕಾರ್ಕಳ ಘಟಕದ ನೂತನ ಅಧ್ಯಕ್ಷರಾದ ರವಿಚಂದ್ರ ಮಾತನಾಡಿ ಸಂಘದ ವತಿಯಿಂದ ನಡೆಯುವಂತಹ ಕಾರ್ಯಕ್ರಮಗಳಿಗೆ ಸಹಕಾರ ನೀಡುವಂತೆ ವಿನಂತಿಸಿದರು.
ಸಂಘದ ಪ್ರಸ್ತಾವಿಕವನ್ನು ಜೈ ತುಲುನಾಡ್(ರಿ.) ಕೇಂದ್ರ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಮಹೇಶ್ ಬೇಲಾಡಿ ನೆರವೇರಿಸಿದರು. ಕಾರ್ಯಕ್ರಮ ವನ್ನು ಅವಿನಾಶ್ ಮುದ್ರಾಡಿ ಸ್ವಾಗತಿಸಿ,ಸುಧೀರ್ ದೇವಾಡಿಗ ಹಾಗೂ ನಿತಿನ್ ನಲ್ಲೂರ್ ನಿರೂಪಿಸಿ,ಅಶ್ವಿನಿ ಕಾರ್ಕಳ ವಂದಿಸಿದರು.
ಜೈ ತುಲುನಾಡ್(ರಿ.) ಕಾರ್ಕಳ ಘಟಕದ ಪದಾಧಿಕಾರಿಗಳು ಅಧ್ಯಕ್ಷರು ರವಿಚಂದ್ರನ್ ಉಪಾಧ್ಯಕ್ಷರು ಮಹೇಶ್ ಕುಲಾಲ್ ಬೇಲಾಡಿ, ಕಾರ್ಯದರ್ಶಿ ಅಶ್ವಿನಿ ಕಾರ್ಕಳ, ಜೊತೆ ಕಾರ್ಯದರ್ಶಿ ದಿನೇಶ್ ಶೆಟ್ಟಿ ಮುಂಡ್ಲಿ, ಕೋಶಾಧಿಕಾರಿ ನಿಶಾ ಶೆಟ್ಟಿ, ಜೊತೆಕೋಶಾಧಿಕಾರಿ ಮಹೇಶ್ ಮೊಯಿಲಿ, ಸಂಘಟನಾ ಕಾರ್ಯದರ್ಶಿ ನಿತಿನ್ ನಲ್ಲೂರ್, ಒತ್ತು ಸಂಘಟನಾ ಕಾರ್ಯದರ್ಶಿ ವೈಶಾಕ್.ಕೆ. ಆಚಾರ್ಯ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಪ್ರದೀಪ್ ,ವಿಘ್ನೇಶ್.ಜೆ. ನಾಯಕ್. ಸುಧೀರ್ ಕುಮಾರ್ ಎನ್. ವಿದ್ಯಾಶ್ರೀ ಉಪಸ್ಥಿತರಿದ್ದರು.