Saturday, December 14, 2024
Homeಬಂಟ್ವಾಳಜಕ್ರಿಬೆಟ್ಟು: 21ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೌಹಾರ್ದತೆಗೆ ಗಣೇಶೋತ್ಸವ ಪ್ರೇರಣೆ

ಜಕ್ರಿಬೆಟ್ಟು: 21ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೌಹಾರ್ದತೆಗೆ ಗಣೇಶೋತ್ಸವ ಪ್ರೇರಣೆ

9ಬಿಟಿಎಲ್-ಜಕ್ರಿಬೆಟ್ಟು ಬಂಟ್ವಾಳ ತಾಲ್ಲೂಕಿನ ಜಕ್ರಿಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ 21ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ಭಾನುವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿದರು.

ಮಾಣಿಲ ಶ್ರೀ ಬಂಟ್ವಾಳ: ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಬಾಲಗಂಗಾಧರ ತಿಲಕರು ಆರಂಭಿಸಿದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಪ್ರಸಕ್ತ ಸಾಮಾಜಿಕ ಸೌಹಾರ್ದತೆಗೆ ಪ್ರೇರಣೆ ನೀಡುತ್ತಿದೆ ಎಂದು ಮಾಣಿಲ ಶ್ರೀಧಾಮ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದ್ದಾರೆ. ಇಲ್ಲಿನ ಜಕ್ರಿಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ 21ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ಭಾನುವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಲ್ಲಿಪಾದೆ ಸಂತ ಅಂತೋನಿ ಚರ್ಚ್‌ ನ ಧರ್ಮಗುರು ರಾಬಟ್ರ್ ಡಿಸೋಜ ಆಶೀರ್ವಚನ ನೀಡಿ, ‘ಮಾಜಿ ಸಚಿವ ಬಿ.ರಮಾನಾಥ ರೈ ಅವರ ನೇತೃತ್ವದಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಚಟುವಟಿಕೆಗಳಲ್ಲಿ ಸಾಮರಸ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದು ಶ್ಲಾಘನೀಯ’ ಎಂದರು.

ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ ಆರ್.ಪೂಜಾರಿ ಮಾತನಾಡಿ, ‘ಜಿಲ್ಲೆಯಲ್ಲಿ ಎಲ್ಲರೂ ಸಾಮರಸ್ಯದಿಂದ ಬದುಕುವ ಮೂಲಕ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೊಡುಗೆ ಸಲ್ಲಿಸಿದಂತಾಗುತ್ತದೆ’ ಎಂದರು. ಉದ್ಯಮಿ ಬಿ.ರಘುನಾಥ ಸೋಮಯಾಜಿ ಶುಭ ಹಾರೈಸಿದರು. ಸಮಿತಿ ಅಧ್ಯಕ್ಷ ಬಿ.ಪದ್ಮಶೇಖರ ಜೈನ್ ಇದ್ದರು. ಸಮಿತಿ ಪ್ರಧಾನ ಕಾರ್ಯದಶರ್ಿ ಎಡ್ತೂರು ರಾಜೀವ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಕ ಸುದೀಪ್ ಕುಮಾರ್ ಶೆಟ್ಟಿ ವಂದಿಸಿದರು. ರಾಜೀವ ಕಕ್ಯಪದವು ಕಾರ್ಯಕ್ರಮ ನಿರೂಪಿಸಿದರು. 9ಬಿಟಿಎಲ್-ತುಳಸೀವನ ಬಂಟ್ವಾಳ ತಾಲ್ಲೂಕಿನ ಬೋಳಂತೂರು ಸಮೀಪದ ತುಳಸೀವನದಲ್ಲಿ 41ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಮೆರವಣಿಗೆ ಶನಿವಾರ ನಡೆಯಿತು. ಬೋಳಂತೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಮೆರವಣಿಗೆಗೆ ತಿಂಡಿ-ಪಾನೀಯ ನೀಡದಂತೆ ಮಸೀದಿಗೆ ಬರೆದ ಪತ್ರ ವೈರಲ್ ಕಿಡಿಗೇಡಿಗಳಿಂದ ಅಪ್ರಚಾರ, ಟೀಕೆ ಬಂಟ್ವಾಳ: ಇಲ್ಲಿನ ಕಲ್ಲಡ್ಕ ಸಮೀಪದ ಬೋಳಂತೂರು ತುಳಸೀವನ ಶ್ರೀ ಸಿದ್ಧಿವಿನಾಯಕ ವಿಶ್ವಸ್ಥ ಮಂಡಳಿ ವತಿಯಿಂದ ಶನಿವಾರ ನಡೆದ 41ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಮೆರವಣಿಗೆಯಲ್ಲಿ ಸಿಹಿ ತಿಂಡಿ ಮತ್ತು ಪಾನೀಯ ನೀಡದಂತೆ ಮಸೀದಿಗೆ ಬರೆದ ಪತ್ರವೊಂದು ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಾರೀ ಚಚರ್ೆಗೆ ಗ್ರಾಸವಾಗಿದೆ. ‘ಕಳೆದ ವರ್ಷ ಮೆರವಣಿಗೆ ವೇಳೆ ನಿಮ್ಮ ಸಮಾಜ ಬಾಂಧವರು ನೀಡಿದ್ದ ಸಿಹಿ ತಿಂಡಿ ಮತ್ತು ಪಾನೀಯ ಸೇವಿಸಿ ಕೆಲವೊಂದು ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಇದರಿಂದಾಗಿ ನಮ್ಮ ನಡುವಿನ ಸಾಮರಸ್ಯ ಕೆಡುವ ಆತಂಕ ಎದುರಾಗಿದೆ. ಆದುದರಿಂದ ಇನ್ನು ಮುಂದೆ ಶೋಭಾಯಾತ್ರೆ ವೇಳೆ ನಿಮ್ಮ ಸಮಾಜ ಬಾಂಧವರು ಯಾವುದೇ ಸಿಹಿ ತಿಂಡಿ ಮತ್ತು ಪಾನೀಯ ನೀಡದಂತೆ ಮುಂಜಾಗ್ರತಾ ಕ್ರಮವಾಗಿ ಈ ಮೂಲಕ ವಿನಂತಿಸುತ್ತಿದ್ದೇವೆ.

ಈ ಮನವಿಗೆ ಸಂಬಂಧಿಸಿದಂತೆ ನಿಮ್ಮ ಎಲ್ಲಾ ಸಮಾಜ ಬಾಂಧವರು ಸಹಕರಿಸಬೇಕಾಗಿ ಈ ಮೂಲಕ ಮನವಿ ಮಾಡುತ್ತಿದ್ದೇವೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಪ್ರತಿಕ್ರಿಯೆ: ಇಲ್ಲಿನ ಬೋಳಂತೂರು ತುಳಸೀವನ ಭಜನಾ ಮಂದಿರದಲ್ಲಿ ಕಳೆದ 20 ವರ್ಷ ಚೌತಿ ದಿನದಂತೆ ಗಣಪತಿ ಫೊಟೋ ಇಟ್ಟು ಭಜನೆ ಮತ್ತು ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆ ನಡೆಯುತ್ತಿತ್ತು. ಕಳೆದ 20 ವರ್ಷಗಳಿಂದ ಗಣೇಶನ ವಿಗ್ರಹ ಪ್ರತಿಷ್ಠೆಗೊಳಿಸಿ ಪೂಜೆ ಸಲ್ಲಿಸಿದ ಬಳಿಕ ಶೋಭಾಯಾತ್ರೆ ಮೂಲಕ 2 ಕಿ.ಮೀ.ದೂರದ ಬೀರುಕೋಡಿ ಕೆರೆಯಲ್ಲಿ ವಿಗ್ರಹ ವಿಸಜರ್ಿಸಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಮೆರವಣಿಗೆ ಹಾದು ಹೋಗುವ ಎರಡು ಮಸೀದಿ ಎದುರು ಮುಸ್ಲಿಂ ಯುವಕರು ಸಿಹಿ ತಿಂಡಿ ಮತ್ತು ಪಾನೀಯ ವಿತರಿಸುತ್ತಿದ್ದಾರೆ. ಇಲ್ಲಿ ಎಲ್ಲರೂ ಅನ್ಯೋನ್ಯತೆಯಿಂದ ಇದ್ದು, ಭವಿಷ್ಯದಲ್ಲಿ ಯಾವುದೇ ಕೋಮು ಸೌಹಾರ್ದತೆಗೆ ಧಕ್ಕೆಯಾಗಬಾರದು ಎಂಬ ಕಾರಣಕ್ಕಾಗಿ ಎರಡೂ ಮಸೀದಿಗಳಿಗೆ ಪತ್ರ ಮೂಲಕ ಮನವಿ ಸಲ್ಲಿಸಿದ್ದೇವೆ. ಇದಕ್ಕೆ ಎರಡೂ ಮಸೀದಿ ಅಧ್ಯಕ್ಷರು ಕೂಡಾ ಸಹಮತ ವ್ಯಕ್ತಪಡಿಸಿದ್ದು, ಇಲ್ಲಿನ ಜನರ ಅನ್ಯೋನ್ಯತೆ ಕೆಡಿಸಲು ಹೊರಗಿನ ಕಿಡಿಗೇಡಿಗಳು ಪತ್ರವನ್ನು ವೈರಲ್ ಮಾಡಿ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಮಂದಿರ ಆಡಳಿತ ಸಮಿತಿ ಅಧ್ಯಕ್ಷ ಮುತ್ತಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ. ಬೋಳಂತೂರು ಪುಟ್ಟ ಗ್ರಾಮೀಣ ಪ್ರದೇಶವಾಗಿದ್ದು, ಇಲ್ಲಿ ಹಿಂದೂ-ಮುಸ್ಲಿಂ ಎಂಬ ಭೇದವಿಲ್ಲದೆ ಎಲ್ಲರೂ ಪರಸ್ಪರ ಅನ್ಯೋನ್ಯತೆಯಿಂದ ಇದ್ದಾರೆ. ಕಳೆದ 40 ವರ್ಷಗಳಿಂದ ಯಾವುದೇ ರೀತಿಯ ಸಾಮರಸ್ಯಕ್ಕೆ ಅಡ್ಡಿಯಾಗಿಲ್ಲ. ಭವಿಷ್ಯದಲ್ಲಿ ಸಾಮರಸ್ಯ ಕೆಡದಂತೆ ಮುಂಜಾಗ್ರತಾ ಕ್ರಮವಾಗಿ ಅವರು ಬರೆದ ಪತ್ರವನ್ನು ಕಿಡಿಗೇಡಿಗಳು ವೈರಲ್ ಮಾಡಿ ಅಪ ಪ್ರಚಾರ ನಡೆಸುತ್ತಿರುವುದು ಬೇಸರ ತಂದಿದೆ ಎಂದು ತುಳಸೀವನ ರೆಹ್ಮಾನಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಬಿ.ಎಂ.ಇಬ್ರಾಹಿಂ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

9ಬಿಟಿಎಲ್-ತಿರುಮಲ ಬಂಟ್ವಾಳ ತಿರುಮಲ ಶ್ರೀ ವೆಂಕಟರಮಣ ಸ್ವಾಮೀ ದೇವಸ್ಥಾನದಲ್ಲಿ 50ನೇ ವರ್ಷ ಪೂಜಿಸಲಾದ ವೀಣಾಧಾರಿ ಗಣೇಶನ ವಿಗ್ರಹವು ಬೆಳ್ಳಿಯ ಕಬ್ಬು ಗಿಡದೊಂದಿಗೆ ಕಂಗೊಳಿಸುತ್ತಿದೆ. ನಿಧನ: 9ಬಿಟಿಎಲ್-ಆನಂದ ಶೆಟ್ಟಿ ಕೊನೆರೊಟ್ಟು ಬಂಟ್ವಾಳ: ಇಲ್ಲಿನ ಸಿದ್ಧಕಟ್ಟೆ ಸಮೀಪದ ಕೊನೆರೊಟ್ಟು ನಿವಾಸಿ, ಪ್ರಗತಿಪರ ಕೃಷಿಕ ಆನಂದ ಶೆಟ್ಟಿ ಕೊನೆರೊಟ್ಟು (75) ಇವರು ಅಸೌಖ್ಯದಿಂದ ಶನಿವಾರ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ ಮತ್ತು ಸಿದ್ಧಕಟ್ಟೆ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ರಾಜೇಶ ಶೆಟ್ಟಿ ಕೊನೆರೊಟ್ಟು ಸಹಿತ ಮೂವರು ಪುತ್ರರು ಇದ್ದಾರೆ. ಬಿಜೆಪಿ ಹಿರಿಯ ಕಾರ್ಯಕರ್ತರಾಗಿ, ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ಸದಸ್ಯರಾಗಿ, ಅದ್ಯಕ್ಷರಾಗಿ, ಪೂಂಜ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ, ಹೊಕ್ಕಾಡಿಗೋಳಿ ವೀರ-ವಿಕ್ರಮ ಕಂಬಳ ಸಂಘಟಕರಾಗಿ, ಕೋಣಗಳ ಯಜಮಾನರಾಗಿ, ಣೆಲಿಯನಡುಗೋಡು ಭಜನಾ ಮಂಡಳಿ ಅಧ್ಯಕ್ಷರಾಗಿ, ವಾಮದಪದವು ಸರ್ಕಾರಿ ಪದವಿಪೂರ್ವ ಕಾಲೇಜು ಶಿಕ್ಷ-ರಕ್ಷಕ ಸಂಘದ ಉಪಾಧ್ಯಕ್ಷರಾಗಿ ಗುರುತಿಸಿಕೊಂಡಿದ್ದರು.

RELATED ARTICLES
- Advertisment -
Google search engine

Most Popular