ದಾವಣಗೆರೆ : ದಾವಣಗೆರೆಯ ಕಲಾಕುಂಚ 3ನೇ ವರ್ಷದ ವಾರ್ಷಿಕೋತ್ಸವ ಮತ್ತು ಕವನ ರಚನಾ ಕಮ್ಮಟ ಜನವರಿ 6 ರಂದು ಸೋಮವಾರ ಕಾಸರಗೋಡು ಜಿಲ್ಲೆಯ ಮೀಯಪದವು ವಿ.ಎ.ಯು.ಪಿ.ಎಸ್. ಶಿಕ್ಷಣ ಸಂಸ್ಥೆಯ
ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಸಮಾರಂಭದ ಉದ್ಘಾಟನೆಯನ್ನು ವಿ.ಎ.ಯು.ಪಿ.ಎಸ್. ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರಾದ ಶ್ರೀಧರ್‌ರಾವ್
ನೇರವೇರಿಸಲಿದ್ದು, ಅಧ್ಯಕ್ಷತೆಯನ್ನು ಕಲಾಕುಂಚ ಕೇರಳ ಗಡಿನಾಡಿನ ಶಾಖೆಯ ಅಧ್ಯಕ್ಷರಾದ ಶ್ರೀಮತಿ
ಜಯಲಕ್ಷ್ಮಿ ಕಾರಂತ್ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೇರಳ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಜಯಪ್ರಕಾಶ್ ನಾರಾಯಣ, ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಅರವಿಂದಾಕ್ಷಿ ಭಂಡಾರಿ, ನಿವೃತ್ತ ಪ್ರಾಚಾರ್ಯರಾದ ಪಿ.ಎನ್.ಮುಡತ್ತಾಯ, ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಗೌರವ ಅಧ್ಯಕ್ಷರಾದ ವಿ.ಬಿ.ಕುಳಮರ್ವ, ಕವಿಗೋಷ್ಠಿಯ ಸಂಪನ್ಮೂಲ ವ್ಯಕ್ತಿ ಲಕ್ಷ್ಮಿ ವಿ.ಭಟ್ ವೇದಿಕೆಯಲ್ಲಿ ಉಪಸ್ಥಿತರಿರುತ್ತಾರೆ.
ಮಧ್ಯಾಹ್ನ 2 ಗಂಟೆಯಿಂದ “ಕವಿಯಾಗುವ ಸುಯೋಗ” ಶಿಬಿರಾರ್ಥಿಗಳಿಂದ ಕವಿಗೋಷ್ಠಿ ಹಾಗೂ ವಿಮರ್ಶೆ, ಹಿರಿಯರಿಂದ ಕವಿಗೋಷ್ಠಿ ವಿಮರ್ಶೆ, ನಂತರ ಅಪರಾಹ್ನ 3 ಗಂಟೆಯಿಂದ “ಕವಿ-ರವಿ” ಕವನ ರಚನಾ ಕಮ್ಮಟ ನಡೆಯಲಿದೆ.
ಸಾಹಿತ್ಯಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಅಪರೂಪದ ಸಾಹಿತ್ಯ ಕಮ್ಮಟ, ಸಂಸ್ಥೆಯ 3ನೇ ವರ್ಷದ
ವಾರ್ಷಿಕೋತ್ಸವ ಯಶಸ್ವಿಗೊಳಿಸಬೇಕಾಗಿ ಕಲಾಕುಂಚ ಕೇರಳ ಗಡಿನಾಡಿನ ಶಾಖೆಯ ಪದಾಧಿಕಾರಿಗಳು, ಸರ್ವ
ಸದಸ್ಯರು ವಿನಂತಿಸಿದ್ದಾರೆ.