Saturday, December 14, 2024
Homeರಾಜ್ಯಸಿಎಂ ಕಾರು ಬೆಂಗಾವಲು ಪಡೆಗೆ ಅಡ್ಡಿ | ಜನಾರ್ದನ ರೆಡ್ಡಿ ರೇಂಜ್‌ರೋವರ್‌ ಕಾರು ಜಪ್ತಿ

ಸಿಎಂ ಕಾರು ಬೆಂಗಾವಲು ಪಡೆಗೆ ಅಡ್ಡಿ | ಜನಾರ್ದನ ರೆಡ್ಡಿ ರೇಂಜ್‌ರೋವರ್‌ ಕಾರು ಜಪ್ತಿ

ಕೊಪ್ಪಳ: ಮುಖ್ಯಮಂತ್ರಿಗಳ ಬೆಂಗಾವಲು ಪಡೆಯ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿ ಶಾಸಕ ಜನಾರ್ದನ ರೆಡ್ಡಿಗೆ ಸೇರಿದ್ದ ರೇಂಜ್ ರೋವರ್ ಕಾರನ್ನು ಗಂಗಾವತಿ ಸಂಚಾರಿ ಠಾಣೆ ಪೊಲೀಸರು ಸೀಜ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಕಾರು ಜಪ್ತಿ ಮಾಡಿದ ಪೊಲೀಸರು, ಕಾರನ್ನು ಗಂಗಾವತಿಗೆ ತರಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಗಾವಲು ಪಡೆ ವಾಹನಕ್ಕೆ ಎದುರಾಗಿ ಕಾರು ಚಾಲನೆ ಮಾಡಿ ಜನಾರ್ಧನ ರೆಡ್ಡಿ ನಿಯಮ ಉಲ್ಲಂಘಿಸಿದ್ದರು. ಈ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಚಾಲಕನ ವಿರುದ್ಧ ದೂರು ನೀಡಿದ್ದರು.
ಅ.5ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಪ್ಪಳ ಜಿಲ್ಲೆಯ ಗಂಗಾವತಿ ಮಾರ್ಗವಾಗಿ ರಾಯಚೂರಿನಿಂದ ಜಿಂದಾಲ್ ಏರ್​ಪೋರ್ಟ್​ಗೆ ತೆರಳುತ್ತಿದ್ದರು. ಈ ವೇಳೆ ರೆಡ್ಡಿ ಕಾರು ಚಾಲಕ ಸಿಎಂ ಬೆಂಗಾವಲು ಪಡೆಗೆ ಎದುರಾಗಿ ಚಾಲನೆ ಮಾಡಿದ್ದ. ರೂಲ್ಸ್ ಬ್ರೇಕ್ ಹಿನ್ನೆಲೆ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಬಳಸುವ ರೇಂಜ್ ರೋವರ್, ಸ್ಕಾರ್ಪಿಯೊ ಹಾಗೂ ಫಾರ್ಚೂನರ್ ಸೇರಿ ಮೂರು ಕಾರುಗಳ ಮೇಲೆ ಪೊಲೀಸರು ಎಫ್​ಐಆರ್ ದಾಖಲಿಸಿದ್ದರು. ಅದರಂತೆ ಇಂದು ಬೆಂಗಳೂರಿನಲ್ಲಿ ಸೀಜ್​ ಮಾಡಲಾಗಿದೆ.
ಅಂದು ಸಿಎಂ ಸಂಚಾರ ಹಿನ್ನೆಲೆ ಗಂಗಾವತಿಯಲ್ಲಿ 20ಕ್ಕೂ ಹೆಚ್ಚು ನಿಮಿಷಗಳ ಕಾಲ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಈ ವೇಳೆ ಗಂಗಾವತಿ ನಗರದ ಸಿಬಿಎಸ್ ಸರ್ಕಲ್​ನಲ್ಲಿ ಶಾಸಕ ಜನಾರ್ದನ ರೆಡ್ಡಿ ಕೂಡ ಸಿಲುಕಿದ್ದರು. ಬಹಳ ಸಮಯವಾದರೂ ವಾಹನ ಸಂಚಾರಕ್ಕೆ ಅವಕಾಶ ನೀಡದ ಹಿನ್ನೆಲೆ ರೋಡ್​ನ ಡಿವೈಡರ್ ಮೂಲಕ ಜನಾರ್ದನ್​ ರೆಡ್ಡಿ ಕಾರು ಚಾಲಕ, ಬೆಂಗಾವಲು ಪಡೆ ವಿರುದ್ಧ ದಿಕ್ಕಿನಲ್ಲಿ ಕಾರು ಚಲಾಯಿಸಿಕೊಂಡು ಹೋಗಿದ್ದರು.

RELATED ARTICLES
- Advertisment -
Google search engine

Most Popular