ನಿಟ್ಟೆ ವಿದ್ಯಾ ಸಂಸ್ಥೆ ನೇತೃತವಾದಲ್ಲಿ ಹಾಗೂ ಕೆನರಾ ಚೇಂಬರ್ ಒಫ್ ಕಾಮರ್ಸ್ ಅಂಡ್ ಇಂಡಸ್ಟ್ರೀ ಮಂಗಳೂರು ಇದರ ಜಂಟಿ ಸಹಯೋಗದಲ್ಲಿಜಪಾನ್ ನಿಯೋಗದ ಜೊತೆ ದಿನಾಂಕ 22.01.2025ರಂದು ಮಂಗಳೂರಿನ ಕೆನರಾ ಚೇಂಬರ್ ಆಫ್ ಕಾಮರ್ಸ್ ನ ಕಚೇರಿಯಲ್ಲಿ ಜಪಾನ್ ಸರಕಾರದ ಪ್ರತಿನಿಧಿಗಳು ಮತ್ತು ಜಪಾನ್ ಉದ್ಯಮಿಗಳ ಸಭೆ ನಡೆಯಿತು.ಈ ಸಭೆಯಲ್ಲಿ ಮಂಗಳೂರಿನಲ್ಲಿ ಜಪಾನ್ ಜೊತೆ ಹೊಸ ಉದ್ಯಮಗಳು ,ಹೂಡಿಕೆ, ಮತ್ತು ಕೊಲಬರೇಷನ್ ನೊಂದಿಗೆ ಕೈಗಾರಿಕೆ ಸ್ಥಾಪಿಸುವ ಬಗ್ಗೆ ಜಪಾನ್ ನಿಯೋಗದ ಗೌರವಾನ್ವಿತ ಸದಸ್ಯರ ಜೊತೆ
ಚರ್ಚೆ ನಡೆಯಿತು, ಈ ಸಂದರ್ಭದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ಡಾ. ಗೋಪಾಲ್ ಮೊಗೆರಾಯ, ಉಪಾಧ್ಯಕ್ಸರು ನಿಟ್ಟೆ ಯೂನಿವರ್ಸಿಟಿ, ಹರಿಕೃಷ್ಣ ಭಟ್, ನಿರ್ದೇಶಕರು ವಿದೇಶಾಂಗ ನೀತಿ ನಿಟ್ಟೆ ಯೂನಿವರ್ಸಿಟಿ ,ಮೂಲ್ಕಿ ಜೀವನ್ ಕೆ ಶೆಟ್ಟಿ ಅಧ್ಯಕ್ಷರು ನಿಟ್ಟೆ ಆ್ಯೂಮಿನಿ ಅಸೋಸಿಯೇಷನ ಮತ್ತು ಕೆನರಾ ಚೆಂಬರ್ ಆಫ್ ಕಾಮರ್ಸ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು .