Thursday, April 24, 2025
HomeUncategorizedಜವನೆರ್ ಬೆದ್ರ ಅಬ್ಬಕ್ಕ ಬ್ರಿಗೇಡ್ ಮಹಿಳಾ ದಿನಾಚರಣೆ

ಜವನೆರ್ ಬೆದ್ರ ಅಬ್ಬಕ್ಕ ಬ್ರಿಗೇಡ್ ಮಹಿಳಾ ದಿನಾಚರಣೆ

ಮೂಡುಬಿದಿರೆ : ಜವನೆರ್ ಬೆದ್ರ ಫೌಂಡೇಶನ್(ರಿ)ಇದರ ನೂತನ ಮಹಿಳಾ ಘಟಕ ಅಬ್ಬಕ್ಕ ಬ್ರಿಗೇಡ್ ವತಿಯಿಂದ ಮೂಡುಬಿದರೆ ಅರಮನೆ ಬಾಗಿಲಿನಲ್ಲಿರುವ ರಾಣಿ ಅಬ್ಬಕ್ಕ ಕಿರು ಉದ್ಯಾನ ವನದಲ್ಲಿ ಮೂಡುಬಿದಿರೆಯ ಮಣ್ಣಿನ ಮಗಳು ವೀರರಾಣಿ ಅಬ್ಬಕ್ಕ ಅವರ ಪುತ್ತಳಿಗೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಲಾಯಿತು , ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ನಿವೃತ್ತ ಶಿಕ್ಷಕಿ ಶ್ರೀಮತಿ ಸುಮಲತಾ ಅವರಿಗೆ ಗೌರವ ಸನ್ಮಾನ ಅರ್ಪಿಸುವ ಮುಖಾಂತರ ಮಹಿಳಾ ದಿನಾಚರಣೆ ಆಚರಿಸಲಾಯಿತು , ಇದೇ ಸಂದರ್ಭದಲ್ಲಿ ಜವನೆರ್ ಬೆದ್ರ ಅಬ್ಬಕ್ಕ ಬ್ರಿಗೇಡ್ ನ ನೂತನ ಸಂಚಾಲಕಿಯಾಗಿ ಆಯ್ಕೆ ಆದ ಶ್ರೀಮತಿ ಸಹನಾ ಸುಧೀರ್ ನಾಯಕ್, ಗೌರವ ಮಾರ್ಗದರ್ಶಕರಾಗಿ ಶ್ರೀಮತಿ ಗೀತಾ ಆಚಾರ್ಯ , ಶ್ರೀಮತಿ ಸುಮಲತಾ ಕೆ ಶೆಟ್ಟಿ, ಸಹ ಸಂಚಾಲಕಿಯರಾಗಿ ಶ್ರೀಮತಿ ಸೌಮ್ಯ ಗಣೇಶ್ ದೇವಾಡಿಗ ಮತ್ತು ಶ್ರೀಮತಿ ಸಾರಿಕಾ ಹೆಗ್ಡೆ ಅವರಿಗೆ ಹೂ ನೀಡಿ ಅಭಿನಂದನೆ ಸಲ್ಲಿಸಲಾಯಿತು ಸಂದರ್ಭದಲ್ಲಿ ಸಂಘಟನೆಯ ಸ್ಥಾಪಕ ಅಧ್ಯಕ್ಷರಾದ ಅಮರಕೋಟೆ, ಸಂಘಟನಾ ಕಾರ್ಯದರ್ಶಿಯಾದ ಗುರುಪ್ರಸಾದ್ ಬಾಬು ಪೂಜಾರಿ, ಯುವ ಸಂಘಟನೆ ಸಂಚಾಲಕರಾದ ನಾರಾಯಣ ಪದುಮಲೆ , ರಕ್ತ ನಿಧಿ ಸಂಚಾಲಕರಾದ ಮನು ಎಸ್ ಆಚಾರ್ಯ ಪ್ರಮುಖರಾದ ಅರುಣ್ ಕುಮಾರ್, ಸಂಪತ್ ಪೂಜಾರಿ, ಗಣೇಶ್ ಪೈ ಶ್ರೀಮತಿ ಅಮಿತಾ, ಶ್ರೀಮತಿ ಸುಕನ್ಯ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular