spot_img
25.6 C
Udupi
Monday, December 4, 2023
spot_img
spot_img
spot_img

ಉಡುಪಿ ತುಳುಕೂಟ ಅಧ್ಯಕ್ಷರಾಗಿ ಜಯಕರ್ ಶೆಟ್ಟಿ ಇಂದ್ರಾಳಿ ಪುನರಾಯ್ಕೆ

ತುಳುಕೂಟ ಉಡುಪಿ ಇದರ 2023-24ನೇ ಸಾಲಿನ ನೂತನ ಅಧ್ಯಕ್ಷರಾಗಿ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ಪುನರಾಯ್ಕೆಯಾಗಿದ್ದಾರೆ.ಉಡುಪಿ ನಗರದ ಜಗನ್ನಾಥ ಸಭಾಭವನದಲ್ಲಿ ಇತ್ತೀಚೆಗೆ ನಡೆದ ತುಳು ಕೂಟದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಸ್ಥಾಪಕಾಧ್ಯಕ್ಷರಾಗಿ ಡಾ.ಭಾಸ್ಕರಾನಂದ ಕುಮಾರ್, ಉಪಾಧ್ಯಕ್ಷರಾಗಿ ಭುವನ ಪ್ರಸಾದ ಹೆಗ್ಡೆ, ಮನೋರಮ ಎಸ್.ಶೆಟ್ಟಿ. ಪ್ರಧಾನ ಕಾರ್ಯದರ್ಶಿಯಾಗಿ ಗಂಗಾಧರ ಕಿದಿಯೂರ್, ಜತೆ ಕಾರ್ಯದರ್ಶಿಯಾಗಿ ಮೋಹನ್ ಶೆಟ್ಟಿ ಮೂಡ ನಿಡಂಬೂರು, ರಶ್ಮೀ ರಮೇಶ್ ಶೆಣೈ, ಸಂತೋಷ್ ಕುಮಾರ್, ಕೋಶಾಧಿಕಾರಿ ಯಾಗಿ ಚೈತನ್ಯ ಎಂ.ಜಿ., ಸಂಘಟನಾ ಕಾರ್ಯದರ್ಶಿ ಗಳಾಗಿ ಲಕ್ಷೀಕಾಂತ್ ಬೆಸ್ಕೂರ್, ದಿವಾಕರ್ ಸನಿಲ್, ಮನೋಹರ್ ಶೆಟ್ಟಿ ತೋನ್ಸೆ, ಸರೋಜ ಯಶ್ವಂತ್, ಆಂತರಿಕ ಲೆಕ್ಕ ಪರಿಶೋಧಕರಾಗಿ ಸದಾಶಿವ ಭಟ್ ಆಯ್ಕೆಯಾದರು. ತುಳು ಮಿನದನ ಸಂಚಾಲಕರಾಗಿ ಡಾ.ಯಾದವ ವಿ.ಕರ್ಕೇರ, ಕೆಮ್ತೂರು ನಾಟಕ ಪ್ರಶಸ್ತಿ ಸಂಚಾಲಕರಾಗಿ ಪ್ರಭಾಕರ ಭಂಡಾರಿ, ನಿಟ್ಟೂರು ತುಳು ಭಾವಗೀತೆ ಸ್ಪರ್ಧೆ ಸಂಚಾಲಕರಾಗಿ ಜಯರಾವ್ ಶೆಟ್ಟಿಗಾರ್ ಎಂ., ಪಣಿಯಾಡಿ ಕಾದಂಬರಿ ಪ್ರಶಸ್ತಿ ಸಂಚಾಲಕರಾಗಿ ತಾರಾ ಉಮೇಶ್ ಆಚಾರ್ಯ, ಮದರಂಗಿದ ರಂಗ್ ಸ್ಪರ್ಧೆ ಸಂಚಾಲಕರಾಗಿ ಯಶೋಧಾ ಕೇಶವ್, ಆಟಿದ ಲೇಸ್ ಸಂಚಾಲಕರಾಗಿ ವಿದ್ಯಾ ಸರಸ್ವತಿ, ಆಟಿದ ಕಷಾಯ ಸಂಚಾಲಕರಾಗಿ ರತ್ನಾಕರ ಇಂದ್ರಾಳಿ, ಸೋನದ ಸೇಸೆ ಸಂಚಾಲಕರಾಗಿ ವೇದಾವತಿ ಶೆಟ್ಟಿ, ತುಳುವೆರೆ ಗೊಬ್ಬುಲು ಸಂಚಾಲಕರಾಗಿ ಮೊಹಮ್ಮದ್ ಮೌಲಾ, ತುಳುವ ನಡಕೆ ಸಂಚಾಲಕರಾಗಿ ದಯಾನಂದ ಡಿ., ತುಳು ಪಠ್ಯಸಂಚಾಲಕರಾಗಿ ವಿಶ್ವನಾಥ ಬಾಯಿರಿ, ಮಾಧ್ಯಮ ಸಂಚಾಲಕರಾಗಿ ಭಾರತಿ ಟಿ.ಕೆ., ಕಾರ್ಯಕಾರಿ ಸಮಿತಿ ಸದಸ್ಯರಾಗಿ ಯು.ಜೆ.ದೇವಾಡಿಗ, ಜ್ಯೋತಿ ಎಸ್.ದೇವಾಡಿಗ, ಶೇಖರ್ ಕಲ್ಮಾಡಿ, ಪ್ರಕಾಶ್ ಸುವರ್ಣ ಕಟಪಾಡಿ, ಉದಯಕುಮಾರ್ ಶೆಟ್ಟಿ, ಪ್ರಸನ್ನ ಕುಮಾರ್, ಗಣೇಶ್ ಕೋಟ್ಯಾನ್, ಸಂಧ್ಯಾ ಉದ್, ಪ್ರಭಾವತಿ ವಿ., ಅಶೋಕ್ ಶೆಟ್ಟಿ ಕೆ., ವಿವೇಕಾನಂದ ಎನ್., ಪೂರ್ಣಿಮ ಸುದರ್ಶನ್, ಜಯಶ್ರೀ ಬಿ., ಸುಮಾಲಿನಿ ದಯಾನಂದ್, ವಿ.ಎಸ್.ಉಮ್ಮರ್, ಶಿಲ್ಪಾಜೋಷಿ, ರೂಪಾ ಆಚಾರ್ಯ,ಗೌರವ ಸಲಹೆಗಾರರಾಗಿ ವಿಶ್ವನಾಥ ಶೆಣೈ ಉಡುಪಿ, ಬನ್ನಂಜೆ ಬಾಬು ಅಮೀನ್, ಮುರಳೀಧರ ಉಪಾಧ್ಯಾಯ, ಡಾ.ಗಣನಾಥ ಎಕ್ಕಾರ್, ಎಸ್.ವಿ.ಭಟ್, ಪುರುಷೋತ್ತಮ ಶೆಟ್ಟಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Related Articles

Stay Connected

0FansLike
3,912FollowersFollow
0SubscribersSubscribe
- Advertisement -

Latest Articles