Monday, February 10, 2025
Homeಉಡುಪಿಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅದ್ಯಕ್ಷರಾಗಿ ಜಯಕರ ಶೆಟ್ಟಿ ಇಂದ್ರಾಳಿ ಅವಿರೋಧ ಆಯ್ಕೆ 

ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅದ್ಯಕ್ಷರಾಗಿ ಜಯಕರ ಶೆಟ್ಟಿ ಇಂದ್ರಾಳಿ ಅವಿರೋಧ ಆಯ್ಕೆ 

ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿ,. ಉಡುಪಿ‌ ಇದರ 2025-2026 ನೇ ಸಾಲಿನಿಂದ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಬಿ.ಜಯಕರ ಶೆಟ್ಡಿ ಇಂದ್ರಾಳಿ ಇವರು ಹಾಗೂ ಉಪಾಧ್ಯಕ್ಷರಾಗಿ ಅಶೋಕ್ ಕುಮಾರ್ ಬಲ್ಲಾಳ್ ಇವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

ಇವರನ್ನು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನ ಆಡಳಿತ ಮಂಡಲಿ ಹಾಗೂ ಸಿಬ್ಬಂದಿ  ವರ್ಗದವರ ಪರವಾಗಿ ಆಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರು‌ ಹಾಗೂ ‌ಶಾಸಕರಾದ ಯಶ್ ಪಾಲ್‌  ಎ ಸುವರ್ಣ ,‌ ನಿರ್ದೇಶಕರುಗಳಾದ  ಹೆಚ್‌.ಶೆಟ್ಟಿಯವರನ್ನು ಶೆಟ್ಟಿ, ಎನ್ .ಮಂಜಯ್ಯ ಶೆಟ್ಟಿ, ಬಿ. ಕರುಣಾಕರ ಶೆಟ್ಡಿ, ಪ್ರಸಾದ್ ಎಸ್.ಶೆಟ್ಟಿ, ಸುಧೀರ್‌ ವೈ ,  ಬಿ. ಪ್ರದೀಪ್ ಯಡಿಯಾಳ್ , ಅನಿಲ್‌ ಎಸ್ ಪೂಜಾರಿ,ಅಲೆವೂರು ಹರೀಶ್‌‌‌ ಕಿಣಿ  , ಬಿ.ಅರುಣ್ ಕುಮಾರ್ ಹೆಗ್ಡೆ, ಶ್ರೀಧರ್ ಪಿ.ಎಸ್ .ಸಹಕಾರ‌ ಸಂಘಗಳ ಉಪನಿಬಂಧಕರಾದ ಕೆ.ಆರ್ ಲಾವಣ್ಯ .ಉಡುಪಿ‌ ಜಿಲ್ಲಾ ಸಹಕಾರ ಯೂನಿಯನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸಹಕಾರ ಸಂಘಗಳ ಸಹಾಯಕ‌ ನಿಬಂಧಕರಾದ ಸುಕನ್ಯ ಇವರು ಚುನಾವಣಾ ರಿಟರ್ನಿಂಗ್   ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಉಡುಪಿ ಶಾಸಕ ಯಶಪಾಲ್ ಸುವರ್ಣ  ಅಧ್ಯಕ್ಷರಾಗಿ ಆಯ್ಕೆ ಯಾದ ಜಯಕರ  ಶೆಟ್ಟಿ ಇಂದ್ರಾಳಿ ಯವರನ್ನು ಅಭಿನಂದಿಸಿದರು.   

RELATED ARTICLES
- Advertisment -
Google search engine

Most Popular