Tuesday, January 14, 2025
Homeಬೆಂಗಳೂರುಜಯನಗರ : ದೃಷ್ಟಿ ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ ನೂತನ ವರ್ಷದ ಕ್ಯಾಲೆಂಡರ್‌ ಬಿಡುಗಡೆ ಕಾರ್ಯಕ್ರಮ

ಜಯನಗರ : ದೃಷ್ಟಿ ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ ನೂತನ ವರ್ಷದ ಕ್ಯಾಲೆಂಡರ್‌ ಬಿಡುಗಡೆ ಕಾರ್ಯಕ್ರಮ

ಜಯನಗರ ದೃಷ್ಟಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇದರ ವತಿಯಿಂದ 2025 ರ ನೂತನ ವರ್ಷದ ಕ್ಯಾಲಂಡರ್ ಬಿಡುಗಡೆ ಕಾರ್ಯಕ್ರಮ ಜಯನಗರ ದೃಷ್ಟಿ ಚಾರಿಟೇಬಲ್ ಬಸ್ಸು ತಂಗುದಾಣ ಬಳಿ ಡಿ 26 ರಂದು ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಕ್ಯಾಲಂಡರ್ ಬಿಡುಗಡೆ ಮಾಡಿ ಮಾತನಾಡಿದ ಸುಳ್ಯ ನಗರ ಪಂಚಾಯತ್‌ ಅದ್ಯಕ್ಷೆ ಶಶಿಕಲಾ ನೀರಬಿದಿರೆ ‘ದೃಷ್ಟಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಸಂಸ್ಥೆಯು ಕಳೆದ ಹಲವಾರು ವರ್ಷಗಳಿಂದ ಸುಳ್ಯ ಭಾಗದಲ್ಲಿ ಸಾಮಾಜಿಕ,ಆರೋಗ್ಯ, ಶೈಕ್ಷಣಿಕ ವಿಷಯಗಳಲ್ಲಿ ಸಹಾಯ ಹಸ್ತವನ್ನು ನೀಡುತ್ತಾ ಉತ್ತಮ ಕಾರ್ಯಕ್ರಮವನ್ನು ಮಾಡಿಕ್ಕೊಂಡು ಬಂದಿದೆ. ಈ ಸಂಸ್ಥೆಯು ಸಮಾಜದಲ್ಲಿ ಬಡವರ, ನೊಂದವರ, ಹಾಗೂ ಶೈಕ್ಷಣಿಕ ಕೇಂದ್ರಗಳಿಗೆ ಆಶಾ ದೀಪವಾಗಿ ಬೆಳೆದಿದೆ. ಇದರ ಅಧ್ಯಕ್ಷರಾದ ಹಿರಿಯರಾದ ಬಾಲಕೃಷ್ಣ ಭಟ್ ಕೊಡಂಕೇರಿ ರವರ ಶ್ರಮ ಶ್ಲಾಘನೀಯ ಎಂದು ಕಾರ್ಯಕ್ರಮಕ್ಕೆ ಶುಭಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್‌ ನ ಅಧ್ಯಕ್ಷ ಬಾಲಕೃಷ್ಣ ಭಟ್‌ ಕೊಡಂಕೇರಿ ವಹಿಸಿದ್ದರು.

RELATED ARTICLES
- Advertisment -
Google search engine

Most Popular