Sunday, July 14, 2024
Homeಅಪರಾಧಬೆಂಗಳೂರು-ಮಂಗಳೂರು ರೈಲಿನಲ್ಲಿ 3.91 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಬೆಂಗಳೂರು-ಮಂಗಳೂರು ರೈಲಿನಲ್ಲಿ 3.91 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಮಂಗಳೂರು: ಬೆಂಗಳೂರು-ಮಂಗಳೂರು ರೈಲಿನ ಏಸಿ ಕೋಚ್ ನಲ್ಲಿ 3.91 ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳವಾಗಿರುವ ಘಟನೆ ನಡೆದಿದೆ. ನಗರದ ಜಪ್ಪುವಿನ ವೃದ್ಧೆಯೊಬ್ಬರು ತಮ್ಮ ಮಗಳು ಹಾಗೂ ಮೊಮ್ಮಕ್ಕಳೊಂದಿಗೆ ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿಗೆ ಬರುವ ರೈಲಿನಲ್ಲಿ ಬಂದು ಮನೆಗೆ ತಲುಪಿ ವ್ಯಾನಿಟಿ ಬ್ಯಾಗ್ ಪರಿಶೀಲಿಸಿದಾಗ ಬ್ಯಾಗನಲ್ಲಿಟ್ಟಿದ್ದ ಎರಡು ಬಳೆಗಳು, ಸರ ಸೇರಿದಂತೆ ಒಟ್ಟು59.885 ಗ್ರಾಂ ತೂಕದ ಚಿನ್ನಾಭರಣ ಕಳವಾಗಿರುವುದು ಗಮನಕ್ಕೆ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ವೃದ್ಧೆಯ ಮಗಳು ಮತ್ತು ಇಬ್ಬರು ಮೊಮ್ಮಕ್ಕಳು ರಾತ್ರಿ 11 ಗಂಟೆಯ ನಂತರ ಮಲಗಿದ್ದರು. ವೃದ್ಧೆ ಎಚ್ಚರವಾಗಿದ್ದರು. ಮೈಸೂರು ಬಿಟ್ಟ ಬಳಿಕ ಒಬ್ಬ ಪ್ರಯಾಣಿಕ ಅವರ ಪಕ್ಕದ ಸೀಟಿನಲ್ಲಿ ಕುಳಿತಿದ್ದ. ವ್ಯಕ್ತಿ ಮಲಗದೆ ಲಗೇಜ್ ಗಳನ್ನೇ ನೋಡುತ್ತಿದ್ದ. ಸುಬ್ರಹ್ಮಣ್ಯದಲ್ಲಿ ಇಳಿಯುವುದಾಗಿ ಹೇಳಿದ್ದ. ನಂತರ ವೃದ್ಧೆಗೆ ನಿದ್ದೆ ಬಂದಿತ್ತು ಎಂದು ರೈಲ್ವೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

RELATED ARTICLES
- Advertisment -
Google search engine

Most Popular