ಇಳಂತಿಳ ಜ್ಞಾನ ಭಾರತಿ ಶಾಲೆ ಉಪ್ಪಿನಂಗಡಿ ಇಲ್ಲಿ ಶಾಲಾ ವಾರ್ಷಿಕೋತ್ಸವ ಡಿಸೆಂಬರ್ 21 ಸಂಜೆ ನಡೆಯಲಿದ್ದು ವಿಶೇಷ ಅತಿಥಿಯಾಗಿ ಡಾಕ್ಟರ್ ರಾಜಾರಾಮ್ ಕೆ ಬಿ ಖ್ಯಾತ ದಂತವೈದ್ಯರು ರೋಟರಿ ಕ್ಲಬ್ ಉಪ್ಪಿನಂಗಡಿ ಇದರ ಅಸಿಸ್ಟೆಂಟ್ ಗವರ್ನರ್ ಭಾಗವಹಿಸಲಿದ್ದಾರೆ. ನಮ್ಮ ಸಂಸ್ಥೆಯ ಉಪಾಧ್ಯಕ್ಷರಾದ ಬಡೀಲ್ ಹುಸೈನ್ ನವರು ನೂತನ ಮುಖ್ಯ ದ್ವಾರವನ್ನು(ಗೇಟ್)ಉದ್ಘಾಟನೆ ಮಾಡಲಿದ್ದಾರೆ. ಅದೇ ರೀತಿ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಜನಾಬ್ ಶ್ರೀ ಇಸಾಕ್ ಇಂಜಿನಿಯರ್ ಮತ್ತು ಸಂಸ್ಥೆಯ ಪ್ರಧಾನ ಕಾನೂನು ಸಲಹೆಗಾರರಾದ ಅಡ್ವೊಕೇಟ್ ಶ್ರೀ ಅಶ್ರ್ರಫ್ ಅಗ್ನಾಡಿ ಮತ್ತು ಇಳಂತಿಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ತಿಮ್ಮಪ್ಪ ಗೌಡ ಭಾಗವಹಿಸಲಿದ್ದಾರೆ. ಮತ್ತು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಇಕ್ಬಾಲ್ ಜೋಗಿಬೆಟ್ಟು ಸೇರಿದಂತೆ ಉಪ್ಪಿನಂಗಡಿ ಕೇಂದ್ರ ಮಾಲಿಕುದೀನಾರ್ ಜುಮಾಮಸೀದಿಯ ಅಧ್ಯಕ್ಷರಾದ ಶ್ರೀ ಯೂಸುಫ್ ಹಾಜಿ ಹೇಂತಾರ್ ಭಾಗವಹಿಸಲಿದ್ದಾರೆ.
ಸಂಸ್ಥೆಯ ಸಂಚಾಲಕರಾದ ರವೂಫ್ ಯು ಟಿ ಮತ್ತು ಪ್ರಾಂಶುಪಾಲರಾದ ಇಬ್ರಾಹಿಂ ಕಲೀಲ್ ಹೇಂತಾರ್ ಎಲ್ಲಾ ರಿಗೂ ಶುಭ ಹಾರೈಸಿದ್ದಾರೆ.