ದೊಡ್ಡಬಳ್ಳಾಪುರ : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ, ದೊಡ್ಡಬಳ್ಳಾಪುರ ಇದರ ಸಹಭಾಗಿತ್ವದಲ್ಲಿ ಜೂನ್ 24ರಂದು ಬೆಳಗ್ಗೆ 10 ರಿಂದ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಈ ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ FOX Conn(I-phone) ಮತ್ತು Pondhon ಪ್ರಖ್ಯಾತ ಕಂಪನಿಗಳು ಆಗಮಿಸುತ್ತಿದ್ದು. ಬಿಎ, ಬಿಕಾಂ, ಬಿ ಎಸ್ಸಿ, ಎಂಎ. ಎಂಕಾಂ, ಎಂಎಸ್ಸಿ ಹಾಗೆ ಪ್ರಸ್ತುತ ಅಂತಿಮ ವರ್ಷದಲ್ಲಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳು. ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಸುವರ್ಣ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಸದಾಶಿವ ರಾಮಚಂದ್ರ ಗೌಡರು ತಿಳಿಸಿದ್ದಾರೆ.
ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಎರಡು Resume ದಾಖಲೆಯೊಂದಿಗೆ ಹಾಜರಾಗಲು ಕಾಲೇಜಿನ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಗಾಗಿ ಸಂಪರ್ಕಿಸಿ.
ಪ್ರಾಂಶುಪಾಲರು:9449724240
ಡಾ.ಸಿದ್ದರಾಮ ರಾಜು,placement officer.9448662553.