Sunday, July 14, 2024
Homeಅಪರಾಧಉದ್ಯೋಗ ಆಮಿಷ: ವ್ಯಕ್ತಿಗೆ 7.75 ಲಕ್ಷಾಂತರ ರೂಪಾಯಿ ವಂಚನೆ

ಉದ್ಯೋಗ ಆಮಿಷ: ವ್ಯಕ್ತಿಗೆ 7.75 ಲಕ್ಷಾಂತರ ರೂಪಾಯಿ ವಂಚನೆ

ಮಣಿಪಾಲ: ಪಾರ್ಟ್‌ಟೈಮ್‌ ಉದ್ಯೋಗ ನೀಡುವುದಾಗಿ ತಿಳಿಸಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ.ವಂಚಿಸಿದ ಘಟನೆ ನಡೆದಿದೆ.

ಗಣೇಶ್‌ ಅವರ ಮೊಬೈಲ್‌ಗೆ ಅನಾಮಧೇಯ ವ್ಯಕ್ತಿ ಕರೆ ಮಾಡಿ ಪಾರ್ಟ್‌ಟೈಮ್‌ ಉದ್ಯೋಗ ನೀಡುವುದಾಗಿ ಟೆಲಿಗ್ರಾಮ್‌ನಲ್ಲಿರುವ ಗೂಗಲ್‌ ಗ್ಲೋಬಲ್‌ ವರ್ಕಿಂಗ್‌ ಗ್ರೂಪ್‌ಗೆ ಸೇರುವಂತೆ ತಿಳಿಸಿದ್ದರು. ಅದರಂತೆ ಗಣೇಶ್‌ ಅವರು ಟೆಲಿಗ್ರಾಮ್‌ ಗ್ರೂಪ್‌ಗೆ ಸೇರಿ ವಿವಿಧ ರೀತಿಯ ಟಾಸ್ಕ್ಗಳಿಗೆ ಹಣವನ್ನು ಜಮೆ ಮಾಡಿದ್ದರು. ಆರಂಭದಲ್ಲಿ ಅವರ ಖಾತೆಗೆ ಹಣ ಜಮೆಯಾಗುತ್ತಿತ್ತು. ಬಳಿಕ ಅಪರಿಚಿತರು ಅವರ ಖಾತೆಯಿಂದ 7.75 ಲ.ರೂ.ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದಾರೆ. ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular