spot_img
29.6 C
Udupi
Wednesday, June 7, 2023
spot_img
spot_img
spot_img

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಉದ್ಯೋಗವಕಾಶ!

ಇದೀಗ ಹಲವಾರು ಸಂಸ್ಥೆಗಳು ಹುದ್ದೆಗೆ ಅರ್ಜಿ ಆಹ್ವಾನಿಸುತ್ತಿದೆ. ಹಾಗೆಯೇ ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (Karnataka Examinations Authority) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ (KEA Recruitment 2023). ಒಟ್ಟು 3 ಹುದ್ದೆ ಖಾಲಿ ಇದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ನಿರುದ್ಯೋಗಿಗಳಿಗೆ, ಕರ್ನಾಟಕ ಸರ್ಕಾರದ ಉದ್ಯೋಗ ಬಯಸುವವರಿಗೆ ಇದು ಉತ್ತಮ ಅವಕಾಶವಾಗಿದ್ದು, ಈ ಕೂಡಲೇ ಅರ್ಜಿ ಸಲ್ಲಿಸಿ.

ಹುದ್ದೆಯ ವಿವರ:
ಡೇಟಾಬೇಸ್ ಅಸ್ಮಿನಿಸ್ಟ್ರೇಟರ್ (Database Administrator)- 1
ಸೀನಿಯರ್ ಪ್ರೋಗ್ರಾಮರ್ (Senior Programmer)- 2

ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ -07/03/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 12/3/2023

ವಿದ್ಯಾರ್ಹತೆ: ಬಿಇ/ಬಿ.ಟೆಕ್, ಎಂಎಸ್ಸಿ, ಎಂಸಿಎ, CS/ITಯಲ್ಲಿ ಎಂ.ಟೆಕ್

ಅನುಭವ:
• ಡೇಟಾಬೇಸ್ ಅಸ್ಮಿನಿಸ್ಟ್ರೇಟರ್ ಹುದ್ದೆಗೆ, ವೆಬ್ಲಾಜಿಕ್ ಸರ್ವರ್‌ನಲ್ಲಿ ನಮೂನೆಗಳು ಮತ್ತು ವರದಿಗಳೊಂದಿಗೆ RDBMS, SQL ಸರ್ವರ್, Oracle 12 C ನಲ್ಲಿ ಅಭ್ಯರ್ಥಿಗಳು 3 ವರ್ಷಕ್ಕಿಂತ ಹೆಚ್ಚಿನ ಅನುಭವವನ್ನು ಪಡೆದಿರಬೇಕು.
• ಸೀನಿಯರ್ ಪ್ರೋಗ್ರಾಮರ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ
ಅಭ್ಯರ್ಥಿಗಳು ASP.NET, SSRS, SSIS, ವೆಬ್ ಅಪ್ಲಿಕೇಶನ್ ಸಿಸ್ಟಮ್‌ನಲ್ಲಿ 3 ವರ್ಷಗಳಿಗಿಂತ ಹೆಚ್ಚಿನ ಅನುಭವವನ್ನು ಪಡೆದಿರಬೇಕು.

ಮಾಸಿಕ ವೇತನ:
ಡೇಟಾಬೇಸ್ ಅಸ್ಮಿನಿಸ್ಟ್ರೇಟರ್- ₹ 75,000
ಸೀನಿಯರ್ ಪ್ರೋಗ್ರಾಮರ್- ₹ 1,00,000

ಉದ್ಯೋಗದ ಸ್ಥಳ : ಬೆಂಗಳೂರು (banglore)

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಪ್ರಾಕ್ಟಿಕಲ್ ಟೆಸ್ಟ್​ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡಿ, ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ [email protected] ಗೆ ಕಳುಹಿಸಬೇಕು.

Related Articles

Stay Connected

0FansLike
3,804FollowersFollow
0SubscribersSubscribe
- Advertisement -

Latest Articles