ಚಿಲಿಂಬಿ : ತುಳು ರಂಗಭೂಮಿಗೆ ನಗುವೇ ಪ್ರಧಾನ, ಅದು ಇಲ್ಲ ಎಂದರೆ ನಾಟಕ ಪ್ರೇಕ್ಷಕರ ಕೊರತೆ ಎಂದು ಅಪವಾದ ಇತ್ತು . ಆದರೆ ಕಳೆದ 3 ವರ್ಷದಲ್ಲಿ ಈ ಚಿತ್ರಣವೇ ಬದಲಾಗಿದೆ. ಉತ್ತಮ ಪೌರಾಣಿಕ, ಜಾನಪದ ನಾಟಕಕ್ಕೆ ಬೇಡಿಕೆ ಜಾಸ್ತಿಯಾಗಿದೆ ಎಂದು ರಂಗ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ಬೈಲ್ ಹೇಳಿದರು.

ಶ್ರೀ ಶಿರಿಡಿ ಸಾಯಿಬಾಬಾ ಮಂದಿರ ಆಶ್ರಿತ – ಸಾಯಿಶಕ್ತಿ ಕಲಾಬಳಗ ಉರ್ವ ಚಿಲಿಂಬಿ ವತಿಯಿಂದ ಸಾಯಿಬಾಬಾ ಮಂದಿರಸಲ್ಲಿ ಹೊಸ ನಾಟಕ ‘ಜೋಡು ಜೀಟಿಗೆ’ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.
ರಂಗನಿರ್ದೇಶಕಿ, ಸಾಯಿ ಮಂದಿರದ ಟ್ರಸ್ಟಿ ಲಾವಣ್ಯ ವಿಶ್ವಾಸ್ ದಾಸ್ ಮಾತನಾಡಿ , ಸಾಯಿ ಶಕ್ತಿ ಕಲಾ ಬಳಗದ ‘ಜೋಡು ಜೀಟಿಗೆ’ ನಾಟಕ ಕಲ್ಲುರ್ಟಿ-ಕಲ್ಕುಡ ದೈವದ ಕಥೆಯಾಗಿದೆ , ವಿಭಿನ್ನವಾಗಿ ಮೂಡಿ ಬರಲಿದೆ ಶೀರ್ಷಿಕೆ ಬಿಡುಗಡೆಯ ಮೊದಲೇ 20 ನಾಟಕ ಬುಕ್ಕಿಂಗ್ ಆಗಿದೆ. ಈ ಹೊಸ ನಾಟಕದಲ್ಲಿ ಹೊಸ ಕಲಾವಿದರಿಗೆ ಹೆಚ್ಚಿನ ಆದ್ಯತೆ ಕೊಟ್ಟಿದೆ ಎಂದು ಹೇಳಿದರು.
ಸಾಯಿಬಾಬಾ ಮಂದಿರದ ಆಡಳಿತ ಮೊಕ್ತೇಸರರಾದ ವಿಶ್ವಾಸ್ ಕುಮಾರ್‌ದಾಸ್, ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಪಣೋಲಿಬೈಲ್ ಕ್ಷೇತ್ರದ ಕಾರ್ಯ ನಿರ್ವಹಣಾಧಿಕಾರಿ ದಿವಾಕರ್ ಮುರುಳ್ಯ, ಡಾ. ಕವಿತಾ ಐವನ್ ಡಿಸೋಜ, ಸಾಹಿತಿ ಕೀರ್ತನ್ ಭಂಡಾರಿ, ದೀಪಕ್ ಪಿಲಾರ್, ಕಾರ್ಪೊರೇಟರ್ ಕೇಶವ ಮರೊಳಿ , ಶೈಲೇಶ್ ಮಲ್ಯ, ದೇವಿ ಪ್ರಸಾದ್ ಉಪಸ್ಥಿತರಿದ್ದರು . ಸಂಘದ ಸದಸ್ಯೆ ಶ್ರೀನಿಧಿ ಶೆಟ್ಟಿ ಸ್ವಾಗತಿಸಿದರು.
ಡಾ.ಪ್ರಿಯಾ ಹರೀಶ್ ಕಾರ್ಯಕ್ರಮ ನಿರೂಪಿಸಿದರು.