ಕೊಂಕಣಿ ಭಾಷೆಯನ್ನು ಕಟ್ಟಿ ಬೆಳೆಸಿದ ಮಹಾನುಭಾವರ ಪೈಕಿ, ಅಗ್ರಮಾನ್ಯರೆನಿಸುವ, ಕೊಂಕಣಿಗೆ ಪ್ರಥಮ ಬಾರಿಗೆ ಜ್ಞಾನಪೀಠ, ಪ್ರಥಮ ಕೇಂದ್ರ ಸಾಹಿತ್ಯ ಆಕಾಡೆಮಿ ಫ್ಹೆಲೊಶಿಫ್ ಹಾಗೂ ಪ್ರಥಮ ಸಾಹಿತ್ಯ ಪುರಸ್ಕಾರ, ಅಲ್ಲದೆ ಕೊಂಕಣಿ ಸಾಹಿತಿಯೊಬ್ಬನಿಗೆ ಪ್ರಥಮ ಪದ್ಮವಿಭೂಷಣದ ಗರಿ ತಂದುಕೊಟ್ಟ ಸ್ವಾತಂತ್ರ್ಯ ಹೋರಾಟಗಾರ, ಗೋವಾ ವಿಮುಕ್ತಿ- ರಾಜ್ಯ ಸ್ಥಾನಮಾನ- ಕೊಂಕಣಿ ರಾಜ್ಯ ಭಾಷೆಗಾಗಿ ಮುಂಚುಣಿಯ ನೇತಾರ- ಹಿರಿಯ ಗಾಂಧೀವಾದಿ, ಬುದ್ಧ, ಲೊಹಿಯಾ ತತ್ವ ಪ್ರತಿಪಾದಕ ದಿ. ರವೀಂದ್ರ ಕೇಳೆಕರ್ ಅವರ ಜನ್ಮಶತಾಬ್ದಿ ಆಚರಣೆಯನ್ನು ವಿಶ್ವ ಕೊಂಕಣಿ ಕೇಂದ್ರದಲ್ಲಿ ಮಾರ್ಚ್ ದಿ 15 ಶನಿವಾರದಂದು ವಿಜ್ರಂಭಣೆಯಿಂದ ಆಚರಿಸಲಾಗುವುದು.
ಕಾರ್ಯಕ್ರಮಗಳ ವಿವರ:
ಈ ದಿನ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿ.ಎ. ನಂದಗೋಪಾಲ್ ಶೆಣೈ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 9.30 ಕ್ಕೆ ಆರಂಭವಾಗುವ ಉದ್ಘಾಟನಾ ಸಮಾರಂಭದಲ್ಲಿ ಗೋವಾ ರಾಜ್ಯ ಭಾಷಾ ನಿರ್ದೇಶನಾಲಯದ ಮುಖ್ಯಸ್ಥರಾದ ಪ್ರಶಾಂತ ಶಿರೋಡಕರ, ಗೋವಾದ ಗಿರೀಶ್ ಕೇಳೆಕರ್, ಸುನಿಲ್ ಸರ್ದೆಸಾಯ್ ಭಾಗವಹಿಸಲಿದ್ದಾರೆ. ಗೋವಾದ ಹೆಸರಾಂತ ಸಾಹಿತಿ ಹಿರಿಯ ನ್ಯಾಯವಾದಿ ಉದಯ್ ಎಲ್ ಭೆಂಬ್ರೆ ಅವರು ರವೀಂದ್ರ ಕೇಳೇಕರ್ ಇವರ ವಿಚಾರಗಳ ಕುರಿತು ಬೀಜ ಭಾಷಣ ಮಾಡಲಿರುವರು ನಂತರ ಪೂ: 11.00 ಕ್ಕೆ ಹೆಸರಾಂತ ಲೇಖಕಿ ಶೀಲಾ ಕೊಳಾಂಬಕರ ಅವರ ಅಧ್ಯಕ್ಷತೆಯಲ್ಲಿ “ರವೀಂದ್ರ ಕೇಳೆಕರ್: ಸ್ಪೂರ್ತಿ ಮತ್ತು ಸೃಜನಶೀಲತೆ”ಯೆಂಬ ವಿಷಯದಲ್ಲಿ ವಿಚಾರಗೋಷ್ಟಿ ನಡೆಯಲಿದ್ದು, ಡಾ ಜಯಂತಿ ನಾಯಕ್, ಚೇತನ್ ಆಚಾರ್ಯ, ಹೆಚ್.ಎಮ್. ಪೆರ್ನಾಳ್, ಹಾಗೂ ವೆಂಕಟೇಶ್ ನಾಯಕ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ
ಮಧ್ಯಾಹ್ನ 12.00 ಕ್ಕೆ ಹಿರಿಯ ಸಾಹಿತಿ ಗೋಕುಲದಾಸ ಪ್ರಭುರವರ ಅಧ್ಯಕ್ಷತೆಯಲ್ಲಿ “ಭೂಮಿ, ಭಾಷೆ, ಸಮಾಜದ ಕುರಿತು ರವೀಂದ್ರ ಕೇಳೆಕರರ ಬದ್ಧತೆ” ಯೆಂಬ ವಿಷಯದಲ್ಲಿ ವಿಚಾರಗೋಷ್ಟಿ ನಡೆಯಲಿದ್ದು ಪ್ರಕಾಶ್ ನಾಯಕ್, ಡಾ ಬಿ ದೇವದಾಸ ಪೈ, ಸಲೀಮಾ ಕೊಥಾರೆ, ಚಂದ್ರಿಕಾ ಮಲ್ಲ್ಯ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು.
ಭೋಜನ ವಿರಾಮದ ನಂತರ ಅಪ: 2.00 ಕ್ಕೆ “ರವೀಂದ್ರ ಕೆಳೇಕರ್: ಹೋರಾಟ ಮತ್ತು ಸಾಧನೆ”ಈ ವಿಷಯದ ಮೇಲೆ ಡಾ. ಕಿರಣ ಬುಡ್ಕುಳೆ ಇವರ ನಡೆಸಿ ಕೊಡುವ ಸಂದರ್ಶನ ಮಾತುಕತೆಯಲ್ಲಿ ದಿಲೀಪ್ ಬೊರ್ಕರ್, ಗಿರೀಶ್ ಕೇಳೆಕರ್, ಪೂನಮ್ ಬುರ್‍ಯೆ ಇವರುಗಳು ಭಾಗವಹಿಸಲಿದ್ದಾರೆ.ಅಪ: 3.00 ಗಂಟೆಗೆ ವೆಂಕಟೇಶ್ ಬಾಳಿಗಾ ಇವರ ನಿರ್ವಹಣೆಯೊಂದಿಗೆ ಮಂಗಳೂರು ಕೊಂಕಣಿ ಎಮ್. ಎ. ವಿದ್ಯಾರ್ಥಿಗಳ ತಂಡದವರು ಕೇಳೆಕರರ ವಿವಿಧ ಕೃತಿಗಳಿಂದ ಆಯ್ದ ಸಾಹಿತ್ಯ ಭಾಗಗಳ ವಾಚನ ನಡೆಸಿ ಕೊಡಲಿದ್ದಾರೆ.
ಬಳಿಕ ಸಂಜೆ 4.00 ಕ್ಕೆ ಕೇಂದ್ರ ಸಾಹಿತ್ಯ ಆಕಾಡೆಮಿ ನಿರ್ಮಿಸಿರುವ ರವೀಂದ್ರ ಕೇಳೆಕರ್ ಜೀವನ ಮತ್ತು ಸಾಧನೆಯ ಬಗ್ಗೆ ಸಾಕ್ಷ್ಯ ಚಿತ್ರ ಪ್ರದರ್ಶನ ನಡೆಯಲಿದೆ