ದಾವಣಗೆರೆ:ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ವನಿತಾ ಸಾಹಿತ್ಯ ವೇದಿಕೆಯ ಸಂಯುಕ್ತಾಶ್ರಯದಲ್ಲಿ ದಿನಾಂಕ 13-7-2024ನೇ ಶನಿವಾರ ಸಂಜೆ 4-30ಕ್ಕೆ ದಾವಣಗೆರೆ ವಿದ್ಯಾನಗರ ರಸ್ತೆಯಲ್ಲಿರುವ ಕುವೆಂಪು ಕನ್ನಡ ಭವನದ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ವೇದಿಕೆಯಲ್ಲಿ ಸಾಹಿತಿ, ಕವಯತ್ರಿ ಶ್ರೀಮತಿ ಕೋಮಲಾ ವಸಂತ್‌ಕುಮಾರ್ ರವರ “ಭಕ್ತಿ ಬಾವ ಲಹರಿ” ಪುಸ್ತಕ ಲೋಕಾರ್ಪಣೆ ಆಗಲಿದೆ ಎಂದು ಪರಿಷತ್ತಿನ ಕಾರ್ಯದರ್ಶಿ ಅರುಂಧತಿ ರಮೇಶ್ ತಿಳಿಸಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ವನಿತಾ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಮಲ್ಲಮ್ಮ ನಾಗರಾಜ್ ವಹಿಸಿಕೊಳ್ಳಲಿದ್ದು, ಸಮಾರಂಭದ ಉದ್ಘಾಟನೆಯನ್ನು ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷರಾದ ಬಿ.ವಾಮದೇವಪ್ಪ ನೆರವೇರಿಸಲಿದ್ದಾರೆ. ಖ್ಯಾತ ಸಾಹಿತಿಗಳಾದ ಚಿತ್ರದುರ್ಗದ ಡಾ. ಲೋಕೇಶ್ ಅಗಸನಕಟ್ಟೆ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಕೃತಿಯ ಅವಲೋಕನವನ್ನು ಸಾಹಿತಿಗಳಾದ ಡಾ|| ಶಶಿಕಲಾ ಕೃಷ್ಣಮೂರ್ತಿ ನಡೆಸಿಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಖ್ಯಾತ ಜ್ಯೋತಿಷಿಗಳಾದ ಡಾ.ಸಿ.ಕೆ.ಆನಂದತೀರ್ಥಚಾರ್, ಹಿರಿಯ ನಾಗರೀಕರ ಸಹಾಯವಾಣಿ ಸಂಯೋಜಕರಾದ ನವೀನ್‌ಕುಮಾರ್ ಆಗಮಿಸಲಿದ್ದಾರೆ. ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಸಮಾರಂಭ ಯಶಸ್ವಿಗೊಳಿಸಬೇಕಾಗಿ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಸುಮತಿ ಜಯಪ್ಪ ವಿನಂತಿಸಿದ್ದಾರೆ.