ಘಾಜಿಯಾಬಾದ್: ಹಣ್ಣಿನ ಜ್ಯೂಸ್‌ನಲ್ಲಿ ಮೂತ್ರ ಬೆರೆಸಿಕೊಡುತ್ತಿದ್ದ ವ್ಯಾಪಾರಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ಈ ಘಟನೆ ನಡೆದಿದೆ. ವ್ಯಾಪಾರಿಯ ಜೊತೆಗೆ 15 ವರ್ಷದ ಬಾಲಕನೊಬ್ಬನನ್ನೂ ವಶಕ್ಕೆ ಪಡೆಯಲಾಗಿದೆ.
ಜ್ಯೂಸ್ ಮಾರಾಟಗಾರ ಹಣ್ಣಿನ ರಸದಲ್ಲಿ ಮಾನವ ಮೂತ್ರ ಬೆರೆಸಿ ನೀಡುತ್ತಿದ್ದ ಬಗ್ಗೆ ಸಾರ್ವಜನಿಕರು ನೀಡಿದ ದೂರನ್ನು ಆಧರಿಸಿ ಆತನನ್ನು ಬಂಧಿಸಲಾಗಿದೆ. ಆರೋಪಿಯನ್ನು ಆಮಿರ್ ಎಂದು ಗುರುತಿಸಲಾಗಿದೆ. ಮಾಹಿತಿಯ ಆಧಾರದಲ್ಲಿ ಸ್ಥಳಕ್ಕೆ ದಾಳಿ ಮಾಡಿದಾಗ, ಆತನ ಅಂಗಡಿಯಲ್ಲಿ ಕ್ಯಾನ್‌ನಲ್ಲಿ ಸಂಗ್ರಹಿಸಿಟ್ಟಿದ್ದ ಮಾನವ ಮೂತ್ರ ಪತ್ತೆಯಾಗಿದೆ ಎಂದು ಎಸಿಪಿ ಅಂಕುರ್ ವಿಹಾರ್ ಭಾಸ್ಕರ್ ವರ್ಮಾ ಹೇಳಿದ್ದಾರೆ. ಮೂತ್ರ ತುಂಬಿದ ಕ್ಯಾನ್ ಬಗ್ಗೆ ಕೇಳಿದಾಗ ಅಂಗಡಿ ಮಾಲೀಕ ಯಾವುದೇ ತೃಪ್ತಿಕರ ಉತ್ತರ ನೀಡಿಲ್ಲ ಎಂದು ಅವರು ಪೊಲೀಸರು ಹೇಳಿದ್ದಾರೆ. ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.