ಉಡುಪಿ ದೊಡ್ಡಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಶ್ರೀ ನಾಗಾಲಯದ ಕಪಿಲ ಮಹರ್ಷಿಗಳ ಸನ್ನಿಧಾನದಲ್ಲಿ ಪರಿವಾರ ಶಕ್ತಿಯಾಗಿ ಶ್ರೀ ಪ್ರಸನ್ನಾಕ್ಷಿಯ ಪ್ರತಿಷ್ಠಾಪನೆಯು ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಶ್ರೀಯುತ ಗಣೇಶ ಸರಳಾಯ ಅವರ ನೇತೃತ್ವದಲ್ಲಿ ನೆರವೇರಲಿದೆ.
ಆ ಪ್ರಯುಕ್ತ ಕ್ಷೇತ್ರದಲ್ಲಿ ಪ್ರತಿಷ್ಠಾ ಪೂರ್ವಭಾವಿ ಕಾರ್ಯಕ್ರಮವಾಗಿ ವಾಸ್ತು ಹೋಮ ರಾಕ್ಷೋಜ್ಞ ಹೋಮ ಪ್ರಕಾರ ಬಲಿ ಪ್ರಸಾದ ಶುದ್ಧಿ, ಸಂಕೋಚ ಹಾಗೂ ಅದಿವಾಸ ಪ್ರಕ್ರಿಯೆಗಳು ತಾರೀಕು ಹನ್ನೊಂದರ ಗುರುವಾರದಂದು ಸಂಜೆ ನೆರವೇರಲಿದೆ.
ತಾರೀಕು 12ರ ಶುಕ್ರವಾರದಂದು ಬೆಳಿಗ್ಗೆ ಆದ್ಯ ಗಣಪತಿ ಹೋಮ, ಪಂಚ ವಿಂಶತಿ ಕಲಶಾರಾಧನೆ , ಪ್ರತಿಷ್ಠ ಪ್ರಧಾನ ಹೋಮ, ಕಪಿಲ ಮಹರ್ಷಿಗಳ ಸನ್ನಿಧಾನದಲ್ಲಿ ನವಕ ಕಲಶ ಪ್ರಧಾನ ಹೋಮ ಕಲಶಾಭಿಷೇಕ
ಶ್ರೀ ಮಹಾ ಚಂಡಿಕಾ ಯಾಗ, ಬ್ರಾಹ್ಮಣ ಸುವಾಸಿನಿ ಆರಾಧನೆ ಕನ್ನಿಕರಾಧನೆ ಮಹಾ ಅನ್ನಸಂತರ್ಪಣೆ ನೆರವೇರಲಿದೆ ಎಂದು ಕ್ಷೇತ್ರ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿರುತ್ತಾರೆ.
ತಾರೀಕು 13ರಂದು ಪಂಚದುರ್ಗ ನಮಸ್ಕಾರ ಪೂಜೆ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿಯ ಸನ್ನಿಧಾನದಲ್ಲಿ ತಾರೀಕು 13ರ ಶನಿವಾರದಂದು ಸಂಜೆ ಗಂಟೆ 5 ರಿಂದ ಪಂಚ ದುರ್ಗ ನಮಸ್ಕಾರ ಪೂಜೆ ನೆರವೇರಲಿದೆ. ಏಕಕಾಲದಲ್ಲಿ ಪಂಚವರ್ಣತ್ಮಕವಾದ ಐದು ಮಂಡಲಗಳಲ್ಲಿ ಪಂಚದೀಪವನ್ನು ಬೆಳಗಿಸಿ ಪಂಚ ದುರ್ಗೆಯರನ್ನು ಆಹ್ವಾನಿಸಿ ವಿಶೇಷ ಮಂತ್ರಗಳಿಂದ ಅರ್ಜಿಸಿ ಆರಾಧಿಸಿ ಆಕೆಯ ಅನುಗ್ರಹವನ್ನು ಯಾಚಿಸುವ ಈ ಮಹಾನ್ ಪೂಜೆಯು ಕ್ಷೇತ್ರದ ಭಕ್ತರಾದ ಸುದೀಪ್ ಪ್ರಿಯಾ ದಂಪತಿಗಳಿಂದ ಪ್ರಾಯಶ್ಚಿತ್ತಪೂರ್ವಕವಾಗಿ ಸಮರ್ಪಿತವಾಗಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.