Saturday, July 20, 2024
Homeತುಳು ಭಾಷೆಜುಲೈ 7: ತುಳುನಾಡ ರಕ್ಷಣಾ ವೇದಿಕೆ ಉಳ್ಳಾಲ ತಾಲೂಕು ಘಟಕ ನೂತನ ಸಾರಥಿಗಳ ಪದಗ್ರಹಣ ಸಮಾರಂಭ

ಜುಲೈ 7: ತುಳುನಾಡ ರಕ್ಷಣಾ ವೇದಿಕೆ ಉಳ್ಳಾಲ ತಾಲೂಕು ಘಟಕ ನೂತನ ಸಾರಥಿಗಳ ಪದಗ್ರಹಣ ಸಮಾರಂಭ

ಉಳ್ಳಾಲ ತಾಲೂಕು ಘಟಕದ ನೂತನ ಸಾರಥಿಗಳ ಪದಗ್ರಹಣ ಸಮಾರಂಭ ದಿನಾಂಕ 7-7-2024 ರವಿವಾರದಂದು ತೊಕ್ಕೊಟ್ಟು – ಮಂಗಳೂರು ವಿಶ್ವವಿದ್ಯಾನಿಲಯ ರಸ್ತೆಯಲ್ಲಿರುವ ಸೇವಾ ಸೌಧ ದಲ್ಲಿರುವ ಉಳ್ಳಾಲ ತಾಲೂಕು ಘಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ನಡೆಯಲಿದೆ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಉದ್ಘಾಟನೆಯನ್ನು
ನಡೆಸಲಿದ್ದು, ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ಅಧ್ಯಕ್ಷತೆ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯರಾದ ಐವನ್ ಡಿಸೋಜಾ, ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ, ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಜನಾಬ್ ಹೈದರ್ ಪರ್ತಿಪ್ಪಾಡಿ, ಅಲ್ಅ ನ್ಸಾರ್ ವಾರಪತ್ರಿಕೆ ಸಂಪಾದಕರಾದ ಜನಾಬ್. ಕೆ. ಎಂ. ಸಿದ್ದೀಖ್ ಮೋಂಟುಗೋಳಿ,
ಜೆ.ಸಿ.ಐ ಮಂಗಳಗಂಗೋತ್ರಿ ಕೊಣಾಜೆಯ ಪೂರ್ವ ಅಧ್ಯಕ್ಷರಾದ
ಶ್ರೀ ಜೆ. ಸಿ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಳ್ಳಾಲ ಅಧ್ಯಕ್ಷರಾದ ವಸಂತ ಕೊಣಾಜೆ, ಭಾಗವಹಿಸಲಿದ್ದು ನೂತನ ಗೌರವ ಅಧ್ಯಕ್ಷರಾಗಿ ಡಾ. ಶೇಕ್ ಭಾವ, ಅಧ್ಯಕ್ಷರಾಗಿ ಡಿ ಐ ಅಬೂಬಕ್ಕರ್ ಕೈರಂಗಳ , ಪ್ರಧಾನ ಕಾರ್ಯದರ್ಶಿ ಯಾಗಿ ಸುಕೇಶ್ ಜಿ.ಕೆ ಉಚ್ಚಿಲ್, ಕೋಶಾಧಿಕಾರಿ ಯಾಗಿ ಅರುಣ್ ಡಿಸೋಜಾ ಸೇರಿದಂತೆ ಇತರ ಪದಾಧಿಕಾರಿಗಳು ಅಧಿಕಾರ ಸ್ವೀಕಾರ ಮಾಡಲಿರುವರು.

RELATED ARTICLES
- Advertisment -
Google search engine

Most Popular