ಮೂಡುಬಿದಿರೆ : ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಮೂಡುಬಿದಿರೆ, ಪವರ್ ಫ್ರೆಂಡ್ಸ್ ಬೆದ್ರ, ಸಮಾಜ ಮಂದಿರ ಮೂಡುಬಿದಿರೆ ಇವರ ಜಂಟಿ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವದ ಸಹಯೋಗದಲ್ಲಿ ಜೂ.02 ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 9 ರಿಂದ ಸಮಾಜ ಮಂದಿರದಲ್ಲಿ ಬೃಹತ್ ಆಧಾರ್ ನೋಂದಣಿ ಮತ್ತು ಅಭಿಯಾನ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ ಮಾಡಿಕೊಡುವ ಇತರ ಸೇವೆಗಳೆಂದರೆ, ಆಧಾರ್ ನೋಂದಣಿ ಮತ್ತು ತಿದ್ದುಪಡಿ, ಸಮೂಹ ಅಪಘಾತ ವಿಮೆ, ಪ್ರಧಾನ ಮಂತ್ರಿ ಜನಸಂಖ್ಯಾ ಯೋಜನೆ, ಅಂಚೆ ಸಣ್ಣ ಉಳಿತಾಯ ಯೋಜನೆ, ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್, ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ, ಪಾನ್ ಕಾರ್ಡ್ (ಆನ್ಲೈನ್ ಆಫ್ಲೈನ್) ಹೊಸ ಪಾನ್ ಕಾರ್ಡ್ ಮತ್ತು ತಿದ್ದುಪಡಿ, ಇ ಶ್ರಮ್ ಕಾರ್ಡ್/ ಅಭಾ ಕಾರ್ಡ್, ವೋಟರ್ ಐಡಿ ಹೊಸತು ಮತ್ತು ನವೀಕರಣ, ಆರ್. ಟಿ.ಸಿ ಆಧಾರ್ ಲಿಂಕ್, ಪಾಸ್ ಪೋರ್ಟ್ ನೋಂದಣಿ ಮತ್ತು ರಿನಿವಲ್ ಮತ್ತು ಸಿ. ಎಸ್. ಸಿ ಸೇವಾ ಸೌಲಭ್ಯಗಳು ಇವೆ.
ಜೂ.02: ಮೂಡುಬಿದಿರೆ ಯಲ್ಲಿ ಬೃಹತ್ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಅಭಿಯಾನ
RELATED ARTICLES