Thursday, July 25, 2024
Homeರಾಜ್ಯಜೂ.09: ಅಳದಂಗಡಿಯಲ್ಲಿ ಉಚಿತ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ

ಜೂ.09: ಅಳದಂಗಡಿಯಲ್ಲಿ ಉಚಿತ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ

ಅಳದಂಗಡಿ: ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ (ರಿ.) ಇವರ ಸಹಯೋಗದಲ್ಲಿ ಇತಿಹಾಸ ಪ್ರಸಿದ್ಧ ಅಳದಂಗಡಿ ಶ್ರೀ ಸತ್ಯ ದೇವತಾ ಕಲ್ಲುರ್ಟಿ ದೈವಸ್ಥಾನದ ವತಿಯಿಂದ ಗ್ರಾಮೀಣ ವಿಧ್ಯಾರ್ಥಿಗಳಿಗೆ 20 ನೇ ವರ್ಷದ ಉಚಿತ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮ ಮತ್ತು ಆರೋಗ್ಯ ಶಿಬಿರ ಕಾರ್ಯಕ್ರಮವು ಅಳದಂಗಡಿಯಲ್ಲಿ ಜೂ.09 ನೇ ಆದಿತ್ಯವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ವೀರೇಂದ್ರ ಹೆಗ್ಗಡೆ ಅವರು ಮಾಡಲಿದ್ದಾರೆ. ಅಧ್ಯಕ್ಷತೆಯಲ್ಲಿ ಡಾ. ಪದ್ಮಪ್ರಸಾದ ಅಜಿಲರು ಉಪಸ್ಥಿತರಿರುವರು. ಉಚಿತ ಪುಸ್ತಕ ವಿತರಣೆಯನ್ನು ಖ್ಯಾತ ಚಲನಚಿತ್ರ ನಟ ರಮೇಶ್ ಅರವಿಂದ್ ನೀಡಲಿರುವರು.

RELATED ARTICLES
- Advertisment -
Google search engine

Most Popular