Wednesday, February 19, 2025
Homeಉಡುಪಿಉಡುಪಿ ಶ್ರೀ ಕೃಷ್ಣನ ದರ್ಶನ ಪಡೆದ‌ ತೆಲುಗು ಸೂಪರ್‌ಸ್ಟಾರ್‌ ಜೂನಿಯರ್‌ ಎನ್‌ಟಿಆರ್ | ರಿಷಬ್‌ ಶೆಟ್ಟಿ,...

ಉಡುಪಿ ಶ್ರೀ ಕೃಷ್ಣನ ದರ್ಶನ ಪಡೆದ‌ ತೆಲುಗು ಸೂಪರ್‌ಸ್ಟಾರ್‌ ಜೂನಿಯರ್‌ ಎನ್‌ಟಿಆರ್ | ರಿಷಬ್‌ ಶೆಟ್ಟಿ, ಪ್ರಶಾಂತ್‌ ನೀಲ್‌ ಸಾಥ್

ಉಡುಪಿ: ಇಲ್ಲಿನ ಶ್ರೀ ಕೃಷ್ಣ ಮಠಕ್ಕೆ ತೆಲುಗಿನ ಸ್ಟಾರ್ ನಟ ಜೂನಿಯರ್ ಎನ್ ಟಿ ಆರ್ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಉಡುಪಿಯ ಮುಖ್ಯ ಪ್ರಾಣ ದೇವರ ದರ್ಶನವನ್ನೂ ಪಡೆದಿದ್ದಾರೆ. ಉಡುಪಿಗೆ ಬಂದ ಜೂನಿಯರ್ ಎನ್ ಟಿ ಆರ್ ಅವರಿಗೆ ನಟ ರಿಷಬ್ ಶೆಟ್ಟಿ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಸಾಥ್ ನೀಡಿದರು.
ಶನಿವಾರ ಜೂನಿಯರ್ ಎನ್‌ಟಿಆರ್ ಕುಟುಂಬ ಸಹಿತ ಆಗಮಿಸಿ, ಶ್ರೀಕೃಷ್ಣನ ದರ್ಶನ ಪಡೆದಿದ್ದಾರೆ. ಜೂನಿಯರ್ ಎನ್ ಟಿ ಆರ್ ದೇವರ ಸಿನಿಮಾದ ಬಳಿಕ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಸಿನಿಮಾ ಮಾಡ್ತಿದ್ದಾರೆ. ಸಿನಿಮಾ ಶೂಟಿಂಗ್ ಕೂಡ ಶುರುವಾಗಿದ್ದು, ಇದೀಗ ನಿರ್ದೇಶಕ ಪ್ರಶಾಂತ್ ಜೊತೆ ಉಡುಪಿಯಲ್ಲಿ ದೇವರ ದರ್ಶನ ಪಡೆದರು.
RRR ಸಿನಿಮಾ ನಂತರ ಜೂನಿಯರ್ ಎನ್ ಟಿಆರ್ ಸುಮಾರು ಒಂದೂವರೆ ವರ್ಷ ಗ್ಯಾಪ್ ತೆಗೆದುಕೊಂಡು ದೇವರ ಸಿನಿಮಾ ಮೂಲಕ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ದೇವರ ಸಿನಿಮಾವನ್ನು ತೆರೆ ಮೇಲೆ ನೋಡಲು ಫ್ಯಾನ್ಸ್ ಕೂಡ ಕಾಯ್ತಿದ್ದಾರೆ. ದೇವರ ರಿಲೀಸ್ ಗೂ ಮುನ್ನವೇ ಎನ್ ಟಿ ಆರ್, ಪ್ರಶಾಂತ್ ನೀಲ್ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ.
ದೇವರ ಸಿನಿಮಾ ಕೂಡ ಅತಿ ಶೀಘ್ರದಲ್ಲಿ ಬಿಡುಗಡೆಯಾಗಲಿದೆ. ದೇವರ ಚಿತ್ರದ ಬಳಿಕ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಎನ್ ಟಿ ಆರ್ ಮತ್ತೊಂದು ದೊಡ್ಡ ಸಿನಿಮಾ ಮಾಡಲಿದ್ದಾರೆ. ಈ ಚಿತ್ರಕ್ಕೆ ‘ಡ್ರ್ಯಾಗನ್’ ಎಂಬ ಟೈಟಲ್ ಫಿಕ್ಸ್ ಮಾಡಿದ್ದಾರೆ ಎನ್ನಲಾಗುತ್ತಿದೆ.

RELATED ARTICLES
- Advertisment -
Google search engine

Most Popular