Monday, February 17, 2025
Homeಬಂಟ್ವಾಳಬಂಟ್ವಾಳ : ಶ್ರೀ ವೆಂಕಟರಮಣ ಸ್ವಾಮೀ ಕಾಲೇಜು ರಿಪಬ್ಲಿಕ್ ಡೇ ಪರೇಡ್ 2025 ಗೆ ಜ್ಯೂನಿಯರ್...

ಬಂಟ್ವಾಳ : ಶ್ರೀ ವೆಂಕಟರಮಣ ಸ್ವಾಮೀ ಕಾಲೇಜು ರಿಪಬ್ಲಿಕ್ ಡೇ ಪರೇಡ್ 2025 ಗೆ ಜ್ಯೂನಿಯರ್ ಅಂಡರ್ ಆಫೀಸರ್-ಅಭಿನ್ ಹೆಚ್ ರೈ ಆಯ್ಕೆ

ಬಂಟ್ವಾಳ : ಜನವರಿ 26ರಂದು ಹೊಸದಿಲ್ಲಿಯಲ್ಲಿ ನಡೆಯುವ ರಿಪಬ್ಲಿಕ್ ಡೇ ಪರೇಡ್ – 2025ಕ್ಕೆ 18 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಮಂಗಳೂರು ಗ್ರೂಪ್ ನಿಂದ 3/18 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ ಆರ್ಮಿ ವಿಂಗ್ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜು, ಬಂಟ್ವಾಳ ಇಲ್ಲಿನ ಜ್ಯೂನಿಯರ್ ಅಂಡರ್ ಆಫೀಸರ್. ಅಭಿನ್ ಹೆಚ್ ರೈ ಭಾಗವಹಿಸಲಿದ್ದಾರೆ.
ಕರ್ನಾಟಕ ಮತ್ತು ಗೋವಾ ಡೈರಕ್ಟರೆಟ್‌ನ ಮಂಗಳೂರು ಗ್ರೂಪ್‌ನ 18 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ
ಮಂಗಳೂರು ಇದರಲ್ಲಿ ಒಟ್ಟು37 ಶಾಲಾ ಕಾಲೇಜುಗಳಲ್ಲಿ ಎನ್‌ಸಿಸಿ ಘಟಕ ಕರ‍್ಯನಿರ್ವಹಿಸುತ್ತಿದ್ದು ಅದರಲ್ಲಿ 03 ಕಾಲೇಜುಗಳಿಂದ ಮೂರು ಎನ್‌ಸಿಸಿ ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ. ಅದರಲ್ಲಿ 3/18 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ ಆರ್ಮಿ ವಿಂಗ್ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜು, ಬಂಟ್ವಾಳ ಇಲ್ಲಿನ ಜ್ಯೂನಿಯರ್ ಅಂಡರ್ ಆಫೀಸರ್. ಅಭಿನ್ ಹೆಚ್ ರೈ ಒಬ್ಬರಾಗಿರುತ್ತಾರೆ.
ಇವರಿಗೆ ಶ್ರೀ ವೆಂಕಟರಮಣ ಸ್ವಾಮೀ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೂಡಿಗೆ ಪಾಂಡುರAಗ ಶೆಣೈ, ಸಂಘದ ಉಪಾಧ್ಯಕ್ಷೆ ವತ್ಸಲ ಕಾಮತ್, ಸಂಘದ ಕಾರ್ಯದರ್ಶಿ ಕೂಡಿಗೆ ಪ್ರಕಾಶ್ ಶೆಣೈ ಮತ್ತು ಅನಿರುದ್ಧ ಕಾಮತ್ ಹಾಗೂ ಶ್ರೀ ವೆಂಕಟರಮಣ ಸ್ವಾಮೀ ಸಮೂಹ ಸಂಸ್ಥೆ ವಿದ್ಯಾಗಿರಿ ಬಂಟ್ವಾಳ ಇದರ ಸಂಚಾಲಕಿ ಕೆ. ರೇಖಾ ಶೆಣೈ, ಎನ್.ಸಿ.ಸಿ. ಅಧಿಕಾರಿ ಲೆಪ್ಟಿನೆಂಟ್. ಪ್ರದೀಪ್ ಪೂಜಾರಿ, ಸಮೂಹ ಸಂಸ್ಥೆಗಳ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು, ಶಿಕ್ಷಕ- ಶಿಕ್ಷಕೇತರ ವರ್ಗ ಶುಭ ಹಾರೈಸಿದ್ದಾರೆ.

RELATED ARTICLES
- Advertisment -
Google search engine

Most Popular