ಮುಂಬೈ: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಜು. 12ರಂದು ನಡೆಯಲಿದೆ. ಈಗಾಗಲೇ ಮದುವೆಗೆ ಸಂಬಂಧಿಸಿ ಹಲವು ಕಾರ್ಯಕ್ರಮಗಳು ಸುದ್ದಿಯಲ್ಲಿವೆ. ಇದೀಗ ಮದುವೆ ಸಮಾರಂಭವೊಂದರಲ್ಲಿ ಹಾಡಲೆಂದು ಅಂತಾರಾಷ್ಟ್ರೀಯ ಖ್ಯಾತಿಯ ಕೆನಡಾದ ಗಾಯಕ ಜಸ್ಟಿನ್ ಬೈಬರ್ ಭಾರತಕ್ಕೆ ಬಂದಿಳಿದಿದ್ದಾರೆ ಎಂದು ವರದಿಯಾಗಿದೆ. ಈ ಒಂದು ಕಾರ್ಯಕ್ರಮದಲ್ಲಿ ಹಾಡಲೆಂದು ಜಸ್ಟಿನ್ ಬೈಬರ್‌ಗೆ ಅಂಬಾನಿ ಕೋಟಿ ಕೋಟಿ ದುಡ್ಡು ಪಾವತಿಸಿದ್ದಾರೆ ಎಂದೂ ವರದಿಯಾಗಿದೆ.
ಪಾಪ್ ಐಕಾನ್ ಎಂದೇ ಹೆಸರುವಾಸಿಯಾಗಿರುವ ಯುವಕ, ಯುವತಿಯರ ಅಚ್ಚುಮೆಚ್ಚಿನ ಹಾಡುಗಾರ ಜಸ್ಟಿನ್ ಬೈಬರ್‌ಗೆ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆಗೆ ಹಾಡಲು 83 ಕೋಟಿ ರೂ. ಪಾವತಿಸಲಾಗುತ್ತಿದೆ ಎನ್ನಲಾಗಿದೆ.
ಅಂತಾರಾಷ್ಟ್ರೀಯ ಹಾಡುಗಾರರಾದ ರಿಹಾನಾ, ಬೆಯೋನ್ಸ್, ಎಕಾನ್‌ಗಿಂತ ಬೈಬರ್‌ಗೆ ಹೆಚ್ಚು ಹಣ ನೀಡಲಾಗುತ್ತಿದೆ. ಕೇವಲ ಒಂದು ಕಾರ್ಯಕ್ರಮಕ್ಕಾಗಿ ಅವರಿಗೆ ಈ ಮೊತ್ತದ ಹಣ ನೀಡಲಾಗುತ್ತಿದೆ ಎಂಬುದು ಈಗ ದೊಡ್ಡ ಸುದ್ದಿಯಾಗಿದೆ.
ಜು. 5ರಂದು ಅಂದರೆ ನಾಳೆ ಪ್ರಿ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ, ನಟಿಯರು, ಉದ್ಯಮಿಗಳು, ಕ್ರಿಕೆಟರ್ಸ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ಈ ಸಮಾರಂಭದಲ್ಲಿ ಜಸ್ಟಿನ್ ಬೈಬರ್ ಹಾಡು ಇರಲಿದೆ.