ಕಾರ್ಕಳ: ತುಳು ರಂಗಭೂಮಿ ಕಲಾವಿದ, ಕಾರ್ಕಳ ಪತ್ತೊಂಜಿಕಟ್ಟೆ ಗುಂಡ್ಯ ನಿವಾಸಿ ಕೆ.ಎಸ್. ಪ್ರಸನ್ನ (53) ನಿಧನ ಹೊಂದಿದ್ದಾರೆ. ಹೃದಯಾಘಾತದಿಂದ ಅವರು ನಿನ್ನೆ ಕೊನೆಯುಸಿರೆಳೆದಿದ್ದಾರೆ. ನಾಟಕ ರಂಗದಲ್ಲಿ ಇವರು ಜನಪ್ರಿಯರಾಗಿದ್ದರು.
ಕಲಾರಂಗ, ಅಭಿನಯ ಕಲಾವಿದೆರ್ ಕಾರ್ಲ ಸೇರಿದಂತೆ ವಿವಿಧ ತಂಡಗಳಲ್ಲಿ ಅಭಿನಯಿಸಿರುವ ಇವರು ರಂಗ ಭೂಮಿಯಲ್ಲಿ ಹಾಸ್ಯ ಕಲಾವಿದರಾಗಿ ಖ್ಯಾತಿ ಪಡೆದಿದ್ದರು. ಅಪಾರ ಅಭಿಮಾನಿ ಬಳಗ ಹೊಂದಿರುವ ಪ್ರಸನ್ನ ಅವರು, ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.