Monday, December 2, 2024
HomeUncategorizedಕ.ಸಾ. ಪ ಪುತ್ತೂರು ಬಡಗನ್ನೂರು ಗ್ರಾಮ ಸಾಹಿತ್ಯ ಸಂಭ್ರಮ' ಸರಣಿ ಕಾರ್ಯಕ್ರಮ -17

ಕ.ಸಾ. ಪ ಪುತ್ತೂರು ಬಡಗನ್ನೂರು ಗ್ರಾಮ ಸಾಹಿತ್ಯ ಸಂಭ್ರಮ’ ಸರಣಿ ಕಾರ್ಯಕ್ರಮ -17

ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ, ಗ್ರಾಮ ಪಂಚಾಯತ್ ಬಡಗನ್ನೂರು , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಸಹಕಾರದೊಂದಿಗೆ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯಲ್ಲಿ, ಹೊರನಾಡ ಕನ್ನಡಿಗ ಶ್ರೀ ಮಿತ್ರಂಪಾಡಿ ಜಯರಾಮ್ ರೈ ಅಬುದಾಬಿ ಪೋಷಕತ್ವದಲ್ಲಿ,
ಯುವ ಜನತೆಯನ್ನು ಸಾಹಿತ್ಯ ಲೋಕದತ್ತ ಬರಮಾಡಿಕೊಳ್ಳುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬಡಗನ್ನೂರು ಗ್ರಾಮದಲ್ಲಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಎಂಬ ಘೋಷ ವಾಕ್ಯದಲ್ಲಿ ನಡೆಸುವ ಗ್ರಾಮ ಸಾಹಿತ್ಯ ಸಂಭ್ರಮ ಸರಣಿ-೧೭ ಈ ಕಾರ್ಯಕ್ರಮವು
ಬಡಗನ್ನೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ
26-10-2024ರ ಶನಿವಾರ ಬೆಳಿಗ್ಗೆ 9.30 ಯಿಂದ ಸಂಜೆ 3 ವರೆಗೆ ನಡೆಯಲಿದೆ.
ಈ ಕಾರ್ಯಕ್ರಮದ ಸರ್ವಾಧ್ಯಕ್ಷತೆಯನ್ನು ಸ. ಉ. ಹಿ. ಪ್ರಾ ಶಾಲೆ ಬಡಗನ್ನೂರು ಇಲ್ಲಿನ ವಿದ್ಯಾರ್ಥಿನಿ ಕು.ವಿಸ್ಮಿತಾ. ಎಂ ರವರು ವಹಿಸಲಿದ್ದಾರೆ.ಮಧ್ಯಾಹ್ನ 3 ಗಂಟೆಗೆ ನಡೆಯುವ ಸಮಾರೋಪ ಭಾಷಣವನ್ನು ಸರ್ವೋದಯ ಪ್ರೌಢಶಾಲೆ ಸುಳ್ಯಪದವು ಇಲ್ಲಿನ ವಿದ್ಯಾರ್ಥಿನಿ ಕು. ಫಾತಿಮತ್ ರಮೀಸ ಮಾಡಲಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಹೋಬಳಿ ಘಟಕದ ಅಧ್ಯಕ್ಷರಾದ ಕಡಮಜಲು ಸುಭಾಷ್ ರೈ ಅಧ್ಯಕ್ಷತೆ ವಹಿಸಲಿದ್ದು, ಬಡಗನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪುಷ್ಪಲತಾ. ಎಂ ಸಮಾರಂಭ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಡಗನ್ನೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಮೋನಪ್ಪ .ಕೆ,ಬಡಗನ್ನೂರು ಸಿ. ಆರ್. ಪಿ. ಶ್ರೀಮತಿ ಶಶಿಕಲಾ. ಬಿ, ಸ. ಉ. ಹಿ. ಪ್ರಾ ಶಾಲೆ ಬಡಗನ್ನೂರು ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಬಾಬು ಮೂಲ್ಯ ಉಪಸ್ಥಿತರಿರುವರು.

ನವ ಸಾಧಕರಿಗೆ ಸನ್ಮಾನ
ಬಡಗನ್ನೂರು ಮತ್ತು ಪಡುವನ್ನೂರು ಗ್ರಾಮದ ವಿವಿಧ ಕ್ಷೇತ್ರದ ಸಾಧಕರಾದ ಶ್ರೀ. ಕೆ. ಸಿ. ಪಾಟಾಳಿ ,ಡಾ. ರವೀಶ್ ಪಡುಮಲೆ , ಡಾ. ಹರಿಪ್ರಸಾದ್. ಎಸ್ ,ಶ್ರೀ.ವಿಶ್ವನಾಥ ಪೂಜಾರಿ ಪೂಜಾರಿಮೂಲೆ ,ಶ್ರೀಮತಿ ಶಂಕರಿ ಪಟ್ಟೆ,ವಿದುಷಿ ಕುದ್ಕಾಡಿ ನಯನ. ವಿ. ರೈ, ಶ್ರೀ ಮಹಮ್ಮದ್ ಬಡಗನ್ನೂರು, ಶ್ರೀಶಾ ವಾಸವಿ ತುಳುನಾಡ್,ಶ್ರೀ ನಾಗಪ್ಪ ಪಡುಮಲೆ ಇವರನ್ನು ಶ್ರೀಬಾಲಸುಬ್ರಹ್ಮಣ್ಯ ಅನುದಾನಿತ ಹಿ ಪ್ರಾ ಶಾಲೆಯ ನಿವೃತ್ತ ಮುಖ್ಯಗುರುಗಳಾದ ಶ್ರೀ ಕೆ.ರಾಮಣ್ಣ ಗೌಡ ಬಸವನಹಿತ್ತಿಲು ಅಭಿನಂದಿಸಲಿದ್ದಾರೆ.

ವಿವಿಧ ಗೋಷ್ಠಿಗಳು ಮಕ್ಕಳ ಸಾಹಿತ್ಯ ಸಮ್ಮೇಳನದ ಸ್ವರೂಪದಲ್ಲಿ ನಡೆಯುವ ಈ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ವಿನೂತನ ಪ್ರಯೋಗಗಳನ್ನು ಹಮ್ಮಿಕೊಂಡಿದ್ದು ಯಶಸ್ವಿಯಾಗಿರುತ್ತದೆ. ಗೋಷ್ಠಿ -1 ಕನ್ನಡದಲ್ಲೂ ಐಎಎಸ್ ಬರೆಯಿರಿ ಅಭಿಯಾನದ ಅಂಗವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಗಾರ, ಗೋಷ್ಠಿ -2 ಬಾಲ ಕವಿಗೋಷ್ಠಿ, ಗೋಷ್ಠಿ- 3 ಬಾಲ ಕಥಾಗೋಷ್ಠಿ, ಗೋಷ್ಠಿ-4 ಸಾಹಿತ್ಯ ಆಸಕ್ತಿ ಇಲ್ಲದ ವಿದ್ಯಾರ್ಥಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ಸೆಳೆಯುವ ನಿಟ್ಟಿನಲ್ಲಿ ‘ಪ್ರವಾಸ ಕಥನ’ ವಾಚನ ಹಿಂದಿನ ಸಾಹಿತ್ಯ ಸಂಭ್ರಮದಲ್ಲಿ ಅಳವಡಿಸಲಾಗಿದ್ದು ಯಶಸ್ವಿಯಾಗಿದ್ದು ಜನ ಮೆಚ್ಚುಗೆಗೆ ಪಾತ್ರವಾಗಿದೆ. ಗೋಷ್ಠಿ -5 ರಲ್ಲಿ “ಮಕ್ಕಳನ್ನ ಸಾಹಿತ್ಯ ಮತ್ತು ಬರವಣಿಗೆ ಕ್ಷೇತ್ರಕ್ಕೆ ಸೆಳೆಯುವ ನಿಟ್ಟಿನಲ್ಲಿ ನನ್ನ ಆಪ್ತಮಿತ್ರ ಲೇಖನ ವಾಚನ ಅಲ್ಲದೇ, ಈ ಬಾರಿ ಪ್ರಥಮ ಬಾರಿಗೆ ‘ನನ್ನ ನೆಚ್ಚಿನ ಶಿಕ್ಷಕ/ಶಿಕ್ಷಕಿ ‘ ಲೇಖನ ವಾಚನ ಗೋಷ್ಠಿಯನ್ನು ಅಳವಡಿಸಿಕೊಳ್ಳಲಾಗಿದೆ.

ಸಭಾ ಕಾರ್ಯಕ್ರಮದ ಬಳಿಕ ಕನ್ನಡದಲ್ಲೂ ಐ ಎ ಎಸ್ ಬರೆಯಿರಿ ಕುರಿತು ಶ್ರೀ ಪ್ರಣವ್ ಭಟ್ ಉಪನ್ಯಾಸ ನೀಡಲಿದ್ದಾರೆ. ಬಡಗನ್ನೂರು ಮತ್ತು ಪಡುವನ್ನೂರು ಗ್ರಾಮಕ್ಕೆ ಸಂಬಂಧ ಪಟ್ಟ ಸ. ಉ. ಹಿ. ಪ್ರಾ. ಶಾಲೆ ಬಡಗನ್ನೂರು , ಸ.ಹಿ. ಪ್ರಾ. ಶಾಲೆ ಪಡುಮಲೆ , ಸ. ಹಿ. ಪ್ರಾ.ಶಾಲೆ ಕೊಯಿಲ , ಸ. ಪ್ರಾ. ಶಾಲೆ ಸಜಂಕಾಡಿ ,ಸರ್ವೋದಯ ಪ್ರೌಢಶಾಲೆ ಸುಳ್ಯಪದವು , Sಶ್ರೀಬಾಲಸುಬ್ರಹ್ಮಣ್ಯ ಅನುದಾನಿತ ಹಿ. ಪ್ರಾ. ಶಾಲೆ ಸುಳ್ಯಪದವು ,ಪ್ರತಿಭಾ ಅನುದಾನಿತ ಪ್ರೌಢ ಶಾಲೆ ಪಟ್ಟೆ, ಶ್ರೀಕೃಷ್ಣ ಅನುದಾನಿತ ಹಿ. ಪ್ರಾ. ಶಾಲೆ ಪಟ್ಟೆ ಇಲ್ಲಿನ ವಿದ್ಯಾರ್ಥಿಗಳು ವಿವಿಧ ಗೋಷ್ಠಿಗಳಲ್ಲಿ ಭಾಗಿಯಾಗಲಿದ್ದಾರೆ. ಭೋಜನ ವಿರಾಮದಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಬೆಳಗ್ಗೆ 9:30 ಕ್ಕೆ ಸರಿಯಾಗಿ ವಿದ್ಯಾರ್ಥಿ ಸರ್ವಾಧ್ಯಕ್ಷರನ್ನು ಗಣ್ಯರಿಂದ ಪೇಟ ತೊಡಿಸಿ ಸಭಾಂಗಣಕ್ಕೆ ಮೆರವಣಿಗೆಯ ಮೂಲಕ ಕರೆತರಲಿದ್ದು ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಸಂಜೆ 3:30ರ ತನಕ ಈ ಸಾಹಿತ್ಯ ಸಂಭ್ರಮ ಕಾರ್ಯಕ್ರಮವು ಮಕ್ಕಳ ಸಾಹಿತ್ಯ ಸಮ್ಮೇಳನದ ಸ್ವರೂಪದಲ್ಲಿ ನಡೆಯಲಿದೆ ಎಂದು ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕರಾದ ನಾರಾಯಣ ಕುಂಬ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular