ಮಣಿಪಾಲ ನಿವಾಸಿ ಧಾರ್ಮಿಕ ಮುಖಂಡ ಹಾಗೂ ಕೆನರಾ ಬ್ಯಾಂಕಿನ ಉನ್ನತ ನಿವೃತ್ತ ಅಧಿಕಾರಿ ಕೆ ತುಳಸೀ ದಾಸ್ ರಾಮಕೃಷ್ಣ ಕಿಣಿ..( 89 ವರ್ಷ ) ತಮ್ಮ ಸ್ವ ಗ್ರಹ ದ ಮಣಿಪಾಲ್ ಇಂದು(ಜ. 17) ಮುಂಜಾನೆ ನಿಧನರಾದರು , ಮೃತರು ಪತ್ನಿ , ಓರ್ವ ಪುತ್ರ , ನಾಲ್ವರು ಪುತ್ರಿಯರನ್ನುಅಗಲಿದ್ದಾರೆ. ಶ್ರೀ ವೆಂಕಟರಮಣ ದೇವಸ್ಥಾನ ಕಲ್ಯಾಣಪುರ ಭಜನಾ ಸಪ್ತಾಹದ ಸಮಿತಿಯ ಅಧ್ಯಕ್ಷರಾಗಿ ಬಹಳಷ್ಟು ವರ್ಷಗಳ ಕಾಲ ನಿರಂತರ ಸೇವೆ ನೀಡುತ್ತಾ ಬಂದಿರುತ್ತಾರೆ , ದೇವಳದ ಯಾತ್ರಿ ನಿವಾಸ ಇವರ ಮುಂದಾಳತ್ವದಲ್ಲಿ ನಿರ್ಮಾಣ ಗೊಂಡಿದೆ , ದೇವಳದ ಅಭಿವೃದ್ಧಿಗಳಲ್ಲಿ ಗಣನೀಯ ಸೇವೆ , ಜಿ ಎಸ್ ಬಿ ಸಮಾಜದ ಕಾಶೀಮಠ , ಗೋಕರ್ಣಮಠ , ಕೈವಲ್ಯ ಮಠದ ಸ್ವಾಮೀಜಿಯವರ ಪ್ರೀತಿ ಪಾತ್ರರಾಗಿದ್ದರು ಸಮಾಜ ಸೇವಕರಾಗಿ , ಕೊಡುಗೆ ದಾನಿಯಾಗಿದ್ದರು , ನೀಲಾವರ ಗೋಶಾಲೆ , ಅಯೋಧ್ಯ ರಾಮಮಂದಿರ , ಪರಿಸರದ ಇತರೆ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಧನ ಸಹಾಯ , ವಿದ್ಯಾರ್ಥಿಗಳ ವಿದ್ಯಾಭ್ಯಾಸ ಆರ್ಥಿಕ ನೆರವು , ಅನ್ಯಾರೋಗ್ಯ ಪೀಡಿತರಿಗೆ ಧನ ಸಹಾಯ , ಸಂಗೀತ ಅಭಿಮಾನಿಗಳಾದ ಇವರು ಪ್ರಸಿದ್ಧ ಕಲಾವಿದರನ್ನೂ ಕಲ್ಯಾಣಪುರ ಕರೆ ತಂದು ಕಾರ್ಯಕ್ರಮ ನೀಡುವಲ್ಲಿ ಸಹಕಾರಿಯಾಗಿದ್ದರು.
ಇವರ ನಿಧನ ಕ್ಕೆ ಮಾಜಿ ಸಚಿವ ಪ್ರಮೋದ್ ಮದ್ವರಾಜ್ , ಮಾಜಿ ಶಾಸಕ ರಘುಪತಿ ಭಟ್ , ಹರ್ಷ ಬಳಗ ಹಾಗೂ ವಿವಿಧ ಭಜನಾ ಮಂಡಳಿಯವರು ಸಂತಾಪ ಸೂಚಿಸಿದ್ದಾರೆ