ಶ್ರೀ ಜಟ್ಟಿಗೇಶ್ವರ ಫ್ರೆಂಡ್ಸ್ ಸೂರ್ಕುಂದ ಬೈಂದೂರು ತಾಲೂಕು ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ಇವರ ಜಂಟಿ ಆಶ್ರಯದಲ್ಲಿ ದೈವಸ್ಥಾನದ ಅಭಿವೃದ್ದಿ ಕಾರ್ಯದ ಸಹಾಯಾರ್ಥವಾಗಿ ಪ್ರಥಮ ವರ್ಷದ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಶ್ರೀ ಜಟ್ಟಿಗೇಶ್ವರ ಟ್ರೋಫಿ – 2024 ಪ್ರದೀಪ್ ಶೆಟ್ಟಿ ಸೂರ್ಕುಂದ ಇವರ ಸಾರಥ್ಯದಲ್ಲಿ ಸತೀಶ್ ಶೆಟ್ಟಿ ಸೂರ್ಕುಂದ ಇವರ ಗೌರವಾದ್ಯಕ್ಷತೆಯಲ್ಲಿ ಹಸಿರುಮಕ್ಕಿ ಶ್ರೀ ಜೈನ ಜಟ್ಟಿಗೇಶ್ವರ ದೈವಸ್ಥಾನದ ಮೈದಾನ ಸೂರ್ಕುಂದ ಬೈಂದೂರು ಇಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು.
ರಾಷ್ಟ್ರಮಟ್ಟದ ಕಬ್ಬಡಿ ಪಂದ್ಯಾಟ ಆಯೋಜಕರಾದ
ಜಯಾನಂದ ಹೋಬಲಿದಾರ್ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವು ಉದ್ಘಾಟಿಸಿ ಮಾತನಾಡಿ ನಾವು ರಾಜ್ಯ ಮಟ್ಟ ಮತ್ತು ರಾಷ್ಟ್ರಮಟ್ಟದ ಪಂದ್ಯಕೂಟವನ್ನು ಆಯೋಜನೆ ಮಾಡಿದ್ದೇವೆ ಅದಕ್ಕೆ ಸರಿಸಾಟಿಯಾದ ಪಂದ್ಯಾಟ ಈ ಸಣ್ಣ ಹಳ್ಳಿಯಲ್ಲಿ ಆಯೋಜನೆ ಮಾಡಿದ ಇಲ್ಲಿನ ಯುವಕರು ಒಂದು ಅದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಬಂದಂತಹ ಎಲ್ಲಾ ಕ್ರೀಡಾಪಟುಗಳಿಗೆ ಕೋರಿದರು.
ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ ಅಂಕಣವನ್ನು ಉದ್ಘಾಟಿಸಿ ಮಾತನಾಡಿ ಉತ್ತಮ ರೀತಿಯಲ್ಲಿ ಕಬ್ಬಡಿ ಪಂದ್ಯಾಟವನ್ನು ಆಯೋಜನೆ ಮಾಡಿದ್ದಾರೆ ಮತ್ತು ವಿಶೇಷವಾಗಿ ಈ ವರ್ಷ ಮೊದಲ ಬಾರಿಗೆ ಸೂರ್ಕುಂದ ಉತ್ಸವ ಹೊಸ ಪರಿಕಲ್ಪನೆಯ ಕಾರ್ಯಕ್ರಮವನ್ನು ಕೂಡ ಯಶಸ್ವಿಯಾಗಿ ಮಾಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ವೇದಿಕೆ ಮೇಲೆ ಮುಖ್ಯ ಅಥಿತಿಗಳಾಗಿ ಮಾಜೀ ಜಿಲ್ಲಾ ಪಂಚಾಯತ್ ಸದಸ್ಯರಾದ ಸುರೇಶ ಬಟ್ವಾಡಿ, ಉದ್ಯಮಿಗಳಾದ ಗೋವಿಂದ ಬಾಬು ಪೂಜಾರಿ, ಸಂಜೀವ ಶೆಟ್ಟಿ ಕೆರೆಮನೆ, ತೇಜಪ್ಪ ಶೆಟ್ಟಿ ಕೆರೆಮನೆ, ಬೈಂದೂರ್ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷರಾದ ಶರತ್ ಶೆಟ್ಟಿ ಉಪ್ಪುಂದ, ಖ್ಯಾತ ವೈದ್ಯರಾದ ಪ್ರವೀಣ್ ಶೆಟ್ಟಿ, ಪಟ್ಟಣ ಪಂಚಾಯತ್ನ ಮಾಜಿ ಸದಸ್ಯರಾದ ವಿಠಲ್ ಶೆಟ್ಟಿ ಸೂರ್ಕುಂದ ಇದ್ದರೂ.
ಈ ಸಂದರ್ಭದಲ್ಲಿ ಸೂರ್ಕುಂದ ಉತ್ಸವದ ಸಂಘಟನಾ ಕಾರ್ಯದರ್ಶಿಯವರಾದ ಸುಕುಮಾರ ಶೆಟ್ಟಿ ನಮ್ಮ ಊರು, ನಮ್ಮ ಕನಸು ಇದರ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಗೋವಿಂದ ಬಾಬು ಪೂಜಾರಿ, ರೋಷನ್ ಶೆಟ್ಟಿ ಕೆರೆಮನೆ,
ಸೂರ್ಕುಂದ ಶ್ರೀ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.
ಸೂರ್ಕುಂದ ಉತ್ಸವದ ಅಂಗವಾಗಿ ಸ್ಥಳೀಯ ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳಯನ್ನು ಆಯೋಜಿಸಲಾಗಿದೆ ಗೆದ್ದಂತಹ ಕ್ರೀಡಾಪಟುಗಳಿಗೆ ಬಹುಮಾನ ನೀಡಿ ಗೌರಿಸಲಾಯಿತು.
ಉತ್ತಮ ದಾಳಿಗರ , ಹಿಡಿತಗಾರ,ಆಲ್ ರೌಂಡರ್ ಹಾಗೂ ಎಮರ್ಜಿಂಗ್ ಪ್ಲೇಯರ್ ಆಫ್ ಟೂರ್ನಮೆಂಟ್ ಪ್ರಶಸ್ತಿ ನೀಡಿ ಪ್ರದೀಪ್ ಶೆಟ್ಟಿ ಸ್ವಾಗತಿಸಿದರು, ಹರೀಶ ಮೊಗವೀರ ನಿರೂಪಿಸಿದರು. ನಿತ್ಯಾನಂದ ಮೊಗವೀರ ರವರು ವಂದಿಸಿದರು.