Monday, July 15, 2024
Homeಅಪರಾಧಕಡಬ | ಕ್ರಿಪ್ಟೊ ಕರೆನ್ಸಿ ಆಮಿಷವೊಡ್ಡಿ ಉದ್ಯಮಿಗೆ 1.06 ಕೋಟಿ ರೂ. ವಂಚನೆ

ಕಡಬ | ಕ್ರಿಪ್ಟೊ ಕರೆನ್ಸಿ ಆಮಿಷವೊಡ್ಡಿ ಉದ್ಯಮಿಗೆ 1.06 ಕೋಟಿ ರೂ. ವಂಚನೆ

ಮಂಗಳೂರು: ಕ್ರಿಪ್ಟೊ ಕರೆನ್ಸಿ ಮೂಲಕ ಲಾಭ ಗಳಿಸಬಹುದೆಂದು ಆಮಿಷವೊಡ್ಡಿ ಉದ್ಯಮಿಯೊಬ್ಬರಿಗೆ ಬರೋಬ್ಬರಿ 1.06 ಕೋಟಿ ವಂಚಿಸಿದ ಘಟನೆ ನಡೆದಿದೆ. ಕಡಬ ತಾಲೂಕಿನ ಇಚ್ಲಂಪಾಡಿಯ ಉದ್ಯಮಿ ಪಿ.ಜಿ. ಸಾಜಿ ಹಣ ಕಳೆದುಕೊಂಡಿರುವ ಉದ್ಯಮಿ.

ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ತಮಗೆ 2023ರ ಜೂನ್ 25ರಂದು ತಮ್ಮ ಮೊಬೈಲ್ ನ ಟೆಲಿಗ್ರಾಂ ಆ್ಯಪ್ ಗೆ ಅವಕ ವಾಟಾನಬೆ ಎಂಬ ಹೆಸರಿನ ವ್ಯಕ್ತಿಯು ಕ್ರಿಪ್ಟೊ ಕರೆನ್ಸಿಗೆ ಹಣ ವರ್ಗಾಯಿಸಲು ಬಿನಾನ್ಸ್ ಆ್ಯಪ್ ಮತ್ತು ಡೆಫಿ ಆ್ಯಪ್ ಡೌನ್ ಲೋಡ್ ಮಾಡುವಂತೆ ಹೇಳಿದ್ದರು. ಅದರಂತೆ ತಾನು ಆ ಆ್ಯಪ್ ಗಳನ್ನು ಡೌನ್ ಲೋಡ್ ಮಾಡಿದ್ದು, ಆ ವ್ಯಕ್ತಿ ನೀಡಿದ್ದ ಸೂಚನೆಯಂತೆ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿಯನ್ನು ಬಳಸಿ ಆ ಎರಡೂ ಆ್ಯಪ್ ಗಳಲ್ಲಿ ವ್ಯಾಲೆಟ್ ರಚಿಸಿದೆ ಎಂದು ಸಾಜಿ ದೂರಿನಲ್ಲಿ ತಿಳಿಸಿದ್ದಾರೆ.

ನಂತರ ಅಪರಿಚಿತ ವ್ಯಕ್ತಿಯೊಬ್ಬರು ಟ್ರೇಡಿಂಗ್ ಮತ್ತು ಎಕ್ಸ್ ಚೇಂಜ್ ನಡೆಸಲು ವೆಬ್ ಸೈಟ್ ಮತ್ತು ಟೋಕನ್ ವಿಳಾಸ ಕಳುಹಿಸಿದ್ದರು. ಅದನ್ನು ಬಳಸಿ ತಮ್ಮ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 1.06 ಕೋಟಿ ರೂ. ವರ್ಗಾವಣೆ ಮಾಡಿದ್ದೆ ಎಂದು ಸಾಜಿ ತಿಳಿಸಿದ್ದಾರೆ. ಈ ಬಗ್ಗೆ ಅವರು ಸೆನ್ ಠಾಣೆಗೆ ದೂರು ನೀಡಿದ್ದಾರೆ.

RELATED ARTICLES
- Advertisment -
Google search engine

Most Popular