ಕಡಬ: ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನಚಕಮಕಿ ಇಲ್ಲಿನ ಬಿಳೆನೆಲೆ ಮತಗಟ್ಟೆಯ ಬಳಿ ನಡೆದಿದೆ. ಪೊಲೀಸರ ಮಧ್ಯಪ್ರವೇಶದ ಬಳಿಕ ಪರಿಸ್ಥಿತಿ ತಿಳಿಗೊಳಿಸಲಾಯಿತು. ಮತದಾರರನ್ನು ಕೊನೆ ಕ್ಷಣದಲ್ಲಿ ಓಲೈಸುವ ಪ್ರಯತ್ನ ಬೂತಿನಲ್ಲಿರುವ ಮುಖಂಡರು ಮಾಡುತ್ತಿದ್ದರು. ಒಂದು ಪಕ್ಷದವರು ಈ ಕಾರ್ಯದಲ್ಲಿ ನಿರತರಾಗಿದ್ದಾಗ ಇನ್ನೊಂದು ಪಕ್ಷದ ಕಾರ್ಯಕರ್ತರು ಆಕ್ಷೇಪಿಸಿದಾಗ ಮಾತಿನ ಚಕಮಕಿ ನಡೆಯಿತು. ಬಳಿಕ ಪೊಲೀಸರು ಅಲ್ಲಿಗೆ ಆಗಮಿಸಿ ಪಕ್ಷಗಳ ಕಾರ್ಯಕರ್ತರನ್ನು ಸಮಾಧಾನಿಸಿ ಅಲ್ಲಿಂದ ಚದುರಿಸಿದರು.