ಕಡಬ: ಜೀವನದಲ್ಲಿ ಎದುರಾಗುವ ಎಡರು ತೊಡರುಗಳನ್ನು ಸಮರ್ಥವಾಗಿ ಎದುರಿಸಿ ಮುನ್ನಡೆದಾಗ ನಮಗೆ ಯಶಸ್ಸು ಸಿಗಲು ಸಾಧ್ಯ ಗೃಹರಕ್ಷಕ ಸಿಬಂದಿಗಳು ಕೂಡ ತಮ್ಮೆಲ್ಲ ಸಮಸ್ಯೆಗಳನ್ನು ಮೆಟ್ಟಿ ನಿಂತು ಸಮಾಜಕ್ಕಾಗಿ ದುಡಿಯುತ್ತಿದ್ದಾರೆ. ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಗೃಹರಕ್ಷಕರ ಪಾತ್ರ ಅತ್ಯಂತ ಮಹತ್ವದ್ದು ಎಂದು ಗೃಹರಕ್ಷಕ ದಳದ ದ.ಕ.ಜಿಲ್ಲಾ ಕಮಾಂಡೆAಟ್ ಡಾ| ಮುರಲೀಮೋಹನ ಚೂಂತಾರು ಅವರು ನುಡಿದರು.
ಅವರು ನ.೨೦ರಂದು ಕಡಬದಲ್ಲಿ ಗೃಹರಕ್ಷಕದ ದಳದ ಸ್ವಂತ ನಿವೇಶನದಲ್ಲಿ ಕರ್ಣಾಟಕ ಬ್ಯಾಂಕ್‌ನ ಸಿಎಸ್‌ಆರ್ ನಿಧಿಯ ೧೦ ಲಕ್ಷ ರೂ. ಅನುದಾನದಲ್ಲಿ ನೂತನವಾಗಿ ನಿರ್ಮಾಣಗೊಂಡ ಗೃಹರಕ್ಷಕ ದಳದ ಕಡಬ ಘಟಕದ ಕಚೇರಿ ಕಟ್ಟಡವನ್ನು ಉದ್ಘಾಟನೆಗೈದು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೃಹರಕ್ಷಕರ ಸೇವೆಗೆ ಬೆಂಬಲವಾಗಿ ನಿಂತು ತಮ್ಮ ಸಿಎಸ್‌ಆರ್ ನಿಧಿಯಿಂದ ಅನುದಾನ ಒದಗಿಸಿ ಕಡಬದ ಗೃಹರಕ್ಷಕ ಘಟಕಕ್ಕೆ ಸ್ವಂತ ಸೂರನ್ನು ಕಲ್ಪಿಸುವಲ್ಲಿ ಸಹಕರಿಸಿದ ಕರ್ನಾಟಕ ಬ್ಯಾಂಕ್‌ಗೆ ನಾವು ಕೃತಜ್ಞರಾಗಿದ್ದೇವೆ. ಜಿಲ್ಲೆಯಲ್ಲಿ ಗೃಹರಕ್ಷಕದ ದಳಕ್ಕೆ ೩ ಕಡೆ ನಿವೇಶನಗಳನ್ನು ಹೊಂದಿದ್ದೇವೆ. ಆ ಪೈಕಿ ಕಡಬ ಘಟಕಕ್ಕೆ ಸ್ವಂತ ನಿವೇಶನದಲ್ಲಿ ಸ್ವಂತ ಕಟ್ಟಡ ಲಭಿಸಿರುವುದು ಸಂತಸದ ಸಂಗತಿಯಾಗಿದೆ ಎಂದು ಅವರು ನುಡಿದರು.
ಕರ್ಣಾಟಕ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಹಾಗೂ ಪುತ್ತೂರು ಕ್ಲಸ್ಟರ್ ಹೆಡ್ ಶ್ರೀಹರಿ ಪಿ. ಅವರು ಮಾತನಾಡಿ ಕರ್ಣಾಟಕ ಬ್ಯಾಂಕ್ ಕೇವಲ ಲಾಭದಾಯಕ ಆರ್ಥಿಕ ವ್ಯವಹಾರವನ್ನಷ್ಟೇ ಗುರಿಯಾಗಿರಿಸಿಕೊಂಡಿಲ್ಲ. ಗ್ರಾಹಕರಿಗೆ ಉತ್ತಮ ಆರ್ಥಿಕ ಸೇವೆಯನ್ನು ನೀಡುವ ಜೊತೆಗೆ ಸಮಾಜ ಸೇವೆಯನ್ನು ಮಾಡುವ ಬದ್ಧತೆಯನ್ನು ಕೂಡ ನಿರಂತರವಾಗಿ ಪ್ರದರ್ಶಿಸುತ್ತಿದೆ. ಅದಕ್ಕೆ ಉದಾಹರಣೆಯಾಗಿ ಗೃಹರಕ್ಷಕ ದಳದ ಕಡಬ ಘಟಕಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ಬ್ಯಾಂಕ್‌ನ ವತಿಯಿಂದ ಅನುದಾನ ನೀಡಿದ್ದೇವೆ ಎಂದರು.
ನಿವೃತ್ತ ಸೈನ್ಯಾಧಿಕಾರಿ, ಕಡಬ ಗೃಹರಕ್ಷಕ ದಳದ ಮಾಜಿ ಘಟಕಾಧಿಕಾರಿ ಟಿ.ಜಿ.ಮ್ಯಾಥ್ಯೂ, ಕಡಬ ಉಪ ತಹಶೀಲ್ದಾರ್ ಗೋಪಾಲ್ ಕಲ್ಲುಗುಡ್ಡೆ, ನಿವೃತ್ತ ಮುಖ್ಯಶಿಕ್ಷಕ ಜನಾರ್ದನ ಗೌಡ ಪಣೆಮಜಲು, ಕಡಬ ಪಟ್ಟಣ ಪಂಚಾಯತ್ ಸಿಬಂದಿ ಹರೀಶ್ ಬೆದ್ರಾಜೆ ಶುಭ ಹಾರೈಸಿದರು. ಕರ್ನಾಟಕ ಬ್ಯಾಂಕ್‌ನ ಕಡಬ ಶಾಖಾ ವ್ಯವಸ್ಥಾಪಕ ಕೃಷ್ಣ ಪ್ರಶಾಂತ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಚೆನ್ನಪ್ಪ ಗೌಡ ಕಾಣಿಕೆ, ಕಡಬ ಸಿ.ಎ.ಬ್ಯಾಂಕ್ ನಿರ್ದೇಶಕ ಸತೀಶ್ ನಾÊಕ್ ಮೇಲಿನಮನೆ, ಇಂಜಿನಿಯರ್ ಶ್ರೀಗಿರಿ ತಮ್ಮಯ್ಯ, ಹಿರಿಯ ಗೃಹರಕ್ಷಕರಾದ ಉದಯಶಂಕರ್, ಜಯಪ್ರಕಾಶ್, ದಯಾನಂದ್ ಹಾಗೂ ಸುಬ್ರಹ್ಮಣ್ಯ ಘಟಕದ ಪ್ರಭಾರ ಘಟಕಾಧಿಕಾರಿ ಹರೀಶ್ ಆಚಾರ್, ಉಪ್ಪಿನಂಗಡಿ ಘಟಕದ ಎಸ್.ಎಲ್.ದಿನೇಶ್ ಹಾಗೂ ಗೃಹರಕ್ಷಕ ಸಿಬಂದಿಗಳು ಉಪಸ್ಥಿತರಿದ್ದರು. ಗೃಹರಕ್ಷಕ ದಳದ ದ.ಕ.ಜಿಲ್ಲಾ ಕಮಾಂಡೆAಟ್ ಡಾ|ಮುರಲೀಮೋಹನ ಚೂಂತಾರು ಹಾಗೂ ಕಟ್ಟಡ ನಿರ್ಮಾಣದ ಗುತ್ತಿಗೆದಾರ ಝಿಯಾರ್ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಹಿರಿಯ ಗೃಹರಕ್ಷಕ ಸುಂದರ ಪಾಲೋಳಿ ಸ್ವಾಗತಿಸಿ, ಕಡಬ ಗೃಹರಕ್ಷಕ ದಳದ ಘಟಕಾಧಿಕಾರಿ ತೀರ್ಥೇಶ್ ಅಮೈ ವಂದಿಸಿದರು. ಸುಕೇಶ್‌ಕುಮಾರ್ ನಿರೂಪಿಸಿದರು.
ಕಡಬ: ಗೃಹರಕ್ಷಕದ ದಳದ ನೂತನ ಕಚೇರಿ ಕಟ್ಟಡ ಉದ್ಘಾಟನೆ
ಗೃಹರಕ್ಷಕರು ಸಮಾಜಕ್ಕಾಗಿ ದುಡಿಯುತ್ತಿದ್ದಾರೆ: ಡಾ|ಚೂಂತಾರು
RELATED ARTICLES