ಕಡಬ: ರಾಮ ಕುಂಜದ ಖಾಸಗಿ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳಿಗೆ ಉಪನ್ಯಾಸಕರು ಒಬ್ಬರು ಹಿಗ್ಗ ಮುಗ್ಗ ಥಳಿಸಿದ ಪರಿಣಾಮ ಗಾಯಗೊಂಡ ವಿದ್ಯಾರ್ಥಿ ಕಡಬ ತರಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ನವೆಂಬರ್ 20ರಂದು ನಡೆದಿದೆ. ದ್ವಿತೀಯ ಪಿಯುಸಿ ಕವನ್ ಆಸ್ಪತ್ರೆಗೆ ದಾಖಲಾಗಿರುವ ವಿದ್ಯಾರ್ಥಿ.
ರಾಮ ಕುಂಜ ಖಾಸಗಿ ಕಾಲೇಜಿಗೆ ವಿದ್ಯಾರ್ಥಿಗಳಿಬ್ಬರು ಬೈಕನ್ನು ತಂದಿದ್ದಾರೆ. ಇದೇ ಈ ವಿಚಾರಕ್ಕೆ ಉಂಟಾದ ಗಲಾಟೆ, ತೀವ್ರ ಸ್ವರೂಪ ಪಡೆದುಕೊಂಡಿದೆ. ಬೈಕ್ ವಿಚಾರ ಪ್ರಶ್ನೆ ಮಾಡಿದ ಉಪನ್ಯಾಸಕ ಬುಧವಾರ ಮುಂಜಾನೆ ವೇಳೆ ಹೊಡೆದಿರುವುದಾಗಿ ಆರೋಪಿಸಲಾಗಿದೆ. ವಿದ್ಯಾರ್ಥಿ ಹೇಳಿಕೆ ನೀಡಿರುವ ಪ್ರಕಾರ ಎಂಟು ವಿದ್ಯಾರ್ಥಿಗಳಿಗೆ ಹೊಡೆದಿರುವುದಾಗಿ ಆರೋಪಿಸಲಾಗಿದೆ. ಕಡಬ ಪೊಲೀಸರು ತಡೆ ರಾತ್ರಿ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುವ ಸಂದರ್ಭದಲ್ಲಿಯೂ ಉಪನ್ಯಾಸಕ ಆಸ್ಪತ್ರೆಯಲ್ಲಿದ್ದರು ಎನ್ನಲಾಗಿದೆ. ಆಗ ಸ್ಥಳದಲ್ಲಿದ್ದ ಯುವಕರ ಗುಂಪು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಕೆಲ ಹೊತ್ತು ವಾಗ್ವಾದ ನಡೆದಿದೆ ಎನ್ನಲಾಗಿದೆ.