Monday, July 15, 2024
Homeಮೂಡುಬಿದಿರೆಕಡಂದಲೆ: ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಪುಸ್ತಕ, ಬ್ಯಾಗ್ ಹಾಗೂ ಇತರ...

ಕಡಂದಲೆ: ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಪುಸ್ತಕ, ಬ್ಯಾಗ್ ಹಾಗೂ ಇತರ ಪರಿಕರಗಳ ವಿತರಣೆ

ಮೂಡಬಿದಿರೆ :ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆ, ಕಡಂದಲೆ.
ಹಳೆ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಹಾಗೂ ಆಕಾಂಕ್ಷ ಚಾರಿಟಬಲ್ ಟ್ರಸ್ಟ್ ಪುತ್ತೂರು ಸಹಯೋಗದೊಂದಿಗೆ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಪುಸ್ತಕ, ಬ್ಯಾಗ್ ಹಾಗೂ ಇತರ ಪರಿಕರಗಳ ವಿತರಣಾ ಕಾರ್ಯಕ್ರಮದ ಉದ್ಘಾಟನೆಯನ್ನು ಸುಚರಿತ ಶೆಟ್ಟಿ KMF ಅಧ್ಯಕ್ಷರು ನೆರವೇರಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ದಿನಕರ ಕುಂಭಾಶಿರವರು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಜೆಸಿಐ ಮುಂಡ್ಕೂರು ಭಾರ್ಗವದ ಅಧ್ಯಕ್ಷರಾಗಿರುವ ಗಣೇಶ್ ಆಚಾರ್ಯ, ಆಡಳಿತ ಮಂಡಳಿ ಸದಸ್ಯರಾಗಿರುವ ವೆಂಕಟೇಶ್ ರಾವ್, ವೆಂಕಟೇಶ್ ನಾಯ್ಕ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿರುವ ಸುರೇಂದ್ರ ಭಟ್ ರವರು, ಪಾಲಡ್ಕ ಗ್ರಾಮ ಪಂಚಾಯಿತಿಯ ಸದಸ್ಯರಾಗಿರುವ ಜಗದೀಶ್ ತೊಂದಡ್ಪು, ದಿನೇಶ್ ಕಂಗಾಯಿ ಮತ್ತು ಕಾಂತಿ ಶೆಟ್ಟಿ ಹಾಗೂ ದಂಡುಮನೆ ಚಂದ್ರಶೇಖರ್ ಶೆಟ್ಟಿರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಾಗೂ ಹಲವಾರು ಹಳೆ ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಶಾಲೆಯ ಆಂಗ್ಲ ಭಾಷೆ ಶಿಕ್ಷಕರಾಗಿರುವ ಸುಧಾಕರ ಪೋಸ್ರಾಲ್ ನೆರವೇರಿಸಿದರು. ಬಂದಂತಹ ಎಲ್ಲಾ ಅತಿಥಿ ಅಭ್ಯಾಗತಗರಿಗೆ ಸ್ವಾಗತವನ್ನು ವಿಜ್ಞಾನ ಶಿಕ್ಷಕರಾದ ಸಂಪತ್ ರಾಜ್ ರವರು ಹಾಗೂ ವಂದನಾರ್ಪಣೆಯನ್ನು ಚಂದ್ರಕಲಾ ರವರು ನೆರವೇರಿಸಿದರು.

RELATED ARTICLES
- Advertisment -
Google search engine

Most Popular