Wednesday, September 11, 2024
Homeಪುತ್ತೂರುಕಡೇಶಿವಾಲಯ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

ಕಡೇಶಿವಾಲಯ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

ಕಡೇಶಿವಾಲಯ ಸಂಪನ್ಮೂಲ ಕೇಂದ್ರದ ವತಿಯಿಂದ ಕಿರಿಯ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ 2024-25ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯ ವಿವಿಧ ಸ್ಪರ್ಧೆಗಳು, ಕಡೆಶೀವಾಲಯ ದ.ಕ.ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನೇತೃತ್ವದಲ್ಲಿ ನಡೆಯಿತು.

ಕಡೆಶೀವಾಲಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್. ರಾವ್ ಕಾರ್ಯಕ್ರಮ ಉದ್ಘಾಟಿಸಿದರು.

ಶಾಲಾ ಎಸ್.ಡಿ,ಎಂ.ಸಿ. ಅಧ್ಯಕ್ಷ ಹರಿಶ್ಚಂದ್ರ ಎಂ. ಅಧ್ಯಕ್ಷತೆ ವಹಿಸಿದರು.

ಬಂಟ್ವಾಳ ತಾಲೂಕು ಮಕ್ಕಳ ಕಲಾ ಲೋಕದ ಅಧ್ಯಕ್ಷ ರಮೇಶ ಎಂ. ಬಾಯಾರು, ಕಡೇಶಿವಾಲಯ ಶಾಲಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮಾಧವ ರೈ ಭಂಡಸಾಲೆ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುರೇಶ್ ಕನ್ನೊಟ್ಟು, ನಿವೃತ್ತ ಮುಖ್ಯ ಶಿಕ್ಷಕರಾದ ಸರಸ್ವತಿ ಕಾರಂತ, ಶಿವರಾಮ ಭಟ್ ನೆಡ್ಲೆ, ಭವಾನಿ ಗಿರಿಯಪ್ಪ ಗೌಡ, ಜಿಲ್ಲಾ ಚಿತ್ರಕಲಾ ಶಿಕ್ಷಕ ಸಂಘದ ಚೆನ್ನ ಕೇಶವ ಪೆರ್ನೆ, ಗಣ್ಯರಾದ ಬಿ. ಕಿಟ್ಟಣ್ಣ ಶೆಟ್ಟಿ ಕುರುಂಬ್ಲಾಜೆ, ಗಣೇಶ ಶೆಟ್ಟಿ, ಹಾಗೂ ಶಾಲಾ ಎಸ್.ಡಿ.ಎಂ.ಸಿ ಸದಸ್ಯರು ಉಪಸ್ಥಿತರಿದ್ದರು.

ಕ್ಲಸ್ಟರ್ ನ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧಿಗಳಾಗಿ ಭಾಗವಹಿಸಿದರು.

ತೀರ್ಪುಗಾರರಾಗಿ ಕೆದಿಲ ಕ್ಲಸ್ಟರ್ ವಿವಿಧ ಶಾಲಾ ಶಿಕ್ಷಕರು ಸಹಕರಿಸಿದರು. ಕಡೇಶಿವಾಲಯ ಶಾಲಾ ಶಿಕ್ಷಕ ಶಿಕ್ಷಕಿಯರು, ಹಿರಿಯ ವಿದ್ಯಾರ್ಥಿಗಳು ಸಹಕರಿಸಿದರು.

ಮುಖ್ಯೋಪಾಧ್ಯಾಯ ಬಾಬು ಪೂಜಾರಿ ಕೆ ಸ್ವಾಗತಿಸಿ. ಸಮೂಹ ಸಂಪನ್ಮೂಲ ವ್ಯಕ್ತಿ ಸುಧಾಕರ ಭಟ್ ಪ್ರಸ್ತಾಪಿಸಿ. ಶಿಕ್ಷಕಿ ದಿವ್ಯ ವಂದಿಸಿ,ಸಹ ಶಿಕ್ಷಕಿ ಪ್ರೇಮ ಕಾರ್ಯಕ್ರಮ ನಿರೂಪಿಸಿದರು ನಿರೂಪಿಸಿದರು.

RELATED ARTICLES
- Advertisment -
Google search engine

Most Popular